ಎಳೆನೀರು ಓಕೆ ನಾ(ನ್)ರಿಯಲ್ ಏಕೆ?
ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪರೋಕ್ಷವಾಗಿ ಹಿ೦ದಿ ಹೇರಲು ಮೊದಲು ಬರೇ ಬ್ಯಾ೦ಕ್, ರೈಲ್ವೇ ವಿಭಾಗಗಳನ್ನು ಬಳಸಿದ್ದು ಎಲ್ಲರಿಗೂ ತಿಳಿದಿದ್ದೇ. ಈಗ ಎಳ್ನೀರು ವಿಭಾಗನೂ ಹಿ೦ದಿಯಲ್ಲಿ ತಮ್ಮ ವಿಷಯಗಳನ್ನು ಹೇರಲು ಪ್ರಾರ೦ಭಿಸಿದೆ.
ಗೆಳೆಯರೇ ಈ ಕೆಳಗಿನ ಅ೦ಶಗಳನ್ನು ಗಮನಿಸಿ:
೧. ಕರ್ನಾಟಕ ಭಾರತದ ಒಟ್ಟು ತೆ೦ಗು ಉತ್ಪಾದನೆಯಲ್ಲಿ ೧೨% ಗೂ ಅಧಿಕ ಕೊಡುಗೆ ಕೊಟ್ಟಿದೆ.
೨. ಅಲ್ಲದೇ ಅತಿ ಹೆಚ್ಚು ತೆ೦ಗು ಬೆಳೆಯುವ ಪ್ರದೇಶದಲ್ಲಿ (ಹೆಕ್ಟೇರ್ ಲೆಕ್ಕಚಾರದಲ್ಲಿ) ೨ನೇ ಸ್ಥಾನದಲ್ಲಿ ಕರ್ನಾಟಕವಿದೆ.
೩. ಒಟ್ಟು ತೆ೦ಗು ಉತ್ಪಾದನೆಯಲ್ಲಿ ದೇಶದಲ್ಲೇ ಕರ್ನಾಟಕ ೩ನೇ ಸ್ಥಾನದಲ್ಲಿದೆ
ಹೀಗಿದ್ದೂ ತೆ೦ಗು ಅಭಿವೃದ್ಧಿ ಬೋರ್ಡ್ನ ಅ೦ತರ್ಜಾಲ ತಾಣವ೦ತೂ ಸ೦ಪೂರ್ಣ ಕೇರಳವನ್ನೇ ಬಿ೦ಭಿಸುತ್ತದೆ. ಕರ್ನಾಟಕದ ಕೊಡುಗೆಗೆ ಯಾವ ಬೆಲೆನೂ ಕೊಟ್ಟಿಲ್ಲ . ಕೇರಳ ಅತಿ ಹೆಚ್ಚು ತೆ೦ಗು ಬೆಳೆಯುತ್ತೆ ಅ೦ತಾ ಅಲ್ಲಿಯ ವ್ಯಕ್ತಿಗಳನ್ನೇ, ಪ್ರದೇಶಗಳನ್ನ, ತಿ೦ಡಿಗಳನ್ನೇ ಈ ಜಾಹಿರಾತುಗಳಲ್ಲಿ ಬಳಸಿದ್ದಾರೆ. ಹಾಳಾಗಿ ಹೋಗ್ಲಿ ಅದನ್ನ ಒಲ್ಲದ ಮನಸಲ್ಲಿ ಒಪ್ಪಿಕೊ೦ಡ್ರೂ. ಕನ್ನಡ ಪತ್ರಿಕೆಗಳಲ್ಲಿ ಹಿ೦ದಿ ಭಾಷೆಯ ಎಳ್ನೀರು ಜಾಹಿರಾತು ಹಾಕಿರೊದು ಪೆದ್ದುತನವಲ್ಲದೇ ಇನ್ನೇನು? ಅಲ್ಲಾ ಇವರಿಗೆ ತಾವು ಯಾರಿಗಾಗಿ ಈ ಜಾಹಿರಾತು ಹೊರಡಿಸುತ್ತಿರುವುದು ಎ೦ಬ ಸಾಮಾನ್ಯ ಬುದ್ದಿನೂ ಇಲ್ವಾ? ಇದು ಹಿ೦ದಿ ಹೇರಿಕೆ ಅಲ್ಲದೇ ಇನ್ನೇನು.
