ಸಾರಿಗೆ ಹಾಗೂ ಸಂಚಾರ ಪ್ರಣಾಳಿಕೆ

ಸಾರಿಗೆ ಹಾಗೂ ಸಂಚಾರ ಪ್ರಣಾಳಿಕೆ

ನ್ಯಾಯಯುತ, ಸುಲಭಲಭ್ಯ ಹಾಗೂ ಸುಸ್ಥಿರ ಸಂಚಾರಕ್ಕಾಗಿ ಒಂದು ಪ್ರಣಾಳಿಕೆ

ಬೆಂಗಳೂರಿನ ಸಾರಿಗೆ ಹಾಗೂ ದಟ್ಟನೆಯ ಬಿಕ್ಕಟ್ಟಿಕೆ ಪ್ರತಿಕ್ರಿಯೆ 

ನಮ್ಮ ನಗರಕ್ಕೆ  ಸಂಬಂಧಿಸಿದಂತೆ ಸಂಚಾರದ ಎಲ್ಲಾ ಯೋಜನೆಗಳು, ನಿರ್ಣಯ ಕೈಗೊಳ್ಳುವಿಕೆ ಹಾಗೂ ಅನುಷ್ಠಾನದ ಯೋಜನೆಗಳು ಮುರಿದು ಬಿದ್ದಿದೆಯೆಂದೂ, ಅದನ್ನು ಸರಿ ಮಾಡುವ ಅಗತ್ಯವಿದೆಯೆಂದೂ ನಮ್ಮ ಅನಿಸಿಕೆ. ನಾವು ಕಂಡ ಈ ಪರಿಸ್ಥಿತಿಯನ್ನು ಸರಿಪಡಿಸಲು ಇರುವ ಮಾರ್ಗವಾಗಲೆಂದು ಈಪ್ರಣಾಳಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ನಾವು ಮನಗಂಡಿರುವುದೇನೆಂದರೆ:

  • ಬಾಳಲು ಯೋಗ್ಯವಾದ ನಗರದಲ್ಲಿ ಬಾಳಲು ಯೋಗ್ಯವಾದ ನೆರೆಹೊರೆ
  • ವೇಗವಾದ, ಸಮರ್ಪಕವಾದ ಹಾಗೂ ಅಗ್ಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆ 
  • ಪಾದಚಾರಿ ಹಾಗೂ ಸೈಕಲ್ ಸ್ನೇಹಿ ನಗರ
  • ದೈನಂದಿನ ಸಂಚಾರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಗಮನಾರ್ಹವಾಗಿ ಹೆಚ್ಚಿದ ಪಾತ್ರ
  • ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಬಳಕೆಯಲ್ಲಿ ತೀವ್ರವಾದ ಕಡಿತ
  • ಎಲ್ಲರೂ ಆರೋಗ್ಯಕರ ಜೀವನವನ್ನು ನಡೆಸಲು ಸ್ವಚ್ಚವಾದ ಉಚಿತ ಗಾಳಿ
  • ಮಕ್ಕಳು, ಮುದುಕರು \ಹಾಗೂ ವಿಕಲಚೇತನರು ಸುಲಭವಾಗಿ ಓಡಾಡುವಂತೆ ಸುರಕ್ಷಿತವಾದ ರಸ್ತೆಗಳು
  • ಸಹಭಾಗಿತ್ವದ, ಪ್ರಜಾತಾಂತ್ರಿಕ ಹಾಗೂ ಎಲ್ಲರನ್ನೂ ಒಳಗೊಂಡ ಸಂಚಾರದ ಯೋಜನೆ.

ಸಾರಿಗೆ ಕುರಿತಾದ ಇಂದಿನ ಮಾರ್ಗೋಪಾಯಗಳು ಹಾಗೂ ಅವುಗಳ ನ್ಯೂನತೆ:
ನಮ್ಮ ನಗರದ ಸಂಚಾರಿ ಸಂಭಂದಿತ ತೊಂದರೆಗಳ ನಿವಾರಣೆಗೆ ಅಳವಡಿಸಿಕೊಂಡ ಇಂದಿನ ಮಾರ್ಗೋಪಾಯಗಳು ಕೆಲಸ ಮಾಡುತ್ತಿಲ್ಲ. ಅದರಲ್ಲಿ ಬದಲಾವಣೆಗಳನ್ನು ತರುವವರೆಗೂ ಬದಲಾಗುವುದೂ ಇಲ್ಲ. ಸಾರ್ವಜನಿಕ ಸಾರಿಗೆಯನ್ನು ಪಕ್ಕಕ್ಕೆ ತಳ್ಳಿ ಖಾಸಗಿ ವಾಹನಗಳು ನಮ್ಮ ರಸ್ತೆಗಳಲ್ಲಿ ಅಸಾಧ್ಯವಾದಷ್ಟು ಹೆಚ್ಚಿದೆ ಇದರಿಂದ ನಮ್ಮ ಅತ್ಯಂತ ಅಮೂಲ್ಯವಾದ ಸಂಪನ್ಮೂಲಗಳಲ್ಲಿ ಒಂದಾದ ರಸ್ತೆಗಳ ಅಸಮರ್ಪಕ ಬಳಕೆಯು ಉಂಟಾಗಿದೆ. ನಗರವು ತನ್ನಪ್ರತಿಯೊಂದು ನಿವಾಸಿಗೂ ಸೇರಿರುವುದು. ರಸ್ತೆಗಳೂ ಸೇರಿದಂತೆ, ತನ್ನೆಲ್ಲ ಸಂಪನ್ಮೂಲಗಳ ಸಮಾನವಾದ ಹಂಚಿಕೆಯನ್ನು ಮಾಡುವ ಅಗತ್ಯವಿದೆ ಇದನ್ನು ಪರಿಗಣಿಸಿ.

  • ನಗರದ ೪೫% ಜನಸಂಖ್ಯೆಯನ್ನು ಅಥವಾ  ಪ್ರತಿನಿತ್ಯ ೩೮ ಲಕ್ಷ ಜನರನ್ನು ೫,೫೦೦ ಬೆ.ಮ.ಸಾ.ಸಂ ಬಸ್ ಗಳು ಒಯ್ಯುತ್ತಿವೆ.
  • ೧೭.೦೦.೦೦೦ ದ್ವಿಚಕ್ರ ವಾಹನಗಳು ೨೫% ಜನಸಂಖ್ಯೆಯನ್ನು ಒಯ್ಯುತ್ತದೆ.
  • ೫.೦೦.೦೦೦ ಕಾರುಗಳು ೭% ಜನಸಂಖ್ಯೆಯನ್ನು ಅಥವಾ ೯ ಲಕ್ಷ ಜನರನ್ನು ಒಯ್ಯುತ್ತವೆ.
  • ರಸ್ತೆಯ ಗರಿಷ್ಠ ಸ್ಥಳಗಳನ್ನು ಬಳಸುವ ಕಾರುಗಳು, ಕನಿಷ್ಠ ಸಂಖ್ಯೆಯ ಜನರನ್ನು ಒಯ್ಯುತ್ತವೆ.

 

 ಸಮಯದ ವ್ಯಯದಲ್ಲಿ ತನ್ನ ಕೆಲಸದ ಸ್ಥಳಕ್ಕೆ ಹೋಗಲು ಸಾರ್ವಜನಿಕ ಬಸ್ ನ ಬಳಕೆಯನ್ನು ಮಾಡುವ ಬೆಂಗಳೂರು ನಿವಾಸಿಯು, ಮಾರ್ಗದಲ್ಲಿ ಸಂಚರಿಸುವ ಖಾಸಗಿ ವಾಹನಗಳ ಸಲುವಾಗಿ ಹೆಚ್ಚು  ಹಣ ತೆತ್ತಬೇಕಾಗಿಲ್ಲ. ನಷ್ಟ ಅನುಭವಿಸುತ್ತಿರುವ ಹವಾನಿಯಂತ್ರಿತ ಬಸ್ ಗಳ ಅನುದಾನಕ್ಕಾಗಿ ಆಕೆ ಅದಿಕ ದರವನ್ನೂ ನೀಡಬೇಕಾಗಿಲ್ಲ. ಶಾಳೆಗೆ ಸೈಕಲ್ ನಲ್ಲಿ ಹೋಗುವ ಮಗುವು ವೇಗವಾಗಿ ಚಲಿಸುವ ಮೋಟಾರ್ ಗಾಡಿಗಳು ಒಡ್ಡುವ ಅಪಾಯಕ್ಕೂ ಹಾಗೂ ಈ ವಾಹನಗಳು ಉಗುಳುವ ವಿಷದ ಗಾಳಿಗೂ ಗುರಿಯಾಗುವ ಅವಶ್ಯಕತೆ ಇಲ್ಲ. ಹಾಗೇ, ವಯಸ್ಸಾದವರು ಹಾಗೂ ವಿಶೇಷ ಅಗತ್ಯಗಳಿರುವ ವ್ಯಕ್ತಿಗಳೂ ಸಹ ಸ್ವಚ್ಚಂದವಾಗಿ ಓಡಾಡಲು ಸಾಧ್ಯವಾಗಬೇಕು. ಯಾರೂ ಶಬ್ದ ಹಾಗೂ ವಾಯು ಮಾಲಿನ್ಯವನ್ನು ಅನುಭವಿಸಬೇಕಾಗಿಲ್ಲ ಅಥವಾ ನಮ್ಮ ಸ್ಥಳೀಯ ನೆರಹೊರೆಯನ್ನೂ ಆವರಿಸಿರುವ ಟ್ರಾಪಿಕನ್ನು ಅನುಭವಿಸಬೇಕಾಗಿಲ್ಲ.

 

ಖಾಸಗಿ ವಾಹನಗಳಿಗೆ ಹಲವಾರು ರೀತಿಯಲ್ಲಿ ನಾವು ಅನುದಾನಗಳನ್ನು ನೀಡುತ್ತಿದ್ದೇವೆ. ಅದರಲ್ಲಿ ಒಂದು ಸಂಚಾರ ಹಾಗೂ ನಿಲುಗಡೆಗಾಗಿ ರಸ್ತೆಯ ಜಾಗದ ಹೆಚ್ಚಿದ ಬಳಕೆಯ ಮೂಲಕ ನಡೆಯುತ್ತಿದೆ. ಸಾರ್ವಜನಿಕ ಬಸ್ ಸೇವೆ ಹಾಗೂ ನಡಿಗೆ, ಸೈಕಲ್ ಸವಾರಿಗಳಂತಹ ಹೆಚ್ಚು ಸಮರ್ಥ ವಿಧಾನಗಳನ್ನು ಬಳಸುವವರಿಗೆ ಹೆಚ್ಚಿನ ಪ್ರಯಾಣದ ಸಮಯದ ಮೂಲಕವೂ ಇದು ಉಚಿತವಾಗಿದೆ.

 

ದಿನೇ ದಿನೇ ಬೆಳೆಯುತ್ತಿರುವ ಖಾಸಗಿ ಸಾರಿಗೆಯಿಂದ ಉಂಟಾದ ದಟ್ಟನೆಗೆ ಪರಿಹಾರ ಹುಡುಕಲು ನಾು ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ತಮ್ಮ ಸ್ವಂತ ವಾಹನಗಳಲ್ಲಿ  ಸಂಚಾರ ಮಾಡುವ ನಮ್ಮ ನಗರದ ಸುಮಾರು ಅನುಕೂಲಸ್ಥ ಮಂದಿಯ ಸುಗಮ ಸಂಚಾರಕ್ಕಾಗಿ, ಇತರ ನಿವಾಸಿಗಳಿಗೆ ತೊಂದರೆಗಳನ್ನು ಉಂಟು ಮಾಡುತ್ತಿರುವ ಕೆಲವು ಅಪಮಾರ್ಗದ ಯತ್ನಗಳೂ ಕೆಲವು ಇದರ ಪೈಕಿ ಇದೆ. ರಸ್ತೆ ಅಗಲೀಕರಣ, ಪ್ಲೈಓವರ್ಗಳು, ಅಂಡರ್ಪಾಸ್ಗಳು, ಸಿಗ್ನಲ್ ಮುಕ್ತ ರಸ್ತೆಗಳಂತಹವು ಇದಕ್ಕೆ ಕೆಲವು ನಿರ್ದರ್ಶನಗಳು. ನಮ್ಮ ಮೆಟ್ರೋಂತಹ ಇತರ ಯೋಜನೆಗಳೂ ಅತ್ಯಂತ ದುಬಾರಿ ಹಾಗೂ ದೀರ್ಘವಾಧಿಯದಾಗಿದ್ದು, ಸಂಪೂರ್ಣಗೊಂಡಾಗ ಕನಿಷ್ಠ ಉಪಯೋಗವನ್ನು ನೀಡುವುದಾಗಿದೆ. ಈಗಿರುವ ವ್ಯವಸ್ಥೆಗಳ ಸಮರ್ಪಕ ಬಳಕೆಯತ್ತ ಈ ಯೋಜನೆಗಳು ಗಮನವನ್ನು ಹರಿಸಿಲ್ಲ. ಹೊಸ ವ್ಯವಸ್ಥೆಯ ಮಹಾ ಜಾಲದಿಂದ ದಟ್ಟೆಣೆಯು ಮಾಯವಾಗುವಂತೆ ಮಾಡಲು ಸಾದ್ಯವಿಲ್ಲವೆಂಬುದನ್ನು ನಗಣ್ಯ ಮಾಡಿದೆ. ಕಡಿಮೆ ವೆಚ್ಚದ, ಹೆಚ್ಚಿನ ವೇಗದ, ಬದಲಿ ವ್ಯವಸ್ಥೆಗಳು ಇವೆಯೆಂಬ ಸತ್ಯವನ್ನೂ ಅವು ಗಣನೆಗೆ ತೆಗೆದುಕೊಂಡಿಲ್ಲ. ಜೊತೆಗೆ, ಇದರಿಂದ ಪ್ರಭಾವಿತರಾದ ಜನರ ಜೀವನೋಪಾಯಕ್ಕೆ ಹಾನಿ ಉಂಟು ಮಾಡಿ, ನಗರದ ಹಸಿರು ಹಾಸನ್ನು ನುಂಗಿ ಹಾಕುವುದಲ್ಲದೆ, ಅದರ ಸೌಂದರ್ಯಕ್ಕೆ ಶಾಶ್ವತವಾಗಿ ಚ್ಯುತಿಯನ್ನು ತರತ್ತಿದೆ. ಹೀಗೇ, ನಮ್ಮ ನಗರದ ನಿವಾಸಿಗಳ ಜೀವನದಗುಣಮಟ್ಟವು ಅಧಃಪತನಕ್ಕೆ ಇಳಿದಿದೆ.

 

ಇದರಲ್ಲಿ ಆಳವಾಗಿ ಅಡಕವಾದ ವಿಷಯವೆಂದರೆ, ಸಂಚಾರವನ್ನು ಕುರಿತಾದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ, ಸಾರ್ವಜನಿಕ ಸಮಾಲೋಚನೆ ಇಲ್ಲದಿರುವುದು. ಈ ನಗರವನ್ನು ತನ್ನ ಮನೆಯೆಂದು ಕರೆಯುವ ಅತ್ಯಂತ ಪ್ರಮುಖ ಫಲಾನುಭವಿಯಾದ ನಿವಾಸಿಯ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ, ಈ ಯೋಜನೆಗಳು ರಪುಗೊಂಡಿವೆ. ಸಾರ್ವಜನಿಕ ಸಹಭಾಗಿತ್ವವೇನಾದರೂ ನಡೆದಿದ್ದರೆ, ಅದು ನಗರದ ನಿವಾಸಿಗಳ ಕೆಲವು ವಿಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಈರೀತಿಯ ಮೇಲ್ಪಂಕ್ತಿಯ ಸಮಾಜದ ಗಣ್ಯವರ್ಗಕ್ಕೆ ಸೇರಿದ ಯೋಜನೆಗಳು ಇನ್ನು ಮುಂದೆ ನಡೆಯದು. ಎಲ್ಲರನ್ನೂ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಯ ಭಾಗವನ್ನಾಗಿ ಮಾಡಬೇಕು. ಇದು ಅದರ ನಗರ ಅವರಿಗೆ ನಿರ್ಣಾಯಕ ದ್ಹ್ವನಿ ಇರಬೇಕಾದುದೇ!.  

ಈ ಪರಿಸ್ಥಿತಿಯಿಂದ ಹೊರಗೆ ಬರಲುದಾರಿ ಇದೆ. ಪ್ರಯಾಣದ ಮೋಟಾರೇತರ ಮಾರ್ಗೋಪಾಯಗಳು ಹಾಗೂ ವೇಗವಾದ, ಸುವ್ಯವಸ್ಥಿತವಾದ ಹಾಗೂ ಅಗ್ಗದ ಸಾರ್ವಜನಿಕ ವ್ಯವಸ್ಥೆಯ ಜೀವನಾಳದ ಸುತ್ತ ಯೋಜಿಸಲಾದ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯಿರುವ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ. ಹಲವಾರು ವಿಧಾನಗಳ ಮೂಲಕ, ಸಾರ್ವಜನಿಕ ರಸ್ತೆಗಳಿಂದ ಖಾಸಗಿ ವಾಹನಗಳನ್ನು ತೆಗೆಯುವತ್ತ ಹೆಜ್ಜೆಗಳನ್ನು ನಿರ್ಭಾವವಾಗಿ ಕೈಗೊಳ್ಳುವ ಅಗತ್ಯವಿದೆ. ಆದರೂ ಕಾರುಗಳು ಹಾಗೂ ದ್ವಿಚಕ್ರವಾಹನಗಳನ್ನು ಜನರು ಬಳಸಲುಬಯಸಿದರೆ, ಸಾರ್ವಜನಿಕ ಸ್ಥಳವನ್ನು ಬಳಸಿದುದ್ದಕ್ಕಾಗಿ ದರವನ್ನು ನಿಗದಿಪಡಿಸಬೇಕು. ಕೆಲಸದ ಮೇಲೆ ಅಥವಾ ವಿನೋದಕ್ಕಾಗಿ ಜನರು ನಗರದಲ್ಲಿ ಓಡಾಡಬೇಕೆಂದಾಗ. ಅವರ ಮೊದಲ ಆಯ್ಕೆ ಸಾರ್ವಜನಿಕ ಸಾರಿಗೆ ಆಗಬೇಕು. ಇಲ್ಲವೇ ಮೋಟಾರೇತರ ಸಂಚಾರ ವ್ಯವಸ್ಥೆಗಳಾದ ನಡಿಗೆ, ಸೈಕಲ್ ಸವಾರಿ ಅಥವಾ ಇನ್ಯಾವುದಾದರೂ ಮಾರ್ಗವನ್ನು ಆಯ್ಕೆಯನ್ನು ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಂಚಾರ ವ್ಯವಸ್ಥೆಗಳ ಯೋಜನೆ ಹಾಗೂ ವಿನ್ಯಾಸವನ್ನು ಮಾಡುವಾಗ, ವಿಕಲಚೇತರ ಅಗತ್ಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಮಾಡಬೇಕು.

ಬೆಂಗಳೂರಿನ ಭವಿಷ್ಯದ ಪೌರ ಕಾರ್ಪೋರೇಟರ್ಗಳಿಂದ ನಾವು ಬಯಸುವ ಬೇಡಿಕೆಗಳು ಕೆಳಕಂಡಂತೆ ಇವೆ:

ಪ್ರಗತಿಯ ಹಾದಿಯತ್ತ ಬೇಡಿಕೆಗಳು

1. ಸೈಕಲ್ ನ್ನು ಉತ್ತೇಜಿಸಿ- ಸೈಕಲ್ ಸವಾರಿ, ಬಸ್ ಪ್ರಯಾಣ ಹಾಗೂ ನಡೆಯೋದು; ದ್ವಿಚಕ್ರವಾಹನಗಳು ಹಾಗೂ ನಾಲ್ಕು ಚಕ್ರ ವಾಹನಗಳ ಬಳಕೆಯನ್ನು ಉತ್ತೇಜಿಸದಿರಿ.

