ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.
ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕರೆ ಕೂಡಿಸಿದ್ದ ಇರುವೆಗೆ ಬರುವ ನೆಂಟರಿಗೆ ಸಕ್ಕರೆಯ ಹರಳುಗಳನ್ನೇ ಆಸನಗಳನ್ನಾಗಿ ಮಾಡಿ ಜೋಡಿಸಿಟ್ಟಿತ್ತು.ನೆಂಟರು ಬಂದರು.ದೂರದಿಂದ ಬಂದ ಬೀಗರಿಗೆ ಹಸಿವು ತಡೆಯಲಾರದೇ ಕುಳಿತು ಕೊಳ್ಳಲು ಜೋಡಿಸಿದ ಸಕ್ಕರೆ ಆಸನಗಳನ್ನೇ ಮುರಿದು ತಿನ್ನಲಾರಂಭಿಸಿದರು.ನೆಂಟರ ಮನಸಿಗೆ ನೋವಾಗಬಾರದೆಂದು ಮನ್ಮಥ ಏನೂ ಮಾತಾಡಲಿಲ್ಲ.ಹುಟ್ಟಿದ ಹಬ್ಬಕ್ಕಾಗಿ ವಿಶೇಷ ತಿಂಡಿಯೆಂದು ಸಕ್ಕರೆ ಹರಳನ್ನು ಜೇನುತುಪ್ಪದಲ್ಲಿ ಅದ್ದಿ ಸಿದ್ದಪಡಿಸಿದ್ದ ಇರುವೆಗೆ ಬಂದ ನೆಂಟರ ಸಂಖ್ಯೆ ಜಾಸ್ತಿ ಇರುವದರಿಂದ ಒಂದು ಸಕ್ಕರೆ ಹರಳು ಕಡಿಮೆ ಬಿತ್ತು."ಒಂದು ನಿಮಿಷ ಈಗ ಬಂದಬಿಡ್ತೀನಿ" ಎಂದು ತಾನಿರುವ ಮನೆಯ ಯಜಮಾನಿ ಸಕ್ಕರೆ ಡಬ್ಬ ಇಡುವ ಸ್ಥಳಕ್ಕೆ ಬಂದು ಡಬ್ಬದ ಮೇಲೇರಿತು. ಡಬ್ಬದೊಳಕ್ಕೆ ಇಳಿದು ಸಕ್ಕರೆ ಹರಳೊಂದನ್ನು ಬಾಯಲ್ಲಿ ಕಚ್ಚಿಹಿದಡಿದು ನಿಧಾನವಾಗಿ ಮೇಲೇರತೊಡಗಿದಾಗ ಮನೆಯ ಯಜಮಾನಿ ತನ್ನ ಗಂಡನಿಗಾಗಿ ಚಹಾ ಮಾಡಲು ಸಕ್ಕರೆ ಡಬ್ಬ ತೆಗೆದು ಆಗಷ್ಟೇ ಕುದಿಯುತ್ತಿರುವ ನೀರಿಗೆ ಸಕ್ಕರೆ ತೆಗೆದು ಕುದಿಯುವ ನೀರಿಗೆ ಹಾಕಿದಳು.ಅವಳು ಬಿಸಿ ನೀರಿಗೆ ಹಾಕಿದ ಸಕ್ಕರೆಯಲ್ಲಿ ಮನ್ಮಥ ಇರುವೆಯೂ ಸೇರಿತ್ತು.ನೆಂಟರು ಕಾದೇ ಕಾದರು ಮನ್ಮಥ ಮಾತ್ರ ಬರಲೇ ಇಲ್ಲ.
Comments
ಉ: ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.
ಉ: ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.
In reply to ಉ: ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ. by Harish Athreya
ಉ: ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.