ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.

ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.

ಈ ಸಮಯ ಪರೀಕ್ಷ ಸಮಯ.ವಿದ್ಯಾರ್ಥಿಗಳು ಒಂದು ವರ್ಷದ ಓದನ್ನು ಕೇವಲ ಮೂರು ಗಂಟೆಗಳಲ್ಲಿ ಕುಳಿತು ಉತ್ತರ ಪತ್ರಿಕೆಯ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿರುವ ಸಮಯ ಇಂತಹ ಸಮಯದಲ್ಲಿ ವಿದ್ಯುತ್ ಕಣ್ಣು ಮಚ್ಚಾಲೆಯಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎನ್ನುವುದನ್ನು ಯೋಚಿಸಿಕೊಂಡರೆ ನಿಜಕ್ಕೂ ದುಖವಾಗುತ್ತದೆ. ಏಕೆಂದರೆ ಅದೆಷ್ಟೋ ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕುರಿತಾಗಿ ಚಿಂತಿಸಿ ತಮ್ಮ ಜೀವವನ್ನೇ ತೇದಿರುತ್ತಾರೆ. 

ಇಂತಹ ಸಮಯದಲ್ಲಿ ಕೆ.ಜಿ ಯಿಂದ ಹಿಡಿದು ಪದವಿ ಮಟ್ಟದ ತರಗತಿಯ ವರೆಗೆ ಈ ಎಪ್ರಿಲ್ ಮತ್ತು ಮೇ ತಿಂಗಳು ಪರಿಕ್ಷಾ ತಿಂಗಳಾಗಿವೆ. ಈ ತಿಂಗಳಲ್ಲಿ ರಾಜ್ಯದ ಎಲ್ಲಾ ಕಡೆ ಸೆಕೆಯು ಹೆಚ್ಚಿದ್ದು ಕುಳಿತರೆ ನಿಲ್ಲಲಾಗದೆ ನಿಂತರೆ ಕುಳಿತುಕೊಳ್ಳಲಾಗದ ಪರಿಸ್ಥಿಯು ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಪರೀಕ್ಷಗಳೆಂಬ ಭೂತವು ದಿಢೀರನೆ ಪ್ರತ್ಯಕ್ಷವಾಗಿ ವಿದ್ಯರ್ಥಿಗಳ, ಪಾಲಕರ ಜೀವವನ್ನು ಹಿಂಡುತ್ತದೆ. ಈ ವೇಳೆಯಲ್ಲಿ ವಿದ್ಯುತ್ ಪ್ರಸರಣ ನಿಗಮದವರು ಕೈಕೊಟ್ಟರೆ ಹೇಗಾದೀತು ಪರಿಸ್ಥಿತಿ. ಒಂದೆಡೆ ಬಿಸಿಲಿನ ಝಳ ಮತ್ತೊಂದೆಡೆ ಪರೀಕ್ಷೆಯ ಕಾವು ಈ ಎಲ್ಲ ಕೂಡಿ ಒಟ್ಟಿನಲ್ಲಿ ವಿದ್ಯರ್ಥಿಗಳ ಜೀವವನ್ನು ಹಿಂಡುತ್ತಿವೆ.

ನಮ್ಮ ರಾಜ್ಯದ ಘನ ಸರ್ಕಾರದ ಮುಖ್ಯ ಮಂತ್ರಿಗಳು ಬೆಂಗಳೂರಿನ ಡಬಲ್ ಏ.ಸಿ. ಯಲ್ಲಿ ಕುಳಿತು ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಇಲ್ಲಿ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿಯೆ ಬೇರೆಯಾಗಿರುತ್ತದೆ. 

ಈ ಬಗ್ಗೆ ನೀವೇನಂತಿರಿ?

Rating
No votes yet

Comments