ಪ್ರಮುಖ ನಗರಗಳ ರಸ್ತೆಗಳಲ್ಲಿ ಕೇವಲ ಬಸ್ ಗಳಿಗೆ ಮೀಸಲಿಟ್ಟ ಮಾರ್ಗಗಳನ್ನು ಮುಡಿಪಾಗಿಡುವ ಮೂಲಕ ಬಸ್ ಸಂಚಾರದ ವೇಗವನ್ನು ಹೆಚ್ಚಿಸಿ, ಅಥವಾ ಇಡೀ ರಸ್ತೆಗಳನ್ನು ಬಸ್ ಗಳಿಗೆ ಮೀಸಲಿಟ್ಟು ಇದನ್ನು ಸಾಧಿಸಿ. ಅಥವಾ ಬೇರೆ ರೀತಿಯ ಉಪಾಯಗಳನ್ನು ಹುಡುಕಿ. ದರಗಳನ್ನು ಕಡಿಮೆ ಮಾಡುವ ಮೂಲಕ, ಸಂಚಾರವನ್ನು ಅಗ್ಗವಾಗಿಡಿ. ರಸ್ತೆಗಳಲ್ಲಿ ಪಾದಾಚಾರಿಗಳುಹಾಗೂ ಸೈಕಲ್ ಸವಾರರಿಗೆಂದೇ ಮೀಸಲಿಟ್ಟ ಗುರುತು ಮಾಡಲಾದ ಸ್ಥಳಗಳ ವ್ಯವಸ್ಥೆಯನ್ನು ಮಾಡಿ. ನೆರಳು ನೀಡುವ ಮರಗಳನ್ನು ನೆಡುವ ಮೂಲಕ ಅದರ ಬಳಕೆಯನ್ನು ಆಕರ್ಷಕವನ್ನಾಗಿಸಿ. ವಾಹನ ನಿಲುಗಡೆಯನ್ನು ಹೆಚ್ಚು ದುಬಾರಿ ಮಾಡುವ ಮೂಲಕ, ನಗರದ ಕೇಂದ್ರ ಪ್ರದೇಶಗಳನ್ನು ಪ್ರವೇಶಿಸುವ ವಾಹನಗಳ ಮೇಲೆ ದಟ್ಟಣೆಯ ಕರ ವಿಧಿಸುವ ಮೂಲಕ ನೋಂದಣಿ ಸಂಖ್ಯೆ ಆಧಾರಿತ ಬಳಕೆಯ ಮೂಲಕ, ಅಥವಾ ಬೇರೆ ಮಾರ್ಗಗಳ ಮೂಲಕ, ಖಾಸಗಿ ವಾಹನಗಳ ಬಳಕೆಯನ್ನು ಮಾಡದಂತೆ ತಡೆಯಿರಿ. ಹೆಚ್ಚು ಉಪಯುಕ್ತವಾಗಿ ವಿನ್ಯಾಸಗೊಂಡ ಬಸ್ ಮಾರ್ಗಗಳನ್ನು ಪರಿಚಯಿಸಿ. ರಾಷ್ಟ್ರೀಯ ನಗರ ಸಾರಿಗೆ ಕಾರ್ಯನೀತಿಯಲ್ಲಿ ಸಾರ್ವಜನಿಕ ಸಾರಿಗೆ, ಪಾದಚಾರಿಗಳು, ಸೈಕಲ್ ಸವಾರರಿಗೆ ಸ್ವಷ್ಟವಾಗಿ ಆದ್ಯತೆಯನ್ನು ನೀಡಿದ್ದು, ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಸೂಚಿಸಿದೆ. ಯೋಜನೆ ಹಾಗೂ ಅನುಷ್ಟಾನದ ವೇಳೆಯಲ್ಲಿ, ರಾಷ್ಟ್ರೀಯ ನಗರ ಸಾರಿಗೆ ಕಾರ್ಯನೀತಿಯನ್ನು ಪಾಲಿಸಿ.

2. ಆರ್ಥಿಕವಾಗಿ ಹಾಗೂ ದೈಹಿಕವಾಗಿ ಸಾರ್ವಜನಿಕ ಸಾರಿಗೆಯು ಸುಲಭವಾಗಿ ಲಭ್ಯವಾಗುವ ವ್ಯವಸ್ಥೆಯನ್ನು ಮಾಡಿ.

ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್ ಹಾಗೂ ಶಿವಾಜಿನಗರದ ಸುತ್ತ ವ್ಯವಸ್ಥೆಗೊಂಡಿರುವ ಬೆ.ಮ.ಸಾ.ಸಂ.ನ ಪ್ರಸ್ತುತ ವ್ಯವಸ್ಥೆಯ ಮಾರ್ಗ ಬದಲಾವಣೆಯನ್ನು ಮಾಡಿ. ಎಲ್ಲಾ ಬಸ್ ನಿಲ್ದಾಣಗಳಲ್ಲೂ ಬಸ್ ಮಾಹಿತಿಯ ವ್ಯವಸ್ಥೆಯನ್ನು ಮಾಡಿ. ಎಸ್.ಎಂ.ಎಸ್ ಹಾಗೂ ಇಂಟರ್ನೆಟ್ ಮೂಲಕ ಬಸ್ ಮಾಹಿತಿಯನ್ನು ಲಭ್ಯವಾಗಿಸಿ. ಸಾರ್ವಜನಿಕ ಬಸ್ ತಂಗುದಾಣಗಳು ಕೆಲವು ಬಸ್ ನಿಲ್ದಾಣಗಳಲ್ಲಿ ಇಲ್ಲವೇ ಇಲ್ಲ ಇದನ್ನು ಸರಿಪಡಿಸಿ. ಕನ್ನಡ ಬಾರದ ಜನರಿಗೂ ಬೆ.ಮ.ಸಾ.ಸಂನ ಸೇವೆಗಳನ್ನು ಬಳಸಲು ಕಷ್ಟವನ್ನು ಅನುಭವಿಸುತ್ತಾರೆ. ಹಾಗಾಗಿ ಇತರೆ ಭಾಷೆಯ ಫಲಕಗಳನ್ನೂ ಹಾಕಿ. ವೋಲ್ವೋ ಬಸ್ ದರಗಳು ಕಡಿಮೆ ಆಗುತ್ತಲೇ ಇದೆ ಆದರೆ ಸಾಮಾನ್ಯ ಬಸ್ ದರಗಳು ಏರುತ್ತಲೇ ಇವೆ. ವೋಲ್ವೋ ಬಸ್ ದರಗಳನ್ನು ಅನುದಾನಿತಗೊಳಿಸಬೇಡಿ, ಎಲ್ಲಾ ಬಸ್ ಬಳಕೆದಾರರಿಗೂ ಈ ಅನುದಾನಿತ ದರಗಳು ಲಭ್ಯವಾಗಬೇಕು.

3.
ಸಮಾನವಾಗಿ ಈಗಿರುವ ಸ್ಥಳದ ಬಳಕೆಯನ್ನು ಮಾಡಿ-ರಸ್ತೆಗಳಲ್ಲಿ ನಿಲ್ಲಿಸುವುದಕ್ಕೆ ಅನುಮತಿ ನೀಡಬೇಡಿ.

ನಿಲ್ಲಿಸಿದ ವಾಹನಗಳ ಲಭ್ಯವಿರುವ ರಸ್ತೆಯ ೩೦% ದಷ್ಟು ವಿಸ್ತೀರ್ಣವನ್ನು ಆಕ್ರಮಿಸಿಕೊಳ್ಳುತ್ತವೆ. ನಿಬಿಡವಾದ ರಸ್ತೆಗಳಲ್ಲಿ ನಿಲುಗಡೆಯ ನಿಷೇದ ಹಾಗೂ ಬದಲಾಗಿ, ವಾಣಿಜ್ಯ ಸಂಕೀರ್ಣಗಳಲ್ಲಿ ನುಲುಗಡೆಗೆಂದೇ ಮೀಸಲಿಟ್ಟ ಸ್ಥಳಗಳು ಹಾಗೂ ನೆಲೆಮಾಳಿಗೆಗಳ ಬಳಕೆಯು ಆಗಬೇಕೆಂದು ನಮ್ಮ ಬೇಡಿಕೆ. ಈಗಿರುವ ರಸ್ತೆಗಳ ಉತ್ತಮವಾದ ನಿರ್ವಹಣೆಯನ್ನು ಮಾಡಿ ಹಾಗೂ ಅತಿಕ್ರಮಣ ಮುಕ್ತವಾಗಿ ಇರಿಸಿ, ವಾಹನಗಳ ಸುಗಮವಾದ ಸಂಚಾರಕ್ಕೆ ವ್ಯವಸ್ಥೆ ಮಾಡಿ.

4. ಸಾರಿಗೆ ವಿಷಯಗಳನ್ನು ಕುರಿತಾಗಿ ಸಂವಾದ ಹಾಗೂ ಅರಿವನ್ನು ಮೂಡಿಸಿ- ಸಾರ್ವಜನಿಕ ಸಂಚಾರದ ಬಳಕೆಯನ್ನು ಅರ್ಥಪೂರ್ಣವಾಗಿಸಿ.
 
