ಜಯತೇ ಜಯತೇ

ಜಯತೇ ಜಯತೇ

ಮೈಸೂರಿನಿಂದ ಬೆಂಗಳೂರಿಗೆ trainನಲ್ಲಿ ಬರುವುದೇ ಒಂದು ಸುಗ್ಗಿ! ಇಲ್ಲಿ ಹಳೇ ಸ್ನೇಹಿತರು ಸಿಕ್ತಾರೆ, ಮಂಡ್ಯ ದಾಟುವ ತನಕ ಹೊಲ ಗದ್ದೆ ಒಂದಿಷ್ಟು ಗಂಟೆ ಅನೇಕ ವಿಷಯಗಳ ಚರ್ಚೆ ಮತ್ತೆ ಹೊಸ ಜನರನ್ನು ಮಾತಾಡಿಸುವ ಅವಕಾಶ! ಮಹಾತ್ಮನ ದೊಡ್ಡ banner ನೋಡಿದ್ದು ಕೂಡ ಹೀಗೆಯೇ. ಯಾರು ಗುರು ಇವನು ಕೂದಲು ಬಿಟ್ಕೊಂಡು ಹಿಂಗ್ಅವನೆ ಅಂತ ನನ್ನ ಸ್ನೇಹಿತನ ಕೇಳಿದ್ರೆ "ಮಗ ನಿಂಗೆ ಗೊತಿಲ್ವಾ?? ಸ್ವಾಮೀಜಿ ಫುಲ್ ಫೇಮಸ್ ಮಗ ಒಂದ್ ಸಾರಿ ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ದ! ಅಷ್ಟೇ ಆಮೇಲೆ ನಾನು ಮರೆತೇ ಅವನು ಮರೆತ. ಮತ್ತೆ ಮಹಾತ್ಮ ಕಾಣಿಸಿದ್ದು ಟೀವೀಯಲ್ಲಿ! ಹೀಗೇಕೆ ಯಾಕೆ ಹಿಂಗೆ ಮಾಡ್ತಾರೆ ?? ಎಂಬ ಪ್ರಶ್ನೆ ನನ್ನಲ್ಲಿ ಬರಲಿಲ್ಲ! ಯಾಕೆಂದರೆ ಕಣ್ಣಾರೆ ಚಿಲ್ಟು ಪುಲ್ಟು ಸ್ವಾಮೀಜಿಗಳ ಮಹಾತ್ಮೆ ನೋಡಿದ್ದ ನನಗೆ ಇದು ಆಶ್ಚರ್ಯವೇನಾಗಿರಲಿಲ್ಲ!


ಎರಡು ಪ್ರಸಂಗಗಳನ್ನು ನಿಮ್ಮೊಡನೆ ಹಂಚಿ ಕೊಳ್ಳುತೀನೀ. ನಮ್ಮ ಹಳ್ಳಿಯಲ್ಲಿ ಇದೆ ಒಂದು ಪುಟ್ಟ ಭಜನಾ ಮಂದಿರ. ಅಲ್ಲಿ ಪ್ರತೀವಾರವೂ ರಾಮ ಭಜನೆ, ಹರಿಕಥೆ ನಡೆಯುವುದುಂಟು. ಅಲ್ಲಿಗೆ ಒಬ್ಬ ಸ್ವಾಮಿಗಳು ಇರುವರು. ಊರವರು ಹೇಳುವ ಪ್ರಕಾರ ಈತನಿಗೆ ಹಿಂದೆ ಮುಂದೆ ಯಾರು ಇಲ್ಲ. ಹಿಮಾಲಯದಲ್ಲಿ ತಪ್ಪಸ್ಸು ಮಾಡಿ ಇಲ್ಲಿಗೆ ಬಂದಿದ್ದಾನೆ(ಇಲ್ಲಿಗೆ ಯಾಕೆ ಬಂದ ನನ್ನ ಕೇಳ್ಬೇಡಿ :)) ಚಿಕ್ಕವನಿದಾಗ ಅಜ್ಜಿ ಹೇಳಿಕೊಟ್ಟ ಮಾತು ಅವರು ಸ್ವಾಮಿಗಳು ಅವರನ್ನು ಎಲ್ಲಿ ನೋಡಿದರು ಅವರ ಕಾಲಿಗೆ ನಮಸ್ಕಾರ ಮಾಡಬೇಕು.  ಅಂದಿನಿಂದ ಅವರನ್ನು ಎಲ್ಲಿ ನೋಡಿದರು ಕಾಲಿಗೆ ಬೀಳುತಿದ್ದೆ ಆ ಘಟನೆ ನಡೆಯುವ ತನಕ! ಅಂದು ನಮ್ಮ ದೊಡ್ಡ ಮನೆಯಲ್ಲಿ ಬಾಡಿನೂಟ. ಸಂಭಂದಿಕರು, ಸ್ನೇಹಿತರು ಅಪ್ಪ ಅಮ್ಮ, ತಾತ, ಮಾವ ಎಲ್ಲರ ಊಟ ಮುಗಿದಿತ್ತು. ಆದರೆ ತಾತನ ಕೋಣೇಯಲ್ಲಿ ಅರ್ಧ ಬಾಗಿಲು ಹಾಕಿ ವಿಶೇಷ ಅತಿಥಿಗಳಿಗೆ ಊಟ ನಡೆಯುತಿತ್ತು ಎಂದಿನಂತೆ ನನಗೆ ಕೆಟ್ಟ ಕುತೂಹಲ. ಅಜ್ಜಿಯ ಕೈ ಬಿಡಿಸಿ ಕೊಂಡು ಅಲ್ಲಿಗೆ ನುಗ್ಗಿದೆ ನೋಡಿದ್ರೆ ಮಹಾತ್ಮರು. ಎಲೆಯ ಮೇಲೆ ರಾಗಿ ಮುದ್ದೆ ಹಾರುವುದು ಜಿಗಿಯುವುದು ಓದುವುದು ಎಲ್ಲ ಸ್ವಲ್ಪ ಜಾಸ್ತಿಯೇ ಇದೆ. ಈ ಘಟನೆ ನಡೆದ ಮೇಲೆ ನಾನೆಂದೂ ಅವರ ಕಾಲಿಗೆ ಬೀಳಲಿಲ್ಲ. ಅಜ್ಜಿ ಕೇಳಿದರೆ ಇಂದಿಗೂ ಅದೇ ಉತ್ತರ " ನಮ್ಮ ಮಿಸ್ ಹೇಳಿಕೊಟ್ಟಿದಾರೆ ಸ್ವಾಮೀಜಿ ಅಂದರೆ vegetarians. ಅವರಿಗೆ ಎಲ್ಲದರ ಮೇಲೆ ಹಿಡಿತವಿರ್ತ್ತದೆ ಹೀಗೆ ಎಲ್ಲಿ ಅಂದ್ರೆ ಅಲ್ಲಿ ಎಲೆ ಹಾಸ್ಕೊಂಡು ಸಿಕ್ಕಿದನ್ನೆಲ್ಲ ತಿನ್ನೋದಿಲ್ಲ! ಅವನು ಕಳ್ಳ ಸ್ವಾಮಿ ನಾನ್ಯಾಕೆ ಅವನ ಕಾಲ್ಗೆ ಬೀಳಲೀ."


ಪ್ರಸಂಗ ಎರಡು! ಕೊಲ್ಲೂರಿನಿಂದ ಸಿಗನ್ಧೂರಿಗೆ ಬಂದು ತಲುಪಿದ್ದು ರಾತ್ರಿ ಎಂಟು ಘಂಟೆಗೆ! ಈ ಜಾಗದ ಬಗ್ಗೆ ಹೇಳಬೇಕೆಂದರೆ ಇಲ್ಲಿಯ ಚೌಡೇಶ್ವರಿ ದೇವಸ್ಥಾನವಿರುವುದು ಕಾಡಿನ ಮಧ್ಯದಲ್ಲಿ! ಎರಡು ಕಿಲೋ ಮೀಟರ್ ದೂರದಲ್ಲಿ ಶರಾವತಿ backwatersನ ಲಾಂಚರ್ ಯಾರ್ಡ್! ದೇವಸ್ಥಾನದ ಆಸು ಪಾಸಿನಲಿರುವುದು ಒಂದು ಹೊಟೆಲ್! ಮಲಗಲಿಕ್ಕೆ ದೇವಸ್ಥಾನದ ಒಳಗೆ ಜಾಗವುಂಟು! ಸ್ನಾನಕ್ಕೆ ಜಾಗ ಇಷ್ತ್ಟು ಬಿಟ್ಟರೆ ಸುತ್ತ ಮುತ್ತ ಬೇರೇನು ಇಲ್ಲ! ಬೆಳಗಿನ್ನ ಜಾವ ನಾಲ್ಕೂವರೆ ಗಂಟೆಗೆ ಒಂದು ಪೂಜೆ ಮತ್ತೆ ಪೂಜೆ ನಡೆಯುವುದು ಬೆಳಗ್ಗೆ ಎಂಟು ಘಂಟೆಗೆ.


