ಜನರ ಪ್ರಣಾಳಿಕೆ

ಜನರ ಪ್ರಣಾಳಿಕೆ

ಮಾರ್ಚ್ 28, 2010 ರಂದು ನಡೆಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳೊಂದಿಗೆ ಚರ್ಚೆಗಾಗಿ ಬೆಂಗಳೂರು ಜನರ ವೇದಿಕೆ.

 

ಪರಿಚಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮಾರ್ಚ್ 28, 2010 ರಂದು ಘೋಷಿಸಲಾಗಿದೆ 35 ವರ್ಷಗಳಿಂದ ನಗರದಲ್ಲಿ ಚುನಾಯಿತ ಸಂಸ್ಥೆ ಇಲ್ಲದಿರುವಿಕೆಯಿಂದ ತಮ್ಮ ನಗರದ ಕುರಿತು ತೀರ್ಮಾನಿಸುವ ಬೆಂಗಳೂರು ನಿವಾಸಿಗಳ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗಿದೆ. ಈ ಅವದಿಯಲ್ಲಿ ಅತ್ಯಧಿಕವಾಗಿ ಕೇಂದ್ರೀಕೃತವಾದ ಹಾಗೂ ಹೊಣೆಗಾರಿಕೆ ಇಲ್ಲದ ಅದಿಕಾರಶಾಹಿ ಆಡಳಿತವು ತಮ್ಮ ಆಳ್ವಿಕೆ ನಡೆಸಿ, ಸ್ಥಳಿಯ ನಿರ್ಣಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶವನ್ನು ನಾಗರೀಕರಿಗೆ ಇಲ್ಲದಾಗಿಸಿತು. ಇದರ ಪ್ರಭಾವವನ್ನು ಎಲ್ಲೆಡೆ ಕಾಣಬಹುದು. ಯೋಜನೆಗಳು ಹಾಗೂ ಕಾಮಗಾರಿಗಳಿಗೆ  ಸಂಪೂರ್ಣವಾಗಿ ಪಾರದರ್ಶಕ ರಹಿತ ರೀತಿಯಲ್ಲಿ ಹಣ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಹೂಡಿಕೆ ಮಾಡಿ, ಮೂಲಭೂತ ಸೇವೆಗಳ ಗುಣಮಟ್ಟವು ಗಮನಾರ್ಹವಾಗಿ ಇಳಿಮುಖವಾಗಿರುವುದನ್ನು ನೋಡಬಹುದು.

 

ಸ್ಥಳೀಯ ಸಂಸ್ಥೆಯೊಂದಗಿನ ನಮ್ಮ ಸಂಬಂದವನ್ನು ಪುನರ್ ಸ್ಥಾಪನೆ ಮಾಡಿ ನಮ್ಮ ನಗರವನ್ನು ಮುನ್ನೆಡೆಸುವ ಮತ್ತು ಪುನರ್ ಸಂಘಟಿಸುವ ಅವಕಾಶವು ಇದೀಗ ಒದಗಿ ಬಂದಿದೆ. ನಮ್ಮ ನಗರವನ್ನು ರೂಪಿಸುವಲ್ಲಿ ನಗರಪಾಲಿಕೆಯ ಚುನಾವಣೆಗಳು ಪ್ರಮುಖ ಅಂಶವಾಗಿದೆ ನಾವು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡದೇ ಇದ್ದಲ್ಲಿ, ಅದರ ಪರಿಣಾಮಗಳಿಗೆ ನಾವೇ ಹೊಣೆ ಆಗುತ್ತೇವೆ. ಆಗಾಗಿ ಜನರ ನಿಜವಾದ ಅಗತ್ಯ ವಿಷಯಗಳ ಬಗ್ಗೆ ಅಭ್ಯರ್ಥಿಗಳಿಂದ ಸರಿಯಾದ ಸಮ್ಮತಿ ಪಡೆದು ಚುನಾಯಿಸಿದರೇ, ಅವರ ಅಧಿಕಾರದ ಅವಧಿಯಲ್ಲಿ ಚುನಾವಣೆಯ ಆಶ್ವಾಸನೆಗಳನ್ನು ಪೂರೈಸುವ ಸಾಧ್ಯತೆ ಇರುತ್ತದೆ.

