ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 7
* ಜಾತಿ ಪದ್ಧತಿ ಹೇಗೆ ಇದ್ದರೂ ಕೆಲವರು ತಮ್ಮ ವಯಕ್ತಿಕ ಪದ್ಧತಿಯನ್ನು ರೂಡಿಗೊಳಿಸಿಕೊಂಡಿರುತ್ತಾರೆ. ನನ್ನೊಬ್ಬ ಬ್ರಾಹ್ಮಣ ಮಿತ್ರ, ಮಿತ್ರರನ್ನು ಕರೆದುಕೊಂಡು ಹೋಗಿ ಮಧ್ಯಾನ್ಹದ ಊಟದ ಸಮಯದಲ್ಲಿ ಮಸಾಲೆ ದೋಸೆ ತಿನ್ನಿಸಿದ. ಅವನ ಪದ್ದತಿಯೇ ಹಾಗೆ. ಏನನ್ನು ಯಾವಾಗ ತಿನ್ನಬೇಕು ಉಣ್ಣಬೇಕು ನಿರ್ಭಂಧವಿಲ್ಲ. ಒಮ್ಮೆ ಅವನಮನೆಗೆ ಹೋಗಿದ್ದೆವು. ಮೂರುದಿನ ಅವನ ಮನೆಯಲ್ಲಿ ವಾಸವಾಗಿದ್ದು, ಹಂಪಿಯನ್ನು ನೋಡಿ ಸಂಜೆಗೆ ಹಿಂತಿರುಗಿ ಬರುತ್ತಿದ್ದವು. ಆ ಮೂರುದಿನಗಳಲ್ಲಿ ಒಂದುದಿನವೂ ಒಂದು ತುತ್ತು ಅನ್ನವೂ ನಮ್ಮ ಹೊಟ್ಟೆಗೆ ಹೋಗಲಿಲ್ಲ. ಹೊರಹೋದಾಗ ಸಿಕ್ಕಿದ್ದು ತಿನ್ನುತ್ತಿದ್ದೆವು. ಮನೆಗೆ ಬಂದಾಗ ಅವರು ಸಿಕ್ಕಿದ್ದು ತಿನ್ನಿಸುತ್ತಿದ್ದರು. ನನ್ನ ಶ್ರೀಮತಿಗೆ ಅನ್ನ ಇಲ್ಲದಿದ್ದರೆ ಜೀವವೇ ಹೋದ ಅನುಭವ ವಾಗುತ್ತದೆ. ಹೀಗಾಗಿ ಬಾಯಿಬಿಟ್ಟೇ ಹೇಳಿದಳು "ಅನ್ನ ಮಾಡಿ" .ಜಪ್ಪಯ್ಯ ಎಂದರೂ ಆ ಮಹಾತಾಯಿ ಅನ್ನ ಮಾಡಲೇ ಇಲ್ಲ!!
* ಹೋಟೆಲಗಳಲ್ಲಿ ಊಟದ ಜೊತೆಗೆ ಮೊಸರನ್ನು ಕೊಡುತ್ತಾರೆ. ಕೆಲವರು ಅದಕ್ಕೆ ಸಕ್ಕರೆಯನ್ನು ಹಾಕಿಕೊಂಡು ಊಟದ ಕೊನೆಯಲ್ಲಿ ತಿನ್ನುತ್ತಾರೆ. ಕೆಲವರು ಅನ್ನದ ಜೊತೆಗೆ ಕಲಸಿಕೊಂಡು ಊಟ ಮಾಡುತ್ತಾರೆ. ಅಪವಾದವನ್ನು ಹೊರತಿಪದಿಸಿ, ಮೊದಲನೆಯವರು ಬ್ರಾಹ್ಮಣೇತರರಾಗಿದ್ದು. ಎರಡನೆಯವರು ಬ್ರಾಹ್ಮಣರಾಗಿರುವ ಸಾಧ್ಯತೆ ಹೆಚ್ಚಿಗೆ ಇದೆ.
