ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
ಈ ಚಿತ್ರದಲ್ಲಿರುವ ಮರಿಯನ್ನು ಇಲಿಮರಿಯೆಂದೇ ತಿಳಿದಿದ್ದೆ. ಆಟವಾಡುತ್ತಿದ್ದ ಮಕ್ಕಳು ಕರೆದು ತೋರಿಸಿದರು. ನೋಡಿದರೆ ಅಳಿಲು ಮರಿ. ಅದರ ತಾಯಿಗಾಗಿ ಹುಡುಕಾಡಿದೆವು. ಮಕ್ಕಳೂ ಅವರಿಗೆ ಗೊತ್ತಿದ್ದ ಶಬ್ದಗಳನ್ನು (ಅಳಿಲು ಕೂಗುವಂತೆ!) ಮಾಡಿದರು. ಇವರ ಗಲಾಟೆಗೆ ಹತ್ತಿರ ಅದರ ತಾಯಿಯಿದ್ದರೂ ಓಡಿಹೋಗಿರಬಹುದು.
ಕಾಗೆಗಳು ಊಟಕ್ಕೆ ರೆಡಿಯಾಗಿ ಕಾದು ಕೂತಿದ್ದರಿಂದ, ಅಳಿಲ ಮರಿಯನ್ನು ಮನೆಗೆ ತಂದೆ. ಹಿಂದೊಮ್ಮೆ ಅಳಿಲಮರಿ ಸಾಕಿದ್ದ ಅನುಭವವಿದ್ದರೂ, ಅದು ಕಣ್ಣು ತೆರೆದು ಓಡಾಡುವಷ್ಟು ದೊಡ್ಡದಾಗಿರುವಾಗ ನಮಗೆ ಸಿಕ್ಕಿದ್ದು.
ಇದು ನೋಡಿದರೆ ಹುಟ್ಟಿ ವಾರವೂ ಆಗಿರಲಿಕ್ಕಿಲ್ಲ. ಮೂಗಿಗೂ ಬಾಯಿಗೂ ಅಂತರವೂ ಕಮ್ಮಿಯಿರುವುದರಿಂದ ಪಿಲ್ಲರ್ನಲ್ಲೂ ಹಾಲು ಕೊಡಲು ಸಾಧ್ಯವಿಲ್ಲ. ಹಾಲು ತೆಳ್ಳಗೆ ಮಾಡಿ ಬೆರಳ ತುದಿಗೆ ತಾಗಿಸಿ ಬಾಯಿಗೆ ಸರಿಯಾಗಿ ಹಿಡಿದು ನೆಕ್ಕಿಸುತ್ತಿದ್ದೆವು.
ಕೆಲದಿನಗಳಲ್ಲೇ ಬುಟ್ಟಿ ತುಂಬಾ ಓಡಾಡುತ್ತಿತ್ತು. ೪-೫ ವಾರವಾಗದೇ ಅಳಿಲಮರಿಗಳು ಕಣ್ಣುತೆರೆಯುವುದಿಲ್ಲ. ಕಣ್ಣು ಮುಚ್ಚಿಕೊಂಡೇ ನಮ್ಮ ಸ್ವರದ ಅಂದಾಜಿಗೆ ಬುಟ್ಟಿ ಮೇಲಿನವರೆಗೂ ಹತ್ತಿ ಬರುತ್ತಿತ್ತು. ನಡಿಗೆ ಸ್ಟೈಲ್ ನೋಡಲು ಖುಷಿಯಾಗುತ್ತಿತ್ತು.
