ಗೋವು ಮತ್ತು ಸಾವರ್ಕರ‍್

ಗೋವು ಮತ್ತು ಸಾವರ್ಕರ‍್

Comments

ಬರಹ

ಗೋ ಹತ್ಯೆ ಕುರಿತಂತೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ನಮ್ಮ  ರಾಜ್ಯ ಸರ್ಕಾರವು ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡುವ ಹುನ್ನಾರದಲ್ಲಿದ್ದು ಲಕ್ಷಾಂತರ ಜನರ ಆಹಾರಕ್ಕೆ ಕಡಿವಾಣ ಹಾಕುತ್ತಿದ್ದೆ. ಈ ನಿಟ್ಟಿನಲ್ಲಿ ರಾಜ್ಯದ್ಯಂತೆ ರೈತರು,ದಲಿರತು, ಅಲ್ಪಸಂಖ್ಯಾತರು ಹಿಂದುಳಿದವರು ದನದ ಮಾಂಸವನ್ನು ತಿನ್ನುವ ಜನರು ರೊಚ್ಚಿಗೆದ್ದಿದ್ದಾರೆ. 

ಈ ನಿಟ್ಟಿನಲ್ಲಿ ಹಿಂದು ರಾಷ್ಟ್ರ ಪ್ರತಿಪಾದಕ ವಿನಾಯಕ ದಾಮೋದರ‍್ ಸಾವರ್ಕರ‍್ ಅವರ ಗೋವಿನ ಕುರಿತ ವಿಚಾರಗಳನ್ನು ಮಾರ್ಚ ೩೦ರ ಪ್ರಜಾವಾಣಿ ಹಾಗೂ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ತಿಳಿಸಿದಂತೆ ” ಸಾವರ್ಕರ‍್ ಅವರು ’ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ,ದೇವತೆಯೊಂತೋ ಅಲ್ಲವೆ ಅಲ್ಲ.(ಮಹಾರಾಷ್ಟ್ರ ಶಾರದಾ,ಎಪ್ರಿಲ್ ೧೯೩೫) ಮುಂದುವರಿದು  ಆ ಲೇಖನದಲ್ಲಿ ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ, ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಕಟುಕನೇ ೩೩ ದೇವತೆಗಳಿಗಿಂತ ಪರಾಕ್ರಮಿಯೆ?

ಹಸು ಕರುವಿಗೆ ಮಾತ್ರ ತಾಯಿ ಹಿಂದುಗಳಿಗಲ್ಲ,

ಈ ವಿಷಯಗಳು ಚರ್ಚೆಗೊಳಪಡಬೇಕು. ಹಿಂದುಗಳು ಸಾವಾರ್ಕರ‍್ ರ ಈ ಮಾತುಗಳನ್ನು ನಂಬುವುದಿಲ್ಲವೇ? ಚರ್ಚಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet