ಸಂಪದದ ಆತ್ಮೀಯ ಬಳಗಕ್ಕೊಂದು ಪುಟ್ಟ ಮನವಿ

ಸಂಪದದ ಆತ್ಮೀಯ ಬಳಗಕ್ಕೊಂದು ಪುಟ್ಟ ಮನವಿ

ಆತ್ಮೀಯರೇ,

        ನಮಸ್ಕಾರಗಳು .ಕಳೆದ 20 ವರುಷಗಳಿಂದ ಮಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾನು ಇಲ್ಲಿಯ ಸುತ್ತಲಿನ ಹಳ್ಳಿಯ ಶಿಕ್ಷಕರನ್ನೆಲ್ಲಾ ಕಲೆಹಾಕಿ "ಗುರುಬಳಗ" ಎಂಬ ಟೀಮ್ ಕಟ್ಟಿ  ಆ ಮೂಲಕ ಗ್ರಾಮೀಣ ಮಕ್ಕಳಿಗಾಗಿ ಉಚಿತ ರಂಗ ತರಬೇತಿ,ಬೇಸಿಗೆ ಶಿಬಿರ,ಯೋಗಾಸನ ತರಬೇತಿ,ಇಂಗ್ಲೀಷ ತರಬೇತಿ ,ಮುಂತಾದ ಹಲವಾರು ಕಾರ್ಯಕ್ರಮ ಕಳೆದ 5 ವರುಷಗಳಿಂದ ಸಂಘಟಿಸುತ್ತಾ ಬಂದಿದ್ದೇವೆ.

    ಈ ಸಲದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ "ಎಸ್.ಎಸ್.ಎಲ್.ಸಿ ನಂತರ ಮುಂದೇನು?" ಎಂಬ ಮಾಹಿತಿ ಶಿಬಿರ ಸಂಘಟಿಸುತ್ತಿದ್ದು ಈ ಮೂಲಕ 38  ಬಡ ಕುಟುಂಬದ ಜಾಣ ವಿದ್ಯಾರ್ಥಿಗಳಿಗೆ ನೆರವಾಗುವದು ನಮ್ಮ ಸದುದ್ದೇಶ. ದಯವಿಟ್ಟು  ಈ ವಿದ್ಯಾರ್ಥಿಗಳಿಗೆ "ಎಸ್.ಎಸ್.ಎಲ್.ಸಿ ನಂತರ ಮುಂದೆ ಯಾವ ಯಾವ ಹೊಸ ಆಯ್ಕೆಗಳಿವೆ ಎಂಬ ಬಗ್ಗೆ  ಹಾಗೂ ಅವರಿಗೆ ಯಾವುದಾದರೂ ಶಿಷ್ಯವೇತನ ದೊರೆಯುವ ಅವಕಾಶಗಳ ಬಗ್ಗೆ ತಮಗೆ ತಿಳಿದಿರುವ ಮಾಹಿತಿ ನೀಡಲು ಈ ಮೂಲಕ "ಗುರುಬಳಗದ" ಪರವಾಗಿ ತಮ್ಮಲ್ಲಿ ವಿನಂತಿಸುತ್ತಿದ್ದೇನೆ.

               ತಮ್ಮ ಮಾಹಿತಿಯಿಂದ ಗ್ರಾಮೀಣ ಬಡ ಪ್ರತಿಭೆಗಳಿಗೊಂದು ದಾರಿತೋರಬಹುದೆಂಬ ಹಂಬಲಿಕೆಯೊಂದಿಗೆ

                                         ತಮ್ಮವ

                         ನಾರಾಯಣ ಭಾಗ್ವತ. ಶಿಕ್ಷಕ

 

Rating
No votes yet

Comments