ನಮ್ಮ ಜೀವನದ ಗುಣಮಟ್ಟದ ಮೇಲೆ ನೇರವಾದ ಪರಿಣಾಮವನ್ನು ಇದು ಬೀರುವುದಲ್ಲವೇ? ಜನರಿಗೆ ಅವರ ಜೀವನದಲ್ಲಿ ಮಾಡುವ ಆಯ್ಕೆಗಳು ಅವರು, ಅವರ ಮಕ್ಕಳ ಹಾಗೂ ಪ್ರೀತಿ ಪಾತ್ರರ ಜೀವನವಲ್ಲದೇ, ಅವರ ಸುತ್ತಲಿರುವವರ ಜೀವನದ ಮೇಲೆ ಬೀರುವ ಪ್ರಭಾವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ. ಅವರವರ ಪೌರ ಜವಾಬ್ದಾರಿಗಳನ್ನು ಕುರಿತಾಗಿ ಎಲ್ಲರಿಗೂ ಅರಿವನ್ನು ಮೂಡಿಸಿ. ಅನೇಕ ಮಾದ್ಯಮಗಳ ಮೂಲ ಸುಸಂಘಟಿತ ಯತ್ನವನ್ನು ನಡೆಸಿ. ಪರಿವರ್ತನೆಯನ್ನು ತಂದುಕೊಳ್ಳುವ ಮಾರ್ಗ ಹಾಗೂ ಪ್ರೇರಣೆಯನ್ನು ಅವರಿಗೆ ನೀಡಿ.


5. ಖಾಸಗಿ ವಾಹನಗಳಿಗೆ  ಸಿ ಎನ್ ಜಿ ಗಳ (ಗ್ಯಾಸ್ ಸಿಲಿಂಡರ್) ಬಳಕೆಯನ್ನು ಕಡ್ಡಾಯ ಮಾಡಿ.

6. ವಾಹನ ಸಂಚಾರವನ್ನು ವ್ಯವಸ್ಥಿತಗೊಳಿಸಿ.

ಒಂದು ಹಸಿರು ದೀಪವನ್ನು ಹಾಕಿದಾಗ, ಹಲವಾರು ಹಸಿರು ಸಿಗ್ನಲ್ ಗಳು ಕ್ರಮವಾಗಿ ಬರುವ ರೀತಿಯಲ್ಲಿ ಸಿಗ್ನಲ್ ದೀಪಗಳು ಏಕಕಾಲದಲ್ಲಿ ಮೂಡುವಂತೆ ಮಾಡಿ ರಸ್ತೆಯ ಬಳಕೆಯ ಸುಧಾರಣೆ ಹಾಗೂ ಪ್ರಯಾಣದ ಸಮಯದಲ್ಲಿ ಕಡಿತವನ್ನು ಮಾಡಲು ಇದು ಚಿರಪರಿಚಿತ ವಿಧಾನ.


7. ರಸ್ತೆಗಳನ್ನು ಪಾದಚಾರಿ ಸೈಕಲ್ ಸ್ನೇಹಿಯಾಗಿಸಿ
ಪಾದಚಾರಿಗಳ ಕ್ರಾಸಿಂಗ್ಗಳು ರಸ್ತೆಯ ಮಟ್ಟಕ್ಕೆ ಇರಬೇಕು: ಜೀಬ್ರಾ ಕ್ರಾಸಿಂಗ್ ಗಳು ಮುಂಚೆ ವೇಗವನ್ನು ಕಡಿಮೆ ಮಾಡುವ ಸ್ಪೀಡ್-ಬ್ರೇಕರ್ಗಳು ಇರಬೇಕು ಹಾಗೂ ಆತಂಕ-ಮುಕ್ತವಾಗಿ ಪಾದಚಾರಿಗಳು ರಸ್ತೆ ದಾಟುವಂತೆ ಟ್ರಾಪಿಕ್ ದೀಪಗಳು ಇರಬೇಕು.

ಅಧಿಕ ತೀಕ್ಷವಾದ ಹೆಡ್ ಲೈಟ್ ಗಳ ಬಳಕೆಯಿಂದ ಸಂಚಾಲಕನಿಗೆ ಉಂಟಾಗುವ ಕುರುಡುತನವನ್ನು ಹಾಗೂ ರಾತ್ರಿಯ ವೇಳೆಯಲ್ಲಿ ಪಾದಚಾರಿಗಳಿಗೆ ಅದರಿಂದ ಉಂಟಾಗುವ ಅಧಿಕ ಅಪಾಯವನ್ನು ತಡೆಯಲು, ಅದರ ಬಳೆಕೆಯ ಮೇಲೆ  ಕಟ್ಟು ನಿಟ್ಟಾದ ನಿಷೇದವನ್ನು ವಿಧಿಸಬೇಕು. ಪಾದಚಾರಿಗಳು ಸಿಗ್ನಲ್ ಗಳ ಆಧಾರಿತ ಅನುಷ್ಟಾನ: ೩ ನಿಮಿಷ ಕಾದ ನಂತರ ಮುಂದೆ ಸಾಗಲು ತವಕಿಸುವ ವಾಹನಗಳಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಪಾದಚಾರಿಗಳಿಗೆ ಕೇವಲ ೧೦ ಸೆಕೆಂಡ್ ಗಳನ್ನು ನೀಡಲಾಗುತ್ತದೆ. ಈ ಅವಧಿಯನ್ನು ನಿಯಮಿತವಾಗಿ ಮುರಿಯಲಾಗುತ್ತದೆ. ಇದರ ಉಲ್ಲಂಘನೆಯನ್ನು ಮಾಡುವವರಿಗೆ ಶಿಕ್ಷೆ ನೀಡಬೇಕು ಹಾಗೂ ಪಾದಚಾರಿಗಳಿಗೆ ರಸ್ತೆ ದಾಟಲು ನೀಡುವ ಸಮಯವನ್ನು ಹೆಚ್ಚಿಸಬೇಕು. ಇತ್ತೀಚೆಗೆ ಅನಿಷ್ಥಾನ ಮಾಡಲಾದ ಪೆಲಿಕನ್ ಸಿಗ್ನಲ್ ಗಳು ಈ ನಿಟ್ಟಿನಲ್ಲಿ ಕೈಗೊಂಡ ಸರಿಯಾದ ಹಜ್ಜೆ, ಆದರೆ ಇದರ ಬಳಕೆಯನ್ನು ಹೆಚ್ಚು ಸ್ಥಳಗಳಿಗೆ ಪ್ರಸರಿಸಿ ಕಟ್ಟು ನಿಟ್ಟಾಗಿ ಪಾಲಿಸಬೇಕು.

ಮೋಟಾರ್- ಚಾಲಿತ ವಾಹನಗಳಿಂದ ಮುಕ್ತವಾದ ಪ್ರದೇಶಗಳನ್ನು ಸೃಷ್ಟಿಸಬೇಕು: ಅಧಿಕ ಪಾದಚಾರಿ ದಟ್ಟಣೆಯಿರುವ ರಸ್ತೆಗಳು  (ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರೋಡ್) ಕೊಲ್ಕತ್ತಾದ ಲಿಂಡ್ಸೇ ರಸ್ತೆ ಹಾಗೂ ನ್ಯೂಯಾರ್ಕಿನ ಟೈಮ್ಸ್ ಚೌಕದಂತ ಪಾದಚಾರಿ ಚೌಕಗಳಾಗಬಹುದು.

ಮೀಸಲಿಟ್ಟ ಸೈಕಲ್ ಮಾರ್ಗಗಳು: ಸೈಕಲ್ ಸವಾರರ ಸುರಕ್ಷೆತೆಗಾಗಿ ಎಲ್ಲಾ ರಸ್ತೆಗಳಲ್ಲೂ ಇದರ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಮೋಟಾರ್- ಚಾಲಿತ ವಾಹನಗಳು ಈ ಸ್ಥಳಗಳನ್ನು ಅಕಸ್ಮಾತ್ ಬಳಸಿದರೆ, ಅದರಿಂದ ದಂಡವನ್ನು ವಸೂಲಿ ಮಾಡಬೇಕು.

ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಸೈಕಲ್ ನಿಲುಗಡೆ ವ್ಯವಸ್ಥೆಯನ್ನು ಮಾಡಿ
ಎಲ್ಲಾ ಬಸ್ಗಳಲ್ಲೂ ಸೈಕಲ್ ರಾಕ್ ಗಳನ್ನು / ಗೂಡುಗಳನ್ನು ಒದಗಿಸಿ

ಸೈಕಲ್
ಸವಾರರ ಪೈಕಿ ಅನಾನುಕೂಲಿತರಾದವರಿಗೆ ಕಳ್ಳತನ ಹಾಗೂ ಅಪಘಾತ ವಿಮೆಗಳನ್ನು ಒದಗಿಸಿ
ಪುಟ್ ಪಾತ್ ಗಳ ಗುಣಮಟ್ಟವನ್ನು ಸುಧಾರಿಸಿ: ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಅತ್ಯಂತ ಎತ್ತರವಾದ ಸ್ಥಳಗಳು ( ಅನೇಕ ಸಲ ಪುಟ್ ಪಾತ್ ಗಳು ೧ ಅಡಿ ಎತ್ತರವಿರುವುದು) ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಹಾಗೂ ಅನಧಿಕೃತ ನಿರ್ಮಾಣಗಳಿಂದ ಬಹುತೇಖ ಪುಟ್ ಪಾತ್ ಗಳು ಬಳಸಲು ಯೋಗ್ಯವಾಗಿ ಇರುವುದಿಲ್ಲ. ಇದರಿಂದ ರಸ್ತೆಗಳ ಮೇಲೆ ಹಾಗೂ ಮೋಟಾರು ಚಾಲಿತ ವಾಹನಗಳ ನಡುವೆ ಪಾದಚಾರಿಗಳು ನಡೆಯಲೇಬೇಕಾದ ಪ್ರಸಂಗ ಒದಗುತ್ತದೆ. ಸ್ಥಳೀಯ ನಿವಾಸಿಗಳು ತಮ್ಮ ಪುಟ್ ಫಾತ್ ಗಳು ಹೇಗಿರಬೇಕೆಂಬ ನಿರ್ಣಯವನ್ನು ಮಾಡುವ ಹಕ್ಕನ್ನು ನೀಡಿ ಅದನ್ನು ಸರಿ ಪಡಿಸಿ.