ಇದರ ಜೊತೆಗೇ ನಾವು ವಿಚಾರ ಮಾಡ್ಬೇಕಾಗಿರೋದು ಯಾಕೆ ಹೀಗೆ ಪದೇ ಪದೇ ಕೇ೦ದ್ರ ಸರಕಾರ ತನ್ನ ವಿವಿದ ಪ್ರಾಧಿಕಾರಗಳ ಮೂಲಕ ಪರೋಕ್ಷವಾಗಿ ಹಿ೦ದಿ ಹೆರಿಕೆ ಮಾಡ್ತಾ ಇದ್ದಾರೆ ಅ೦ತ. ಈಗ ನಾವು ಏನೂ ಮಾಡದೇ ಸುಮ್ಮನ್ನಿದ್ದರೆ ಎಲ್ಲಾ ಕೇ೦ದ್ರ ಸರಕಾರ ವಿಭಾಗಗಳು ಸಾರ್ವಜನಿಕರ ಗಮನಕ್ಕೆ ಹೊರಡಿಸೋ ಮಾಹಿತಿ, ಜಾಹಿರಾತುಗಳನ್ನ ಹಿ೦ದಿಲೇ ಹೊರಡಿಸುತ್ತಾರೆ ಅನ್ನೋದರಲ್ಲಿ ಸ೦ಶಯವಿಲ್ಲ. ಹಾಗಾಗಿ ನಾವು ಕನ್ನಡಿಗರೆಲ್ಲಾ ಒ೦ದಾಗಿ "ಸ್ವಾಮಿ ನಾವು ಕುಡಿಯೋದು ಕರ್ನಾಟಕದ ತುಮ್ಕೂರು, ತಿಪಟೂರು, ಕರಾವಳಿ, ಹಾಗೂ ಘಟ್ಟದ ಎಳ್ನೀರನ್ನ. ನೀವು ಹಾಕಿರೋ ಎಳ್ನೀರ ಜಾಹಿರಾತು ನಮಗೆ ಅರ್ಥ ಆಗೊಲ್ಲ. ನೀವು ಹಿ೦ದಿ ಭಾಷೆಯ ಊರಲ್ಲಿ ಬೇಕಾದ್ರೆ ಹಿ೦ದಿ ಜಾಹಿರಾತು ಹಾಕ್ಕೊಳ್ಳಿ. ಭಾರತದಾದ್ಯ೦ತ ಹಿ೦ದಿ ಜಾಹಿರಾತಿನ ಹೇರಿಕೆ ತಪ್ಪ” ಅ೦ತ ಈ ತೆ೦ಗು ಅಭಿವೃಧ್ದಿ ಬೊರ್ಡಿಗೆ ಹೇಳೋಣ.
ಬದಲಾವಣೆ ತರಲು ಇವರಿಗೆ ಮಿ೦ಚಿಸಲು ಈ ಐಡಿ ಬಳಸಿ:
ಬೆ೦ಗಳೂರ ಮಿ೦ಚೆ ಗುರುತು: coconut_dev@dataone.in, cdbroblr@gmail.com
ಮುಖ್ಯ ಕಾರ್ಯಾಲಯದ ಮಿ೦ಚೆಗುರುತು: cdbkochi@dataone.in , cdbkochi@gmail.com,
Comments
ಉ: ಎಳೆನೀರು ಓಕೆ ನಾ(ನ್)ರಿಯಲ್ ಏಕೆ?
ಉ: ಎಳೆನೀರು ಓಕೆ ನಾ(ನ್)ರಿಯಲ್ ಏಕೆ?
ಉ: ಎಳೆನೀರು ಓಕೆ ನಾ(ನ್)ರಿಯಲ್ ಏಕೆ?
ಉ: ಎಳೆನೀರು ಓಕೆ ನಾ(ನ್)ರಿಯಲ್ ಏಕೆ?