ಈ ನಿಟ್ಟಿನಲ್ಲಿ, ನಗರದ ಹಲವಾರು ಸಮುದಾಯಗಳೊಡನೆ ನಗರಕ್ಕೆ ಸಂಬಂದಿಸಿದ ವಿಷಯಗಳನ್ನು ಚರ್ಚಿಸಿ, ಜನ ಪ್ರಣಾಳಿಕೆಯನ್ನು ರೂಪಿಸಲು ನಗರದ ಅನೇಕ ಸಂಘ ಸಂಸ್ಥೆಗಳು ಹಲವಾರು ಸುತ್ತಿನ ಸಭೆಗಳಲ್ಲಿ ಚರ್ಚೆಗಳನ್ನು ನಡೆಸಿದ ಆಧಾರದ ಮೇಲೆ, ಈ ಪ್ರಣಾಳಿಕೆ ಸಿದ್ದಪಡಿಸಲಾಗಿದೆ. ಬೆಂಗಳೂರಿನ ಜನರಿಗೆ ಹಕ್ಕಾಗಿ ದೊರೆಯಬೇಕಾದ ಹಲವಾರು ಪ್ರಗತಿಪರ ಕಾರ್ಯನೀತಿಗಳು ಕ್ರಮಗಳ ಸಾರವೇ ಈ ಪ್ರಣಾಳಿಕೆ.

BBMP ಚುನಾವಣೆಯಲ್ಲಿ ಭಾಗವಹಿಸುವಾಗ ಸಾದ್ಯವಾದಷ್ಟು ಸರಿಯಾದ ಆಯ್ಕೆಯನ್ನು ಮಾಡಲು ಮತದಾರರಾಗಿ, ಅಭ್ಯರ್ಥಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ತಾವು ಈ ಪ್ರಣಾಳಿಕೆಯನ್ನು ಬಳಸಬೇಕೆಂದು ನಮ್ಮ ಒತ್ತಾಸೆ.

 

ಈ ಕೆಳಗಿನವುಗಳನ್ನು ಕ್ಲಿಕ್ಕಿಸಿ ಅದಕ್ಕೆ ಸಂಬಂದಪಟ್ಟ ಪ್ರಣಾಳಿಕೆ ಸಿಗಲಿದೆ.

ಆಡಳಿತ

ಸಾರ್ವಜನಿಕ ಆರೋಗ್ಯ

ಅಡೆತಡೆ ರಹಿತ ವಾತಾವರಣ

ಸಾರ್ವಜನಿಕ ಸಂಚಾರ

ಸಂಸ್ಕೃತಿ

ಉದ್ಯಾನಗಳು ಮತ್ತು ತೆರೆದ ಸ್ಥಳಗಳು

ಪಾರಂಪರಿಕ ಸ್ಥಳಗಳು

ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

ಸಾರ್ವಜನಿಕ ಶಿಕ್ಷಣ

ಸಾಮಾಜಿಕ ನ್ಯಾಯ ಮತ್ತು ಜೀವನಾದಾರ

ಅಸಂಘಟಿತ ಕಾರ್ಮಿಕರ ರಕ್ಷಣೆ

ಹಿರಿಯರ ಕ್ಷೇಮಾಬಿವೃದ್ದಿ

ಬಾಲ ಕಾರ್ಮಿಕತೆ

ಮಕ್ಕಳ ಹಕ್ಕುಗಳು

ನಗರದ ಬಡತನ

ಪ್ರಾಣಿಗಳ ಕ್ಷೇಮಾಬಿವೃದ್ದಿ

ತುರ್ತು ಸಂದರ್ಭಗಳಲ್ಲಿ

ತ್ಯಾಜ್ಯ ನಿರ್ವಹಣೆ

ಸಂಪರ್ಕಕ್ಕಾಗಿ

 

ಪೂರ್ಣಪ್ರಣಾಳಿಕೆಯನ್ನು ವೀಕ್ಷಿಸಲು ಕ್ಲಿಕ್ಕಿಸಿ

 

ಹೆಚ್ಚಿನ ಮಾಹಿತಿಗಾಗಿ  http://janaravedike.wordpress.com/ ಗೆ ಬೇಟಿ ನೀಡಿ


Rating
No votes yet

Comments