ಅದೇರೀತಿ ಹಾಗಲಕಾಯಿ ಎಂದರೆ ಬಯಲ್ಲಿ ನೀರೂರಿಸಿಕೊಳ್ಳುವವರು ಬ್ರಾಹ್ಮಣರೆಂತಲೂ ವಾಕರಿಸುವವರನ್ನು ಬ್ರಾಹ್ಮಣೇತರರೆಂತಲೂ ವಿಭಾಗಿಸಬಹುದಾಗಿದೆ.
* ನಾವು ವಾಸವಾಗಿರುವ ಬಾಡಿಗೆ ಮನೆಯ ಕಕ್ಕಸು ಹೊಂಡವು ತುಂಬಿತ್ತು. ಅದನ್ನು ಬಕೆಟ್ ನಲ್ಲಿ ಎತ್ತಿ ದೂರ ಚೆಲ್ಲಲು ಬಬ್ಬ ಕೆಲಸಗಾರ ಬಂದಿದ್ದ. ಮದ್ಯಾಹ್ನ ರಣ ಬಿಸಿಲು ಸುಡುತ್ತಿತ್ತು. ಊಟದ ಸಮಯ ಮೀರಿಹೋಗಿತ್ತು .ಕೆಲಸ ಇನ್ನೂ ಬಾಕಿ ಇತ್ತು. ನನ್ನ ಹೆಂಡತಿ, "ಊಟಕ್ಕೆ ಕೊಡಲಾ?” ಎಂದು ವಿಚಾರಿಸಿದಳು. ಸರಿ ಕೊಡಿ ಎಂದ. ನೀರಿಲ್ಲದ ಊರು ಅದು. ಒಂದೇ ಒಂದು ತಂಬಿಗೆ ನೀರಿನಲ್ಲಿ ಹೊಲಸೆಲ್ಲವನ್ನೂ ತೊಳೆದುಕೊಂಡ! ಸೋಪನ್ನು ಸಹ ಹಚ್ಚಿಕೊಳ್ಳಲಿಲ್ಲ.!! ಅಲ್ಲೇ ಪಕ್ಕದಲ್ಲಿ ಕುಳಿತು, ಸಾವಧಾನವಾಗು ಊಟ ಮಾಡಿ ತನ್ನ ಕೆಲಸ ಮುಂದುವರೆಸಿದ. ನಮ್ಮಂತವರಿಗಾದರೆ ಮೂರುಮೂರುಸಾರೆ 'ಡೆಟ್ಟಾ;ಲ್'' ಸಾಬೂನಿನ ಸ್ನಾನ ಸಾಕಾಗುತ್ತಿರಲಿಲ್ಲ.! ಸಾಧಾರಣವಾಗಿ ಇಂತಃ ಕೆಲಸವನ್ನು ಮಾಡುವವರು ಸೆರೆಯನ್ನು ಕುಡಿದಿರುತ್ತಾರೆ. ಆದರೆ ಆತ ಕುಡಿದಿರಲಿಲ್ಲವೆಂದು ನನ್ನ ಅನಿಸಿಕೆ
* ಉಡುಪಿ ಹೋಟೆಲ್ ಗೆ ಹೋದಾಗ ಒಂದು ಇಡ್ಲಿ, ಎರಡು ಮಸಾಲೆದೋಸೆ ಇತ್ಯಾದಿಯಾಗಿ ಸಂಖ್ಯೆಯನ್ನು ಹೇಳಲೇ ಬೇಕು. ಕಾಕಾ ಹೋಟೆಲ್ (ಮಲಯಾಳಿ ಮುಸಲ್ಮಾನರ ಹೋಟೆಲ್ ) ಹೋದಾಗ ಸಂಖ್ಯೆಯನ್ನು ಹೇಳಬೇಕಾಗಿಲ್ಲ. ತಿಂಡಿಯ ಹೆಸರನ್ನು ಮಾತ್ರ ಹೇಳಿದರೆ ಸಾಕು. (ಅಲ್ಲಿಯ ಖಡಕ್ ಚಹಾಕುಡಿದಮೇಲೆ, ಬೇರೆಲ್ಲಾ ಚಹಾವನ್ನು ನಿವಾಳಿಸಿ ಒಗೆಯಬೇಕು.) ಚಹಾದ ಜೊತೆಗೆ ಸಾಮಾನ್ಯವಾಗಿ ಬೆಣ್ಣೆ ಬಿಸ್ಕಿತ್ ಕೊಡುತ್ತಾರೆ. ಬನ್ ಇತ್ಯಾದಿಗಳೂ ಇರುತ್ತದೆ. ಒಂದು ಪ್ಲೇಟಿನಲ್ಲಿ ಎತ್ತರದ ರಾಶಿಯಲ್ಲಿ ಅದನ್ನು ಟೇಬಲ್ ಮೇಲೆ ತಂದಿಡುತ್ತಾರೆ. ಎಷ್ಟೇಲ್ಲಾ ಕೊಟ್ಟಾರಲ್ಲಪ್ಪಾ ಎಂದು ಆಷ್ಚರ್ಯ ವಾಗುತ್ತದೆ. ನಮಗೆ. ಬೇಕಾದಷ್ಟನ್ನು ಮಾತ್ರ ತಿನ್ನಬಹುದು. ಬಿಲ್ಲನ್ನು ಕೊಡುವುದಕ್ಕಿಂತ ಮುಂಚೆ ಆ ಪ್ಲೇಟಿನಲ್ಲಿ ಎಷ್ಟು ಖರ್ಚು ಆಗಿದೆ ಎಂಬುದನ್ನು ಎಣಿಸಿ ನೋಡಿ ಬಿಲ್ಲನ್ನು ಹೇಳುತ್ತಾನೆ. ಉಳಿದದ್ದನ್ನು ಹಿಂದಿರುಗಿ ಒಳಗೆ ಒಯ್ಯುತ್ತಾನೆ. ಮುಂದಿನವನಿಗೆ ಅದನ್ನೇ ಮುಂದಿಡುತ್ತಾನೆ.
* ಆದರೆ ಕೇರಳದಲ್ಲಿ ಚಹಾ ಹಾಗಿರುವುದಿಲ್ಲ. ನೀರುಕುಡಿಯುವ ಗ್ಲಾಸಿನ ತುಂಬಾ ಹಾಲು ಹಾಕಿ, ಅದಕ್ಕೆ ಚಿಟಿಕೆ ಚಹಾಪುಡಿಯನ್ನು ಸೇರಿಸಿ ತೆಳ್ಳನೆಯ ಚಹಾ ಕುಡಿಯುವುದೇ ಅಲ್ಲಿಯವರ ಪದ್ಧತಿ. ಅಷ್ಟು ದೊಡ್ಡ ಗ್ಲಾಸಾದರೂ ಕರ್ನಾಟಕಕ್ಕಿಂತ ಕಡಿಮೆ ಬೆಲೆ.
ಹುಬ್ಭಳ್ಳಿಯಲ್ಲಿ, ಎರಡು ಕೇರಳೀಯರು, ಕ್ಯಾಂಟೀನ್ ಗೆ ಬಂದು, ಒಂದು ಚಹಾ ಒಂದು ಹಾಲು ಹಾಗೂ ಒಂದು ಖಾಲಿ ಗ್ಲಾಸಿಗೆ ಆರ್ಡರ್ ಮಾಡಿದರು. ಸರ್ವರ್ ತಂದು ಕೊಟ್ಟಮೇಲೆ, ಅರ್ಧ ಚಹವನ್ನು ಖಾಲಿ ಗ್ಲಾಸಿಗೆ ಹಾಕಿ, ಹಾಲನ್ನು ಎರಡೂ ಗ್ಲಾಸಿಗೆ ಸೇರಿಸಿ ಉದ್ದ ಚಹಾ ಮಾಡಿಕೊಂಡು ತ್ುಪ್ತಿಯಿಂದ ಕುಡಿದರು.
* ಸಾಧಾರಣವಾಗಿ ಮುಸಲ್ಮಾನರು ಊಟವಾದ ತಕ್ಷಣ ಚಹಾವನ್ನು ಕುಡಿಯುತ್ತಾರೆ.