ಸೈಕಲ್ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅತ್ಯವಶ್ಯವಾದ ನೆರಳನ್ನು ಬೀದಿಯಲ್ಲಿ ಇರುವ ಮರಗಳು ಒದಗಿಸುತ್ತವೆ. ಅವುಗಳನ್ನು ರಕ್ಷಿಸಿ, ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಯಿರಿ.

ಉತ್ತಮವಾದ ಬಂಡವಾಳ ಹೊಂದಿದ, ಸುಸಜ್ಜಿತವಾದ ಮೋಟಾರೇತರ ಸಂಚಾರ ಕೋಶವನ್ನು ಬಿ.ಬಿ.ಎಮ್.ಪಿಯಲ್ಲಿ ರೂಪಿಸಿ, ಮೇಲ್ಕಂಡ ವಿಷಯದ ಮೇಲೆ ಅದು ಗಮನ ಹರಿಸಬೇಕು.

ನಡಿಗೆಯ ಮೂಲಕ ಕ್ರಮಿಸುವ ಪ್ರಯಾಣಗಳನ್ನು ಉತ್ತೇಜಿಸುವ ಪೂರಕ ವಾತಾವರಣವನ್ನು ಸೃಷ್ಟಿಸಲು ಉತ್ತಮವಾದ ಸಾರ್ವಜನಿಕ ಕ್ಷೇತ್ರದ ತಂತ್ರದ ಅಗತ್ಯವಿದೆ. ಪಾದಚಾರಿಗಳಿಗಾಗಿ ಪ್ರತ್ಯೇಕ ರಸ್ತೆಗಳು, ತೆರೆದ ಸ್ಥಳಗಳಂತಹ ಇನ್ನೂ ಹೆಚ್ಚು ಸಾರ್ವಜನಿಕ ಸ್ಥಳಗಳನ್ನು ಒದಗಿಸಬೇಕು. ಪಾದಚಾರಿ ಸ್ಪಂದಕ ಜೀವನವನ್ನು ನಾವು ನಿರ್ಮಿಸಬೇಕು. ಉತ್ತಮವಾದ, ಪಾದಚಾರಿ-ಸ್ನೇಹಿ, ಸುರಕ್ಷಿತ ಹಾಗೂ ಉಲ್ಲಾಸದಾಯಕ ಸಾರ್ವಜನಿಕ ಸ್ಥಳಗಳನ್ನು ಸೃಷ್ಟಿಸುವುದರಿಂದ ನಾವು ಹೆಚ್ಚಿನ ಪಾದಚಾರಿಗಳು ರಸ್ತೆಗಳ ಬಳಕೆಯನ್ನು ಮಾಡುವತ್ತ ಆಕರ್ಷಿಸಬಹುದು.

8. ಬೀದಿ ವ್ಯಾಪಾರಿಗಳಿಗಾಗಿ  ಬೀದಿಯಲ್ಲಿ ಸ್ಥಳಗಳನ್ನು ನಿಗದಿಪಡಿಸಿ

   ಬೀದಿ ವ್ಯಾಪಾರಿಗಳು ನಮ್ಮ ನಗರದ ಆರ್ಥಿಕ ವ್ಯವಸ್ಥೆ ಹಾಗೂ ರಸ್ತೆಗಳ ಅವಿಭಾಜ್ಯ ಅಂಗ. ನಗರದ ರಸ್ತೆಗಳನ್ನು ಹಾಗೂ ಸಾರಿಗೆ ಕಾರ್ಯ ನೀತಿಯನ್ನು ರೂಪಿಸುವಾಗ, ಈ ಪ್ರಕ್ರಿಯೆಯಲ್ಲಿ ಬೀದಿ ವ್ಯಾಪಾರಿಗಳು ಹಾಗೂ ಅವರ ಕಳಕಳಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ನಗರದ ಬೀದಿ ವ್ಯಾಪಾರಿಗಳ ರಾಷ್ಟ್ರೀಯ ಕಾರ್ಯ ನೀತಿಯನ್ನು ಅನುಷ್ಟಾನ ಗೊಳಿಸಬೇಕು.

9. ಸಂಚಾರದ ವಿಷಯಗಳಲ್ಲಿ ಪಾರದರ್ಶಕತೆ, ಸಹಭಾಗಿತ್ವ ಹಾಗೂ ಜನಪರ ಆಳ್ವಿಕೆ

ಇದು ಅತ್ಯಂತ ಮುಖ್ಯವಾದ ಶಿಫಾರಸ್ಸು. ಏಕೆಂದರೇ, ಇದನ್ನು ಸರಿಯಾದ ರೀತಿಯಲ್ಲಿ ಪಾಲಿಸಿದಲ್ಲಿ ಇತರ ಬಹುತೇಕ ವಿಷಯಗಳ ಮೇಲೆ ಪ್ರಭಾವ ಬೀರುತ್ತದೆ. ಸಂಚಾರದ ಯೋಜನೆಗಳನ್ನು ಮಾಡುವ ಪ್ರತಿಯೊಂದು ಹಂತದಲ್ಲೂ, ಅದರಲ್ಲೂ ವಿಶೇಷವಾಗಿ ಯೋಜನೆಗಳಿಗೆ ಅಂತಿಮ ರೂಪ ನೀಡುವ ಸಂದರ್ಭಗಳಲ್ಲಿ ಜನರನ್ನು ತೊಡಗಿಸಿಕೊಳ್ಳಿ. ಇದು ಅವರ ನಗರ. ಅಗತ್ಯವಾದ ಮಾರ್ಗಗಳನ್ನು ಬಳಸಿ, ಎಲ್ಲಾ ವಿಷಯಗಳಲ್ಲೂ ಪಾರದರ್ಶಕತೆಯನ್ನು ಇರುವಂತೆ ನೋಡಿಕೊಳ್ಳಿ. ಸಾರ್ವಜನಿಕ ಸಮಾಲೋಚನೆಯಲ್ಲಿ ಎಲ್ಲರೂ ಸೇರ್ಪಡೆ ಆಗಬೇಕು- ಸಮಾಜದ ಎಲ್ಲಾ ತರದ ಜನರೂ ಇದಕ್ಕೆ ಕೊಡುಗೆಯನ್ನು ನೀಡಲಿ. ನಿರ್ಣಯ ಕೈಗೊಳ್ಳುವಿಕೆಯನ್ನು ಪ್ರಜಾತಂತ್ರಾತ್ಮಕವಾಗಿ ಮಾಡಲು ಅಗತ್ಯವಾದ ಎಲ್ಲಾ ಕಾನೂನುಗಳೂ ಇವೆ- ಇವುಗಳನ್ನು ಪಾಲಿಸಿ.

ಬೆಂಗಳೂರಿನ ಪರಿಮಿತಿಯಲ್ಲಿ ನಡೆಯುವ ಸಂಚಾರಕ್ಕೆ ಚುನಾಯಿತ ಬಿ.ಬಿ.ಎಂ.ಪಿ ಹಾಗೂ ಬಿ.ಎಂಎಲ್.ಟಿ.ಎ ಜವಾಬ್ದಾರಿಯನ್ನು ವಹಿಸಬೇಕು.

ಸಂವೈಧಾನಾತ್ಮಕವಲ್ಲದ ಸಂಸ್ಥೆಗಳಾದ ಅಬೈಡ್, ವಿಸಿನ್, ಇನ್ಪ್ರಾದಂತಹ ಗುಂಪುಗಳನ್ನು ವಿಸರ್ಜಿಸಿ: ಯೋಜನಾ ಕಾರ್ಯದಲ್ಲಿ ಸಮಾಜದ ಗಣ್ಯ ವರ್ಗಕ್ಕೆ ಸೇರಿದವರ ಗುಂಪುಗಳು ಹಾಗೂ ವಿಶೇಷ ಆಸಕ್ತಿಯ ಹಾಗೂ ಪ್ರಭಾವ ಬೀರುವ ಗುಂಪುಗಳಿಗೆ ಯಾವುದೇ ಪಾತ್ರವಿರಬಾರದು. ಇದು ಕೇವಲ ಸಮಸ್ಯಾ ನಿವಾರಣೆಗೆ ಸಂಬಂಧಿಇಸ್ದಂತೆ, ಮುಂದಾಲೋಚನೆ ಇಲ್ಲದ ಚಿಂತನೆಗೆ ಹಾಗೂ ಸಂಕುಚಿತ ಮಾರ್ಗೋಪಾಯಗಳಿಗೆ ಎಡೆಮಾಡಿಕೊಡುತ್ತದೆ. ತಾಂತ್ರಿಕ ಒಳನೋಟಗಳಿಗಾಗಿ ವಿಧ್ಯಾಕ್ಷೇತ್ರದ/ಪಂಡಿತರ ಗುಂಪಿನಿಂದ ವಕ್ರಾಸಕ್ತಿಗಳಿಲ್ಲದ/ನಿರಾಸಕ್ತ ತಜ್ಞರನ್ನು ಬಳಸಿ, ಹಾಗೂ ಜನರ ಪ್ರತಿನಿಧಿಗಳು, ಜನಸಾಮಾನ್ಯರು ನಿರ್ಣಯಗಳನ್ನು ತೆಗೆದುಕೊಳ್ಳಲಿ.

ವಿಕೇಂದ್ರೀಕರಿಸಿ-ಪುಟ್ ಪಾತ್ ಗಳು, ಸೈಕಲ್ ಮಾರ್ಗಗಳು ಹಾಗೂ ಇತರ ಪಾದಚಾರಿ ಹಾಗೂ ಸೈಕಲ್ ಸವಾರಿಯ ಅಡಿ ರಚನೆಗಳ ಉಸ್ತುವಾರಿಯನ್ನು ವಾರ್ಡ್ ಸಮಿತಿಗಳು ತೆಗೆದುಕೊಳ್ಳೂವಂತೆ ಅವುಗಳನ್ನು ಸಶಕ್ತಗೊಳಿಸಬೇಕು.