ಮೂರು ಜನ ಸ್ನೇಹಿತರು ಹೊಟ್ಟೆಗೆ ಮೊದಲು ಸಮಾಧಾನ ಮಾಡಿ ರೂಮು ಹಿಡಿಯಲು ಹೊರೆಟವು ಹಾಗೆ ಹುಡುಕುತ್ತಾ ಧರ್ಮಾಧಿಕಾರಿಗಳ ರೂಮಿಗೆ ನುಗ್ಗಿಬಿಟ್ಟೆವು. ನಾಲ್ಕಾರು ಮಂದಿ ಅಲ್ಲಿ ಕೂತು ತಮ್ಮ ಕಷ್ಟ ಸುಖ ಹೇಳಿಕೊಳ್ಳುತಿದ್ದರು. ಇಲ್ಲಿಯಾಕೆ ಕರ್ಕೊಂಡು ಬಂದೆ ಅಂತ ನನ್ನ ಸ್ನೇಹಿತನಿಗೆ ಗಿಂಡಿದೆ! ಅವನೋ ನಂಗೇನೂ ಗೊತ್ತೋ ಅಂತ ಹೇಳಿದ! ಅವರನ್ನೆಲಾ ಕಳಿಸಿ ನಮ್ಮತ್ತ ನೋಡಿ ನೀವು ಬೇರೆ ಊರಿಂದ ಬಂದಿದೀರಾ ಅಂತ ಕೇಳಿದರು. ಹೌದೆಂದು ಹೇಳಿದಕ್ಕೆ ಇಲ್ಲೇ ಹೊರಗೆ ಮಲಗಲಿಕ್ಕೆ ವ್ಯವಸ್ಥೆ ಇದೆ ಎಂದು ಹೇಳಿದರು. ಅವರ ಕೊಠಡಿಯ ಹೊರಗೆ ಮೂವರು ಮಲುಗಲು ಸಿದ್ಧತೆ ನಡೆದಿತ್ತು! ಹೊರಗೆ ಬಂದ ಧರ್ಮಾಧಿಕಾರಿಗಳು ಸ್ವಲ್ಪ ಒಳಗೆ ಬನ್ನಿ ಎಂದು ಕರೆದರೂ.