* “ ಹಸಿ ಗೋಡಂಬಿಯ ಪಲ್ಯಮಾಡಿದ್ದರು ತಿನ್ನೋಣ ಎಂದರೆ ಕೊಬ್ಬರೀ ಎಣ್ಣೆಯಲ್ಲಿ ಮಾಡಿದ್ದಾರೆ! ಎಲ್ಲಾ ಕೆಡಿಸಿಬಿಟ್ಟರು!!” ಮಂಗಳೂರಿನ ಮದುವೆ ಒಂದಕ್ಕೆ ಹೋಗಿಬಂದ ಬೆಂಗಳೂರಿಗ ಅಲವತ್ತುಕೊಂಡ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯವರಿಗೆ ತುಪ್ಪಕ್ಕಿಂತ ರುಚಿಯಾದದ್ದು ,ಕೊಬ್ಬರೀ ಎಣ್ಣೆ.. ಅದೇನಾದರೂ, ಮಂಗಳೂರಿನಲ್ಲಿ ಅಂದು ಗೊಡಂಬಿ ಪಲ್ಯವನ್ನು ಕೊಬ್ಬರಿ ಎಣ್ಣೆಯಲ್ಲಿ ಮಾಡದೇ. ಕಡಲೇಕಾಯಿ ಎಣ್ಣೆಯಲ್ಲಿ ಮಾಡಿದಿದ್ದರೆ, ಅಲ್ಲಿಯ ಜನ, ಯಜಮಾನನನ್ನು "ಮಂಡೆ ಸಮ ಉಂಟಾ ಮಾರಾಯ್ರೇ?” ಎಂದು ಪ್ರಶ್ನಿಸದೇ ಇರುತ್ತಿರಲಿಲ್ಲ.!!!
* ಕೇರಳದ ಹಾಯ್ವೇ ದಲ್ಲಿ ಹೋಗುವಾಗ ಸಂಜೆಯ ಚಹದ ಸಮಯವಾಗಿತ್ತು. ನಮ್ಮ ವಾಹನ ಉದ್ದಕ್ಕೂ ಓಡುತ್ತಿತ್ತು. ಕನಿಷ್ತ ಅರವತ್ತು ಎಪ್ಪತ್ತು ಕಿಲೋಮೀಟರ ಹೋದರೂ ನಮ್ಮಿಂದ ಚಹಾ ಕುಡಿಯುವುದು ಸಾಧ್ಯವಾಗಲಿಲ್ಲ. ರಸ್ತೆಯ ಇಕ್ಕೆಲದಲ್ಲೂ ಊರು, ಮನೆ ಇತ್ತು. ಮನೆ ಎಷ್ಟು ದಟ್ಟವಾಗಿತ್ತು ಎಂದರೆ ಎರಡು ಮನೆಯ ನಡುವೆ ಹಿಂದಿನೂರಿನ ಅಂತ್ಯ ಮುಂದಿನೂರಿನ ಪ್ರಾರಂಭದ ಸೈನ್ ಬೋರ್ಡ್ ಇದೆ. ಅದೇರೀತಿ, ಕಿಲೋಮೀಟರಿಗೆ ಐದಾರು ಚಹಾದಂಗಡಿಗಳೂ ಕಂಡು ಬಂದವು. ಆದರೆ ಅದರಲ್ಲಿ ನಮ್ಮ ಜನ ಅಲ್ಲಿ ಚಹಾ ಕುಡಿಯಲು ಸಿದ್ಧರಿರಲಿಲ್ಲ. ಏಕೆಂದರೆ ಆ ಚಹಾದಂಗಡಿಯ ಗಲ್ಲಾ ಪೆಟ್ಟಿಗೆಯ ಮೇಲೆ, ದೂರದಿಂದಲೇ ಕಾಣುವಂತೆ ಕೋಳಿಮೊಟ್ಟೆಯನ್ನು ಜೋಡಿಸಿಟ್ಟಿರುತ್ತಿದ್ದರು.
ಗೋವಾದಲ್ಲಾದರೂ ಶಾಕಾಹಾರಿ ಹೋಟೆಲ್ ಸಿಗಬಹುದು. ಆದರೆ ಕೇರಳದಲ್ಲಿ ಬಲುಕಷ್ಟ.!!
Comments
ಉ: ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 7