ಪ್ರಸ್ತುತವಿರುವ ಮಾರ್ಗೋಪಾಯಗಳ ಮೇಲಿನ ಬೇಡಿಕೆಗಳು

1. ರಸ್ತೆ ಅಗಲೀಕರಣವು ತಾತ್ಕಾಲಿಕ ಪರಿಹಾರ ಮಾತ್ರ, ಅದನ್ನು ನಾವು ನಿಲ್ಲಿಸಬೇಕು.

ವಿವೇಚನಾರಹಿತ ಹಾಗೂ ಅನಿರ್ದೇಶೀತ ರಸ್ತೆ ಅಗಲೀಕರಣವು ಸಾವಿರಾರು ಮನೆಗಳು, ಜೀವನೋಪಾಯಗಳು ಹಾಗೂ ನಗರದ ಹಸಿರು ಹಾಸನ್ನು ನಾಶ ಮಾಡುತ್ತಿದೆ. ಸಂಕುಚಿತಗೊಂಡ ಧಮನಿಗಳನ್ನು ಅಗಲಿಸಲು ಸ್ಟೆಂಟ್ ಗಳನ್ನು ಸೇರಿಸಿದ ರೋಗಿಯು, ಕೊಲೆಸ್ಟ್ರಾಲ್ ತುಂಬಿದ ಆಹಾರ ಸೇವನೆಯನ್ನು ಮುಂದುವರೆಸಿದಂತೆ., ರಸ್ತೆ ಅಗಲೀಕರಣವೂ ಆಗುತ್ತದೆ. ದೀರ್ಘಾವಧಿಯಲ್ಲಿ ನೋಡಿದಾಗ ಇದು ಕೆಲಸ ಮಾಡುವುದಿಲ್ಲ. ೫ ವರ್ಷಗಳ ಹಿಂದೆ ೧೮ ಲಕ್ಷ ವಾಹನಗಳು ಇದ್ದವು, ಆದರೀಗ ಅದು ೩೦ ಲಕ್ಷ ಆಗಿದೆ. ಇನ್ನು ೫ ವರ್ಷಗಳಲ್ಲಿ ಅದು ೫೦ ಲಕ್ಷ ಆಗುವ ಸಂಭವ ಇದೆ. ಆಗೇನು ಮಾಡುವುದು ? ಕೆಲವೇ ಕೆಲವು ವರ್ಷಗಳು ಹೆಚ್ಚು ವೇಗವಾಗಿ ಪ್ರಯಾಣ ಮಾಡುವ ಸಲುವಾಗಿ, ನಿಮ್ಮ ಮನೆ ಅಥವಾ ಅಂಗಡಿಯನ್ನು ಒಡೆಯಲು ನನಗೆ ನಿಜವಾಗಲೂ ಹಕ್ಕಿದೆಯೇ? ವಿವೇಚನಾರಹಿತ ರಸ್ತೆ ಅಗಲೀಕರಣವು ತಾತ್ಕಾಲಿಕ, ದುಬಾರಿ ಬದಲಾಯಿಸಲಾಗದ/ ಪೂರ್ವಾವಸ್ಥೆಗೆ ತರಲಾಗದ, ವಿನಾಶಕಾರಿ ಪ್ರತಿಕ್ರಿಯೆ; ಅದು ಯಾವುದೇ ರೀತಿಯಲ್ಲಿ ವಾಹನ ದಟ್ಟಣೆಯ ಮೂಲ ಕಾರಣವನ್ನು ಉದ್ದೇಶಿಸುವುದಿಲ್ಲ.

 

2. ವಾಸ್ತವ ಹಾಗೂ ವಾಸ್ತವದಲ್ಲಿ ಬದುಕುವ ಜೀವಂತ ಜನರಿಂದ ದೂರವಾದ ಯೋಜನೆಗಳಿಗೆ ಕೈ ಹಾಕಬೇಡಿ.

ಪ್ರಸ್ತುತ, ಸಂಚಾರ-ಸಂಬಂಧಿತ ಯೋಜನೆಗಳು ಯಾವುದೇ ರೀತಿಯ ವ್ಯವಸ್ಥೆಯನ್ನಾಗಲಿ ಅಥವಾ ಸಾರ್ವಜನಿಕರ ತೊಡಗುವಿಕೆ/ ಸಮ್ಮತಿಯನ್ನಾಗಲಿ ರೂಡಿಸಿಕೊಂಡಿಲ್ಲ. ಒಂದು ಉದಾಹರಣೆಯನ್ನು ಹೇಳುವುದಾದರೆ, ಬಸವನಗುಡಿಯಲ್ಲಿರುವ ಟಾಗೋರ್ ವೃತ್ತದಲ್ಲಿ ಎಷ್ಟು ಕಡಿಮೆ ವಾಹನ ಇತ್ತೆಂದರೆ, ಇಲ್ಲಿ ಟ್ರಾಪಿಕ್ ದೀಪ ಕೂಡ ಇರಲಿಲ್ಲ. ಈಗ ಅಲ್ಲಿ ಅಂಡರ್ ಪಾಸ್ ಒಂದರ ನಿರ್ಮಾಣವಾಗಲಿದೆ. ಅದನ್ನು ಯೋಜಿಸಿದವರು ಯಾರು? ಬಸವನಗುಡಿಯ ನಿವಾಸಿಗಳನ್ನು ಯಾರೂ ಕೇಳಿಲ್ಲ/ ಅವರೊಂದಿಗೆ ಯಾವ ಸಮಾಲೋಚನೆಯನ್ನು ನಡೆಸಿಲ್ಲ. ಬಹುತೇಕ ಮಂದಿ ಈ ಯೋಜನೆಯ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅವರ ಧ್ವನಿಗಳು ಯಾರಿಗೂ ಕೇಳಿಸುವುದಿಲ್ಲವೇ? ಅವರ ಕಳವಳಿ ಹಾಗೂ ಬುದ್ದಿವಂತಿಕೆಯನ್ನು ತಳ್ಳಿ ಹಾಕಬೇಡಿ. ಅದೇ ರೀತಿ ನಗರದ ಇತರ ನಾಗರೀಕರನ್ನೂ ಕೂಡ ನಗಣ್ಯ ಮಾಡಬೇಡಿ. ಇದು ನಮ್ಮ ನಗರ- ಅದರಲ್ಲಿ ನಡೇಯುವ ಘಟನೆಗಳೆಲ್ಲದರ ಬಗ್ಗೆಯೂ ನಮ್ಮ ಅಭಿಪ್ರಾಯಗಳಿಗೆ ಬೆಲೆಯನ್ನು ನೀಡಬೇಕು.

 

 3. ಫ್ಲೈಓವರ್ ಗಳು, ಅಂಡರ್ ಪಾಸ್ ಗಳು ಹಾಗೂ ಸಿಗ್ನಲ್- ಮುಕ್ತ ರಸ್ತೆಗಳು- ದುಬಾರಿ, ಪ್ರತ್ಯೇಕತಾವಾದಿ ಹಾಗೂ    ನಿರರ್ಥಕ. ಇನ್ನು ಮುಂದೆ ದಯವಿಟ್ಟು ಇದ್ಯಾವುದೂ ಬೇಡ.

 

ಸರಿಯಾದ ಯೋಜನೆ ಇಲ್ಲದೆ ಮಾಡಿದ ಈ ಪರಿಹಾರಗಳು, ನಿಬಿಡತೆಯ ಬಿಂದುಗಳನ್ನು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಿವೆ.  ಅಲ್ಲದೆ, ಅನಿರ್ಬಂಧಿತವಾದ, ಅಧಿಕ ವೇಗದ ವಾಹನ ಸಂಚಾರಕ್ಕೆ ಆಸ್ಪದ ನೀಡಿ, ಈ ಪರಿಹಾರಗಳು ಪಾದಚಾರಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟುವ ಸಾಮರ್ಥ್ಯದಿಂದ ವಂಚಿತ ಮಾಡಿದೆ.  ಸೈಕಲ್ ಸವಾರರು, ವಯಸ್ಸಾದವರು, ಮಕ್ಕಳು ಹಾಗೂ ವಿಕಲಚೇತನರು, ವಾಹನಗಳಿಗೆ ದಾರಿ ಮಾಡಿಕೊಡಲು ಅಕ್ಷರಶಃ ಬದಿಗೆ ತಳ್ಳಲ್ಪಡುತ್ತಾರೆ. ಎರಡೂ ಪರಿಹಾರಗಳೂ ದೋಷಪೂರಿತವಾದುದು, ಏಕೆಂದರೆ ಅವು ಮೂಲಭೂತವಾಗಿ ಸ್ವವೈಫಲ್ಯಕಾರಿಯಾದದು: ಅವು ಖಾಸಗಿ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತದೆ, ಇದರಿಂದ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ, ರಸ್ತೆಗಳ ವ್ಯವಸ್ಥೆ/ಅಡಿರಚನೆಯ ಮೇಲೆ ಮತ್ತಷ್ಟು ಒತ್ತಡವನ್ನು ಹಾಗೂ ಬೇಡಿಕೆಯನ್ನು ಹೇರುತ್ತದೆ.