ಕೈಲಿದ್ದ ಚೀಲಗಳನ್ನು ನೋಡಿ ನಮಗೆ ಗಾಬರಿ ಆಯ್ತು ನಾಲ್ಕು ಚೀಲದ ತುಂಬಾ ಹಣ! ಅಷ್ಟು ದುಡ್ಡನ್ನು ನಮ್ಮ ಮೂವರ ಮುಂದೆ ಸುರಿದು ಇದನ್ನು seperate ಮಾಡಿ ಒಂದು ಚೀಟಿಯಲ್ಲಿ ಲೆಕ್ಕ ಬರೆದು ಅಲ್ಲಿರುವ cupboardನಲ್ಲಿ ಇಟ್ಟುಬಿಡಿ ಎಂದು ಹೇಳಿ ತಮ್ಮ roomಗೆ ಹೋಗಿ ಮಲಗಿದರು. ನಮಗೊ ಆಶ್ಚರ್ಯ ಅರ್ರೇ ರೇ ಇಷ್ಟೊಂದು ದುಡ್ಡು, ಎಲ್ಲ ಭಕ್ತರ ಕಾಣಿಕೆ ಹಣ! ನಮ್ಮ ಅಮ್ಮನ ಆಣೆಗೂ ಅಷ್ಟೊಂದು ದುಡ್ಡು ನೋಡಿರಲಿಲ್ಲ. ಆದರೆ ಮನಸ್ಸು ಕೊಂಚವೂ ಕದಲಿಲ್ಲ. ಲಕ್ಷದ ಮೇಲಿತ್ತು ಲೆಕ್ಕ. ನಮಗೊ ಎಲ್ಲ ಎಣಿಸಿ ಇಡುವವರೆಗೂ ಭಯ. ಎರಡು ತಾಸಿನಲ್ಲಿ ಕೆಲಸ ಮುಗಿಸಿ ಮಲಗಿದೆವು. ನಾಲ್ಕು ಘಂಟೆಗೆ ಧರ್ಮಾಧಿಕಾರಿಗಳು ಬಂದು ನಮನೆಲ್ಲ ಎಬ್ಬಿಸಿ ಸ್ನಾನಕ್ಕೆ ಹೋಗಲು ಹೇಳಿದ್ರು! ನನ್ನ ಇಡೀ ಜೀವನದಲ್ಲಿ ಇದೊಂದು ಮರೆಯಲಾಗದ ಘಟನೇ. ಧೈರ್ಯ ಮಾಡಿ ಅವರನ್ನ ಕೇಳಿದೆ ಎನ್ ಸರ್ ಇಲ್ಲಿ ಯಾರು security guardಗಳು ಇಲ್ಲ ಮತ್ತೆ ಇಷ್ಟೊಂದು ದೊಡ್ಡ ಜಾಗ ನೀವೇ ನೋಡ್ಕೊತೀರಾ?? ಆತ ಹೇಳಿದಿಷ್ಟು ದೇವರ ದುಡ್ಡಿಗೆ ಯಾಕಪ್ಪಾ ಕಾವಲು?? ಒಳ್ಳೇದು ಕೆಟ್ಟದು ಎಲ್ಲ ಮನಸಲ್ಲಿ ಇರ್ತದೆ. ನೀನು ಒಳ್ಳೇದು ಮಾಡಿದ್ರೆ ಅದು ನಿಂಗೆ ನಿಧಾನಕ್ಕೆ ವಾಪಸ್ ಬರ್ತದೆ ಕೆಟ್ಟದ್ದು ಮಾಡಿದ್ರೆ ಬೇಗ ವಾಪಸ್ ಬರ್ತದೆ. ಇಷ್ಟು ಮಾತಡಿ ಅಲ್ಲಿಂದ ಹೊರೆಟೆವು. ಗಮನಿಸಬೇಕಾದ ಅಂಶ ಎಂದರೆ ಈ ಧರ್ಮಾಧಿಕಾರಿಗಳ banner ನಿಮಗೆ ಚೌಡೇಶ್ವರಿ ದೇವಸ್ಥಾನದ ಸುತ್ತ ಮುತ್ತಾಲೆಲ್ಲೂ ಕಾಣುವುದಿಲ್ಲ ಆದರೆ ಬರುವ ಜನರ ಬಾಯಲೆಲ್ಲ ಅವರದೇ ಮಾತು.


ಮಾಯೆಯ ಮಾಲೆಯಲ್ಲೇ ನೋಟುಗಳು ತುಂಬಿ ತುಳುಕುತಿರುವಾಗ ಇವರ ಮಹಾತ್ಮೆಗಳು ತೀರಾ ಚಿಕ್ಕದು. ಮುಂದಿನ ಸಲ ಯಾರಾದರೂ ಸ್ವಾಮಿಗಳು ಎದುರಿಗೆ ಸಿಕ್ಕಾಗ ಬನ್ನಿ ಸರ್ ನಮ್ಮನೇಲಿ ಒಳ್ಳೇ ಊಟ ಇದೆ ಅಂತ ಕೇಳೋಣ ಅಂತಿದೀನಿ! ನೀವೇನಂತೀರಿ??


ನಿಮ್ಮವನು
 ನಾನು

Rating
No votes yet

Comments