ನಾನು ಯಾರು?

ನಾನು ಯಾರು?

ಅಹಂ ಬ್ರಹ್ಮಾಸ್ಮಿ ಎಂಬ ಮಾತು ನಿಜವೇ? 


ಸುಮ್ಮನೆ ಯೋಚಿಸಿ..... ನಮ್ಮನ್ನು ಹೇಗೆ ಗುರಿತಿಸಿಕೊಳ್ಳೋದು? ನಮ್ಮ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ತನ್ನ ಕಾಯಕದಲ್ಲಿ, ರಚನೆಯಲ್ಲಿ "ಪೂರ್ಣ" . ಇಂಥಹ ಪೂರ್ಣಗಳ ಸಂಯೋಜನೆಯಿಂದ ಇಡೀ ದೇಹ ರೂಪುಗೊಂಡಿದೆ. ಅದಕ್ಕೆ ಪ್ರತ್ಯೇಕ ಅಸ್ಥಿತ್ವವೂ ಬಂದಿದೆ. ಒಂದು ಒಕ್ಕೂಟವ್ಯವಸ್ಥೆಯಲ್ಲಿನ ದೇಶದಂತೆ. ಈ ದೇಶ ಹೇಗೆ ಇತರ ಭೌಗೋಳಿಕ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿದೆಯೋ ಅಂತೆಯೇ ದೇಹ ಇತರ ಜೀವಿಗಳೀಂದ ಬೇರೆ., ಆದರೆ ಇವೆಲ್ಲ ಕಲ್ಪನೆಯ ’ಬೇರೆ’ ಗಳು. ನಿಜವಾಗಿ ಭೂಮಿಯೆಂಬ ಇಂದು ಇಡೀ ದೇಹದ ಒಂದು ಭಾಗವೇ ದೇಶವಿದ್ದಂತೆ ’ನಾವೂ’ ಕೂಡ ಅಲ್ಲವೇ? ಇಲ್ಲಿ ಭೂಮಿ- ಸೂರ್ಯನ ಬೆರೆಳಾದರೆ ನಾವು ಒಂದು ಜೀವಕೋಶ. ಸೂರ್ಯ ನಮ್ಮ ಗ್ಯಾಲಾಕ್ಸಿಯ ಒಂದು ಅಂಗ. ನಮಗೆ ಅಳತೆಗೆ ಸಿಗದ ಬ್ರಂಹಾಂಡ ಒಂದು ದೇಹವಾದರೆ ಅದರ ಅಂಗಾಂಗಗಳು ಈ ಗ್ಯಾಲಾಕ್ಸಿಗಳು ಅನ್ನಬಹುದೇನೋ?  ......


ಹೀಗೆ ಅತೀ ದೊಡ್ಡದರ ಭಾಗವಾದ ನಮ್ಮ ಒಂದು ಜೀವಕೋಶದಲ್ಲಿ ಇಡೀ ಬ್ರಂಹಾಂಡದ ರಚನೆಯ ಗುಟ್ಟು ಅಡಗಿದೆಯೆಂದು ನಂಬುವುದಾದರೆ ಅದನ್ನು ತಿಳಿಯುವುದು ಹೇಗೆ? ಸಮುದ್ರದಲ್ಲಿಯ ನೀರಿನೊಳಗೆ ಒಂದುಲೋಟವನ್ನು ಅದ್ದಿ ಅದರಲ್ಲಿಯ ನೀರನ್ನು ’ನಾನು’ ಎಂದು ಕರೆದುಕೊಂಡರೆ ಆ ನೀರಿಗೂ, ಅದನ್ನು ಆವರಿಸಿದ ಸಮುದ್ರದ ಹೊರನೀರಿಗೂ ಭಿನ್ನತೆಯೇನು? ........  

Rating
No votes yet

Comments