ಸಂಜೆ ೬ಕ್ಕೆ ಹಾಲು ಕುಡಿದು ಮಲಗಿದರೆ, ಬೆಳಗ್ಗೆ ಅಲಾರಂ ಇಟ್ಟಂತೆ ೫.೩೦ಗೆ ಸರಿಯಾಗಿ ನಮ್ಮನ್ನು ಎಚ್ಚರಿಸುತ್ತಿತ್ತು
ಇಂಟರ್ನೆಟ್ನಲ್ಲಿ ಅಳಿಲಮರಿಗಳ ಬಗ್ಗೆ, ಅದರ ಆರೈಕೆ ಬಗ್ಗೆ ವಿವರ ಹುಡುಕಿದ್ದೆ. ಬಹಳ ಜಾಗ್ರತೆ ವಹಿಸಿದ್ದೆವು. ಆದರೂ ಒಂದು ರಾತ್ರಿ ಭೇದಿಯಾಗಿ ಅಳಿಲ ಮರಿ ನಮ್ಮನಗಲಿತು. ನಿದ್ರಿಸಿದಂತೆ ಇದ್ದ ಅಳಿಲಮರಿಯನ್ನು, ಗಿಡದ ಬುಡದಲ್ಲಿ ಹೊಂಡ ತೆಗೆದು ಮಲಗಿಸಿ, ಎರಡು ಹನಿ ಕಣ್ಣೀರಿನೊಂದಿಗೆ ಮಣ್ಣುಮುಚ್ಚಿದೆವು. ಬೀದಿಬದಿ ಮರಗಳು ಕಮ್ಮಿಯಾಗುತ್ತಿದೆ. ಮರಗಳಿಗಿಂತ ಮನೆಗಳ ಎತ್ತರ ಏರುತ್ತಾ ಇದೆ. ಅಳಿಲುಗಳು ಒಂದು ಮರದಿಂದ ಇನ್ನೊಂದಕ್ಕೆ ಹೋಗಲು ರಸ್ತೆ ದಾಟಿ ಅಥವಾ ಟೆರೆಸ್ ಮೇಲಿಂದ ಹೋಗಬೇಕು. ಈ ಸಮಯದಲ್ಲಿಯೇ ಹೊಂಚು ಹಾಕಿ ಕುಳಿತ ಬೆಕ್ಕುಗಳಿಗೆ ಆಹಾರವಾಗುತ್ತಿದೆ. ಕಳೆದ ವಾರ ಹದ್ದಿನಂತಹ ಒಂದು ಹಕ್ಕಿ ಒಂದು ದೊಡ್ಡ ಅಳಿಲನ್ನೇ ಹಿಡಿಯಿತು. ಕಾಗೆಗಳೆರಡು ಓಡಿಸಿ,ಓಡಿಸಿ ಅದರ ಕೈಯಿಂದ ಅಳಿಲನ್ನು ಕಸಿದು ತಿಂದವು. ಆಹಾರ ಸರಪಣಿ... :(
ಅದು ಸರಿ. ರಸ್ತೆ, ಸ್ಮಾರಕ, ಮೆಟ್ರೋ, ಅಭಿವೃದ್ಧಿ ಎಂದೆಲ್ಲಾ ಮರಗಳನ್ನೇ ಕಡಿಯುತ್ತಿದ್ದಾರೆ.
ಕಳೆದು ಹೋದ ಮರಗಳನ್ನು, ರಸ್ತೆಬದಿ ಗೋಡೆಗಳ ಚಿತ್ರದಲ್ಲಿ ನೋಡಿ ಆನಂದಿಸಬಹುದು.
ಬಸ್ಗಳಿಗೆ ರಾಜಹಂಸ, ಐರಾವತ ಎಂದಂತೆ, ಚಂದಾ ವಸೂಲಿ ವಾಹನಕ್ಕೆ ಚೀತಾ ಎಂದಂತೆ, ಸಣ್ಣ ವಾಹನಗಳಿಗೆ ಅಳಿಲು,ಗಿಳಿ,ಗುಬ್ಬಿ ಎಂದೆಲ್ಲಾ ಹೆಸರಿಟ್ಟು ಆನಂದಿಸೋಣ.
-ಗಣೇಶ.
Comments
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
In reply to ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ... by abdul
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
In reply to ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ... by abdul
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
In reply to ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ... by ಗಣೇಶ
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
In reply to ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ... by manjunath.hosur
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...
In reply to ಉ: ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ... by koushikgraj
ಉ: ಸೀತೆಯ ಕಣ್ಣೀರು