4.    ಮೆಟ್ರೋದ ಔಚಿತ್ಯದ ತಕ್ಷಣದ ಪುನಃಪರಿಶೀಲನೆ

ಮೆಟ್ರೋದ ಪ್ರಾರಂಭಿಕ ಅಂದಾಜಿನ ಪ್ರಕಾರ, ಅದಕ್ಕೆ ತಗಲುವ ವೆಚ್ಚ ೫,೮೦೦ ಕೋಟಿ ರೂಪಾಯಿಗಳು.  ಈಗ ಅದರ ಎರಡು ಪಟ್ಟು ಹೆಚ್ಚಿ, ೧೧,೫೦೦ ಕೋಟಿ ರೂಪಾಯಿಗಳಿಗೆ ಏರಿದೆ.  ಇನ್ನೂ ಅರ್ಧ ಯೋಜನೆಯೂ ಪೂರ್ಣಗೊಂಡಿಲ್ಲ.   ದೆಹಲಿ ಮೆಟ್ರೋ ರೈಲು ನಿಯಮಿತವು ಪ್ರಕಟಿಸಿದ ದೆಹಲಿ ಮೆಟ್ರೋಗೆ ಸಂಬಂಧಿಸಿದ ಅಂಕಿ-ಅಂಶಗಳ ಪ್ರಕಾರ, ಮೆಟ್ರೋದ ಬಳಕೆಯ ಅಂದಾಜುಗಳು ಅತಿರೇಕದ ಆಶಾವಾದಿತ್ವವನ್ನು ತೋರಿದೆ.  ಸ್ವಲ್ಪ ದೂರದ ನಡಿಗೆಯಿಂದ ಮಟ್ರೋವನ್ನು ತಲುಪಲು ಎಲ್ಲ ಬಡಾವಣೆಗಳಲ್ಲೂ ಸಾಧ್ಯವಾಗುವವರೆಗೆ, ಸಂಪೂರ್ಣ ನಗರವೇ ಮೆಟ್ರೋದ ಬಳಕೆಯನ್ನು ಮಾಡುವುದಿಲ್ಲ.  ಎಷ್ಟೋ ಅಗ್ಗದ ಹಾಗೂ ವೇಗವಾದ ಬದಲಿ ವ್ಯವಸ್ಥೆಗಳು ಇರುವಾಗ, ಅದರ ಉಪಯುಕ್ತತೆಗಳ ಬಗ್ಗೆ ಪ್ರಶ್ನೆಗಳನ್ನು ಹೊತ್ತ ಇಂತಹ ದುಬಾರಿ ಯೋಜನೆಯನ್ನು ಏಕೆ ಜಾರಿಗೊಳಿಸಬೇಕು?  ಮೆಟ್ರೋ ವ್ಯವಸ್ಥೆಗೆ ತಗಲುವ ಆಂಶಿಕ ವೆಚ್ಚದಲ್ಲಿ, ಅದಕ್ಕೆ ಸಾಟಿಯ ಸಂಖ್ಯೆಯನ್ನು ಹೊರುವ ಸಾಮರ್ಥ್ಯವು ಬಿಆರ್‌ಟಿ ವ್ಯವಸ್ಥೆಗಳಿಗೆ ಇದೆ.  ಮತ್ತಷ್ಟು ಹಣವನ್ನು ವ್ಯಯ ಮಾಡುವ ಮುನ್ನ, ಮೆಟ್ರೋದ ಕಾಮಗಾರಿಯನ್ನು ನಿಲ್ಲಿಸಿ, ಬಿಆರ್‌ಟಿಯಂತಹ  ಬದಲಿ ಪರಿಹಾರಗಳನ್ನು ಕುರಿತಾಗಿ ಚಿಂತಿಸಿ.


5.    ಸ್ಕೈವಾಕ್‌ಗಳು, ಪಾದಚಾರಿ ಸುರಂಗ ಮಾರ್ಗಗಳು, ಒಂದು ಅಡಿ ಎತ್ತರದ ಕಾಂಕ್ರೀಟ್ ಮೀಡಿಯನ್‌ಗಳು.  ಪಾದಚಾರಿಗಳ ಮೇಲೆ ದಂಡ ಹೇರುವುದೇಕೆ?

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಅಗತ್ಯಗಳನ್ನಾಗಲಿ ಅಥವಾ ಸೈಕಲ್ ಸವಾರರು, ಗಾಡಿ ವ್ಯಾಪಾರಿಗಳು, ಲಗೇಜ್ ಹೊತ್ತ ಜನರು ಹಾಗೂ ಮೋಟಾರೇತರ ಸಂಚಾರ ಮಾರ್ಗಗಳನ್ನು ಬಳಸುವವರಿಗಾಗಲಿ, ಸ್ಕೈವಾಕ್‌ಗಳು ಯಾವ ಪ್ರಯೋಜನವೂ ಇಲ್ಲ.  ನಗರದ ಪರಿಸರವನ್ನು ಕನಿಷ್ಠ ಹಾನಿ ಮಾಡುವವಳೆಂದರೆ ಪಾದಚಾರಿಯೇ.  ಅಷ್ಟೇ ಅಲ್ಲ, ಅವಳು ನಗರವನ್ನು ಮಾನವೀಕೃತಗೊಳಿಸುತ್ತಾಳೆ.  ರಸ್ತೆಯನ್ನು ದಾಟುವುದಕ್ಕಾಗಿ ಅವಳನ್ನು ಸ್ಕೈವಾಕ್‌ನ್ನು ಹತ್ತಬೇಕೆಂದು ಹೇಳಿ ದಂಡಿಸಬೇಡಿ.

ಕಳಪೆ ನಿರ್ವಹಣೆಯಾಗುವ ಸುರಂಗ ಮಾರ್ಗಗಳು ಕಡಿಮೆ ಬಳಕೆಯಾಗುತ್ತದೆ ಹಾಗೂ ಅವುಗಳನ್ನು ಬಳಸಿದಾಗ, ಮನಸ್ಸಿಲ್ಲದ ಮನಸ್ಸಿನಿಂದ ಬಳಸಲಾಗುತ್ತದೆ. ಮಳೆಗಾಲದಲ್ಲಿ ಅಲ್ಲಿ ನೀರು ತುಂಬಿಕೊಳ್ಳುತ್ತದೆ, ಹಾಗೂ ಕತ್ತಲು ತುಂಬಿದ, ಅಪಾಯಕಾರಿ ಸ್ಥಳಗಳಾಗಿ ಅವು ಕಾಣುತ್ತವೆ.  ಅಲ್ಲದೆ, ಆಗಾಗ ಅವುಗಳನ್ನು ಅಕ್ರಮ ಚಟುವಟಿಕೆಗಳಿಗೂ ಬಳಸಿಕೊಳ್ಳಲಾಗುತ್ತದೆ.

ಸ್ಪೀಡ್ ಬ್ರೇಕರ್‌ನ ಉಪಯೋಗವನ್ನು ಪಡೆದು ರಸ್ತೆಯನ್ನು ದಾಟುವಾಗ, ವಿವಿಧ ವೇಗಗಳಲ್ಲಿ ಚಲಿಸುವ ವಾಹನಗಳನ್ನು ನಿರಂತರವಾಗಿ ತಪ್ಪಿಸಿಕೊಂಡು ಹೋಗಬೇಕಾಗುತ್ತದೆ.  ಅನೇಕ ಸ್ಪೀಡ್ ಬ್ರೇಕರ್‌ಗಳು ಜ಼ೀಬ್ರಾ ಕ್ರಾಸಿಂಗ್‌ನ ಉದ್ದಕ್ಕೂ ಇರುತ್ತವೆ. ಅದನ್ನು ಅರ್ಧ ದಾಟುವ ವೇಳೆಗೆ, ವಾಹನಗಳು ವೇಗವನ್ನು ಹೆಚ್ಚಿಸಿಕೊಳ್ಳುವುದರಿಂದ, ಅವು ಸುರಕ್ಷಿತವಾದ ಪಾದಚಾರಿ ಪ್ರದೇಶವೆಂಬ ಚಿಂತನೆಯನ್ನು ನಕಾರಗೊಳಿಸುತ್ತದೆ.

ರಸ್ತೆಯ ಮೀಡಿಯನ್‌ಗಳು ಮೂಲಭೂತವಾಗಿ ಪಾದಚಾರಿ ಸ್ನೇಹಿಯಾಗಿಲ್ಲ.  ಈ ಮೀಡಿಯನ್‌ಗಳ ನಡುವಣ ಬ್ರೇಕ್‌ಗಳು/ಅಂತರಗಳು ಅಲ್ಲೊಂದು ಇಲ್ಲೊಂದು ಇರುತ್ತದೆ, ಹಾಗಾಗಿ, ಅತ್ಯಂತ ಅಪಾಯಕಾರಿ ರೀತಿಯಲ್ಲಿ ಅದನ್ನು ಜನರು ದಾಟಿಕೊಂಡು ರಸ್ತೆಯ ಅತ್ತ ಬದಿಗೆ ಹೋಗುವಂತೆ ಮಾಡುತ್ತದೆ.

ಅನುಬಂಧ

1.    ಈ ಚಿತ್ರವು ಸ್ವ-ಬಲವರ್ಧಕವಾದ ಪದ್ಧತಿಯನ್ನೂ, ನಗರದ ಜೀವಸಾಧ್ಯತೆಯನ್ನೂ, ಅಲ್ಲದೆ ಅದರ ಆರ್ಥಿಕತೆಯನ್ನು ವೃದ್ಧಿಸುವ ವ್ಯವಸ್ಥೆಯನ್ನು ತೋರಿಸುತ್ತದೆ.






