ಕ್ರೀಡೆ ಎಂಬುದೇ ಸ್ಫೂರ್ತಿ - ಫೋಟೋಗಳು ಹೇಳಿದ ಕಥೆ

ಕ್ರೀಡೆ ಎಂಬುದೇ ಸ್ಫೂರ್ತಿ - ಫೋಟೋಗಳು ಹೇಳಿದ ಕಥೆ

೧. ಗೆಲುವು ನಮ್ಮದಾಗಬೇಕಾದರೆ ಒಗ್ಗಟ್ಟು, ಪರಸ್ಪರ ಸಹಕಾರ ಅಗತ್ಯ. ಏಕೆಂದರೆ ಮನುಷ್ಯ ಸಂಘ ಜೀವಿ. 

೨. ಒಗ್ಗಟ್ಟಿನಷ್ಟೇ ತಂತ್ರಗಾರಿಕೆ ಕೂಡ ಅನಿವಾರ್ಯ. ಅದು ಕ್ರೀಡೆಯೇ ಇರಲಿ ಇಲ್ಲವೇ ಬದುಕೇ ಇರಲಿ.

೩. ಗೆಲುವು ಬರುವ ಸಮಯದಲ್ಲಿ ಸಾಧನೆಗೆ ಬೆನ್ನು ಹಾಕದಿರಿ.

೪. ಇಷ್ಟೆಲ್ಲ ಆದ ನಂತರ ತಾಳ್ಮೆ ಸಾಕಾರವಾಗಿರುತ್ತದೆ ಜೊತೆಗೆ ಜಯದ ಮಾಲೆಯೂ ಕೂಡ.

(ಈ ಚಿತ್ರಗಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವದಲ್ಲಿ ತೆಗೆದವುಗಳು. ಮಂಗಳೂರು ವಿ.ವಿ ಸಂಶೋಧನಾ ವಿದ್ಯಾರ್ಥಿಗಳು ಮೊದಲ ಬಾರಿಗೆ ತಮ್ಮದೇ ತಂಡವೊಂದನ್ನು ರಚಿಸಿಕೊಂಡು ಓವರ್ ಆಲ್ ಚಾಂಪಿಯನ್ ಶಿಪ್ ನಲ್ಲಿ ಮೂರನೇ ಸ್ಥಾನ ಪಡೆದರು. ವಿವಿಧ ವಿಭಾಗಗಳಿಗೆ ಸೇರಿದ ಸಂಶೋಧಕರು ಪರಸ್ಪರ ಪರಿಚಿತರಾಗುವಲ್ಲಿಯೂ ಕೂಡ ಈ ಸ್ಪರ್ಧೆಗಳು ಸಹಾಯ ಮಾಡಿದವು)

 

Rating
No votes yet

Comments