ಆ ಹುಡುಗ ಹೆಣವಾಗಿ ಹೋದ

ಆ ಹುಡುಗ ಹೆಣವಾಗಿ ಹೋದ

ಕಳೆದ ವರುಷ ನಡೆದ ಘಟನೆ......

 ಕಾರವಾರದ ಅನಿಲ್ ಎಂಬ ಎಸ್.ಎಸ್.ಎಲ್.ಸಿ ಹುಡುಗ ತುಂಬಾ ಜಾಣ . ಪರೀಕ್ಷೆಗಾಗಿ ತುಂಬಾ ಓದಿದ್ದ.ಪರೀಕ್ಷೆಯ ದಿನ ನೆನಪಿಗಾಗಿ ಆ ದಿನದ ವಿಷಯದ ಸಾರಾಂಶದ ಪುಟ್ಟ ಚೀಟಿಯೊಂದನ್ನು ಕಿಸೆಯಲ್ಲಿಟ್ಟು ಕೊಂಡಿದ್ದ. ಪರೀಕ್ಷಾ ಕೊಠಡಿಯೊಳಗೆ ಹೋಗುವಾಗ ಆತನಿಗೆ ಹೊರಗೆ ಬಿಟ್ಟು ಹೋಗಲು ಮರೆತು ಹೋಗಿತ್ತು.ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕರ ತಂಡವೊಂದು ಆಗಮಿಸಿ ಕಾಪಿ ಚೀಟಿಗಾಗಿ ಜಾಲಾಡಿದಾಗ ಅನಿಲ್ ಬಳಿ ಚೀಟಿ ದೊರಕಿತ್ತು. ಆತ ಎಷ್ಟೇ ವಿನಂತಿಸಿ ಕೊಂಡರೂ ಮೇಲ್ವಿಚಾರಕರು ಬಿಡಲಿಲ್ಲ. ಆತನನ್ನು  ಪರೀಕ್ಷಾ ಕೇಂದ್ರದಿಂದ ಹೊರದಬ್ಬಲಾಯಿತು.

ನಿರಾಶನಾದ ಹುಡುಗ ಪರೀಕ್ಷಾ ಕೇಂದ್ರದಿಂದ  ಅಳುತ್ತಾ ಹೊರನಡೆದ.  ಮರುದಿನ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು "ಮನ ನೊಂದ ಹುಡುಗನ  ಆತ್ಮಹತ್ಯೆ"    ಆ ಹುಡುಗ ಹೆಣವಾಗಿ ಹೋದ 

Rating
No votes yet

Comments