2.    ಕೆಲವು ಪ್ರಮುಖ ಸತ್ಯಾಂಶಗಳು
A.    ನಮ್ಮ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಖ್ಯೆಯಲ್ಲಿ ವೇಗದ ಹೆಚ್ಚಳ

  •  ಸಮೃದ್ಧಿಯ ಮಟ್ಟಗಳ ಹೆಚ್ಚಳವಾಗಿ, ಸುಲಭವಾಗಿ ಲಭ್ಯವಾಗುವ ಹಣಕಾಸಿನ ಪರಿಸ್ಥಿತಿಯಿಂದ, ಬೆಂಗಳೂರಿನ ಖಾಸಗಿ ವಾಹನಗಳ ಸಂಖ್ಯೆಯು ವೇಗವಾಗಿ ಹೆಚ್ಚಿದೆ.
  •  ೨೦೦೨ರಲ್ಲಿ ೧೯ ಲಕ್ಷ ವಾಹನಗಳು
  •  ೨೦೦೭ರಲ್ಲಿ ೩೧ ಲಕ್ಷ ವಾಹನಗಳು
  •  ೨೦೧೨ರಲ್ಲಿ ೪೨ ಲಕ್ಷ ವಾಹನಗಳು (ಅಂದಾಜು)


B.    ಖಾಸಗಿ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವ ಜನರ ಸಂಖ್ಯೆಯಲ್ಲಿ ಅಸಮಾನ ಅಂತರ

  •    ಖಾಸಗಿ ವಾಹನಗಳಿಗೆ ಹೋಲಿಸಿದಾಗ, ಪ್ರಸಕ್ತವಿರುವ ಸಾರ್ವಜನಿಕ ಸಾರಿಗೆಯಾದ ಬೆ.i.ಸಾ.ಸಂ ಅಭೂತಪೂರ್ವ ಸಂಖ್ಯೆಯ ಜನರನ್ನು ಒಯ್ಯುತ್ತದೆ
  •    ೫,೫೦೦ ಬೆ.ಮ.ಸಾ.ಸಂನ ಬಸ್‌ಗಳು ಜನಸಂಖ್ಯೆಯ ೪೫%ವನ್ನು ಒಯ್ಯುತ್ತದೆ, ಅಂದರೆ, ದಿನಕ್ಕೆ ೩೮ ಲಕ್ಷ ಮಂದಿ!
  •    ೫,೦೦,೦೦೦ ಕಾರುಗಳು ಜನಸಂಖ್ಯೆಯ ೭%ವನ್ನು ಒಯ್ಯುತ್ತದೆ, ಅಂದರೆ, ೯ ಲಕ್ಷ ಮಂದಿ
  •     ೧೭,೦೦,೦೦೦ ದ್ವಿಚಕ್ರ ವಾಹನಗಳು ಜನಸಂಖ್ಯೆಯ ೨೫ ಪ್ರತಿಶತ ಭಾಗವನ್ನು ಒಯ್ಯುತ್ತದೆ
  •    ಚಲಿಸುವ ವಾಹನಗಳು ಬಳಸುವ ರಸ್ತೆಯ ಸ್ಥಳವಲ್ಲದೆ, ನಿಲ್ಲಿಸಿದ ಖಾಸಗಿ ವಾಹನಗಳು ರಸ್ತೆಯ ೩೦ ಪ್ರತಿಶತ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ.  ಎಲ್ಲ ನಗರವಾಸಿಗಳಿಂದಲೂ ಸಮಾನಾವಾಗಿ ಬಳಕೆ ಆಗಬೇಕಾದ, ಎಲ್ಲರಿಗೂ ಸೇರಿದ ಸಂಪನ್ಮೂಲವಾದ ರೆಸ್ತೆಗಳಿಗೆ ಸಂಬಂಧಿಸಿದಂತೆ, ಖಾಸಗಿ ವಾಹನಗಳ ಬಳಕೆದಾರರು ತಮ್ಮ ಅಳತೆ ಮೀರಿದ ಸಂಪನ್ಮೂಲಗಳ ಕಬಳಿಕೆಗೆ ಕಾರಣವಾಗಿದ್ದಾರೆ.


C. ಆರೋಗ್ಯ ಹಾಗೂ ಸುರಕ್ಷತೆಯ ಅವನತಿ

 ಬೆಂಗಳೂರಿನ ರಸ್ತೆಗಳಲ್ಲಿ ಆಗುವ ಸಾವು-ನೋವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದಲ್ಲದೆ, ಮಾಲಿನ್ಯ ಸಂಬಂಧಿತ ಆರೋಗ್ಯದ ತೊಂದರೆಗಳೂ ಏರಿಕೆಯನ್ನು ಕಂಡಿವೆ.  ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಪ್ರಕಾರ (ಜೂನ್ ೧೪, ೨೦೦೭), ೨೦೦೪ ಹಾಗೂ ೨೦೦೬ರ ನಡುವೆ, ಅಪಘಾತಕ್ಕೆ ತುತ್ತಾದ ಪಾದಚಾರಿಗಳ ಸಂಖ್ಯೆಯು ೪೪%ದಷ್ಟು ಏರಿತು.  ಅತ್ಯಂತ ಅಪಾಯಕಾರಿ ರಸ್ತೆಗಳೆಂದರೆ ಹೊರ ವರ್ತುಲ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಸರ್ಜಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ಮಹದೇವಪುರ ರಸ್ತೆಗಳು.

D. ಸುಗಮ್ಯತೆ / ಸುಲಭಲಭ್ಯತೆ ಹಾಗೂ ಔಚಿತ್ಯತೆ

  •  ಸುಗಮ್ಯತೆ / ಸುಲಭಲಭ್ಯತೆ: ಪುಟ್‌ಪಾತ್ ಉದ್ದ, ಪ್ರಮುಖ ರಸ್ತೆಗಳ ಉದ್ದ ಹಾಗೂ ನಗರದ ಪಾದಚಾರಿಗಳಿಗೆ ಲಭ್ಯವಿರುವ ಸೌಲಭ್ಯಗಳ ಪರಿಮಾಣಗಳ ಪರಿಶೀಲನೆಯ ನಂತರ, ನಡಿಗೆಯ ಯೋಗ್ಯತಾ ಸೂಚಿಯನ್ನು ಲೆಕ್ಕ ಮಾಡಲಾಗುತ್ತದೆ.  ಸೂಚಿ ಅಧಿಕವಾದಷ್ಟೂ, ಆ ನಗರದ ಪಾದಚಾರಿ ಸೌಕರ್ಯಗಳು ಉತ್ತಮವಾಗಿದೆ ಎಂದರ್ಥ.  ಈ ಸೂಚಿಯ ಪ್ರಕಾರ, ಚಂಡೀಘಡಕ್ಕೆ ೦.೯೧, ನವದೆಹಲಿ ೦.೮೭, ಮುಂಬಯಿ ೦.೮೫, ಅಹಮದಾಬಾದ್ ೦.೮೫, ಕೊಲ್ಕತ್ತ ೦.೮, ಪುಣೆ ೦.೮೧, ಚೆನ್ನೈ ೦.೭೭, ಹೈದರಾಬಾದ್ ೦.೬೮, ಜೈಪುರ್ ೦.೬೪ ಹಾಗೂ ಎಲ್ಲದರ ಅಡಿಯಲ್ಲಿ ಬೆಂಗಳೂರಿಗೆ ೦.೬೩ ನೀಡಲಾಗಿದೆ. (ಮೂಲ: ಡಿಎನ್‌ಎ ಇಂಡಿಯಾ, ೨೮/೭/೨೦೦೯)
  •    ಔಚಿತ್ಯತೆ: ಭಾರತದ ಇತರ ಎಲ್ಲ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಹೆಚ್ಚು ದುಬಾರಿಯಾಗಿದೆ.  ಆಶ್ಚರ್ಯಕರವೆಂದರೆ, ಬೆ.ಮ.ಸಾ.ಸಂನ ಸೇವೆಗಳನ್ನು ಬಳಸುವ ಬಹುಸಂಖ್ಯಾತರು ವೋಲ್ವೋ ಬಸ್‌ಗಳನ್ನು ಬಳಸುವುದಿಲ್ಲ, ಆದರೆ ಈ ದುಬಾರಿಯಾದ ಐಶಾರಾಮಿನ ವಾಹನಗಳ ಬಳಕೆಯ ವೆಚ್ಚವನ್ನು ಅನುದಾನಗೊಳಿಸುವಂತೆ ಆಗಿದೆ.  ವಿಪರ್ಯಾಸವೆಂದರೆ, ಬೆ.ಮ.ಸಾ.ಸಂ. ನೀಡುವ ಸೇವೆಗಳ ವಿಷಯದಲ್ಲಿ, ಬಡವರು ಸಿರಿವಂತರಿಗೆ ಅನುದಾನವನ್ನು ನೀಡುವುಂತೆ ಆಗಿದೆ.


E.    ಅತ್ಯಂತ ದುಬಾರಿ ವೆಚ್ಚದ ಮೆಟ್ರೋ ರೈಲು ಯೋಜನೆ

ನಮ್ಮ ಮೆಟ್ರೋ ಅಧಿಕ ವೆಚ್ಚದ ಯೋಜನೆ

  •    ಕೇವಲ ಹಂತ ೧ಕ್ಕೆ ಅಂದಾಜು ಮಾಡಲಾದ ವೆಚ್ಚ ೧೫,೦೦೦ ಕೋಟಿ ರೂಪಾಯಿಗಳು.  ಹಂತ ೧ ಕೇವಲ ೧೦ ಲಕ್ಷ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವುದೆಂದು ಎದುರು ನೋಡಲಾಗಿದೆ.  ಇಂದು ಬೆ.ಮ.ಸಾ.ಸಂ. ೩೮ ಲಕ್ಷ ಪ್ರಯಾಣಿಕರಿಗೆ ಅನುಕೂಲವನ್ನು ಒದಗಿಸಿದೆ. 
  •    ಕೊಲ್ಕತ್ತಾ ಹಾಗೂ ದೆಹಲಿಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ, ಬಳಕೆದಾರರ ಇಂತಹ ಅಂದಾಜುಗಳು ಅತಿರೇಕದ ಆಶಾವಾದವನ್ನು ಬಿಂಬಿಸುತ್ತವೆ.  ದೆಹಲಿಯ ಮೆಟ್ರೋ ಸವಾರಿಯು ಪರಿಷ್ಕೃತಗೊಂಡ ಸವಾರಿಯ ಅಂದಾಜುಗಳ ೨೯%ವಾಗಿದ್ದು, ಅದು ಪ್ರಪ್ರಥಮ ಅಂದಾಜುಗಳ ೨೪ ಪ್ರತಿಶತ ಮಾತ್ರವಾಗಿದೆ!

ಇದಕ್ಕೆ ಬೇಕಾದ ದೊಡ್ಡ ಮೊತ್ತದಿಂದ, ಭವಿಷ್ಯದ ಸರ್ಕಾರಿ ಖರ್ಚುವೆಚ್ಚಗಳ ಮೇಲೆ, ಅದರಲ್ಲೂ ಸಾಮಾಜಿಕ ನ್ಯಾಯದ ಗುರಿ ಹೊಂದಿದ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ, ನಮ್ಮ ಬಳಿ ಹಣವಿಲ್ಲ ಎಂದು ಸರ್ಕಾರ

 

ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ

Rating
No votes yet

Comments