ನೀನಿಲ್ಲದೆ...

ನೀನಿಲ್ಲದೆ...

ರವಾಗಿದೆ ಭಾವಗೀತೆ
ರಾಮನಿಲ್ಲದೆ ನೊಂದ ಸೀತೆ
ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ ||
ನಿನ್ನ ಸೇರುವ ದಿನದ ತನಕ
ಒಂಟಿ ಜೀವದ ಮನದ ತವಕ
ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ ||
ಉರಿದು ಸುಡುತಿಹ ಇರದ ಬೇನೆ
ದಿವಸ ಕೊಲ್ಲುವ ಕನಸ ಸೇನೆ
ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ ||
ಕಾಲವಾಯಿತು ಸೇರಿ ನಾವು
ಮುಳ್ಳು ಗಿಡದಲಿ ನಿಂತ ಹೂವು
ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ ||
ಎದೆಯ ಸಾಗರದಲೆಯು ಉಕ್ಕಿ
ಮಾರುವೇಷದ ಬಯಕೆ ಹಕ್ಕಿ
ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ ||
ಎಂದು ಎಲ್ಲಿ ನಮ್ಮ ಭೇಟಿ?
ನಿನ್ನ ಗೀತೆಗೆ ನನ್ನ ಧಾಟಿ
ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ ||

ಭಾರವಾಗಿದೆ ಭಾವಗೀತೆ

ರಾಮನಿಲ್ಲದೆ ನೊಂದ ಸೀತೆ

ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ ||

 

ನಿನ್ನ ಸೇರುವ ದಿನದ ತನಕ

ಒಂಟಿ ಜೀವದ ಮನದ ತವಕ

ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ ||

 

ಉರಿದು ಸುಡುತಿಹ ಇರದ ಬೇನೆ

ದಿವಸ ಕೊಲ್ಲುವ ಕನಸ ಸೇನೆ

ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ ||

 

ಕಾಲವಾಯಿತು ಸೇರಿ ನಾವು

ಮುಳ್ಳು ಗಿಡದಲಿ ನಿಂತ ಹೂವು

ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ ||

 

ಎದೆಯ ಸಾಗರದಲೆಯು ಉಕ್ಕಿ

ಮಾರುವೇಷದ ಬಯಕೆ ಹಕ್ಕಿ

ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ ||

 

ಎಂದು ಎಲ್ಲಿ ನಮ್ಮ ಭೇಟಿ?

ನಿನ್ನ ಗೀತೆಗೆ ನನ್ನ ಧಾಟಿ

ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ ||

Rating
No votes yet

Comments