ಲಘು ಲೇಖನ
ತಾಯಿಯ ಮಡಿಲು
"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ... ಆಹಾ! ಈ ಮೇಲಿನ ವಾಕ್ಯವನ್ನು ಕೇಳುತ್ತಿದ್ದಂತೆಯೇ ನಮ್ಮ ಭಾರತ ಭೂಮಿ ಎಷ್ಟು ಧನ್ಯ ಎಂದು ತಿಳಿಯುತ್ತದೆ .. ಅದಕ್ಕೆ ಶ್ರೀರಾಮ ರಾಮಾಯಣದಲ್ಲಿ ಈ ಮಾತನ್ನು ಹೇಳಿದ್ದಾನೆ ..ನಿಜವಾಗಿಯೂ ಹೆತ್ತ ತಾಯಿ ,ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು.. ನಮ್ಮನ್ನು ಪಾಲನೆ ,ಫೋಷಣೆ ಮಾಡುತ್ತಾ ನಮಗೆ ದು:ಖವಾಗದ ಹಾಗೆ ನೋಡಿಕೂಳ್ಳುವ ತಾಯಿ ,,ನಮ್ಮನ್ನು ಬೆಳೆಸಲು ಪಡುವ ಪಾಡು ಅಷ್ಟಿಷ್ಟಲ್ಲ .. ಅದೇ ರೀತಿ ನಮ್ಮ ಭೂತಾಯಿ ತನ್ನ ಮಡಿಲಲ್ಲಿ ಸಾವಿರಾರು ,ಕೋಟಿ ಕೋಟಿ ಮಕ್ಕಳನ್ನು ಹಿಡಿದಿದ್ದಾಳೆ ...
"ಅಮ್ಮ " ಎನ್ನುವ ಪದ ಎಷ್ಟು ಸುಂದರ, ಮಧುರ. ಅದಕ್ಕೆ ತಾನೇ ಮಗು ತನ್ನ ಮೊದಲ ನುಡಿ ಪ್ರಾರಂಭಿಸುವುದು ಅಮ್ಮ ಎಂಬ ಶಬ್ದದಿಂದಲೇ. ಅವಳ ಪ್ರೀತಿ ,ಮಮಕಾರ ,ಆರೈಕೆಯಿಂದಲೇ ಮಗು ಬೆಳೆಯುತ್ತದೆ. ಆಕೆ ತನ್ನ ಸರ್ವಸ್ವವನ್ನು ತನ್ನ ಮಕ್ಕಳ ಪೋಷಣೆಗಾಗಿ ಮುಡಿಪಾಗಿ ಇಡುತ್ತಾಳೆ..ಅವಳು ಆಸ್ತಿಯಲ್ಲಿ ಎಷ್ಟೇ ಬಡವಲಾಗಿದ್ದಳು, ಅವಳ ಪ್ರೀತಿಯಲ್ಲಿ ಸ್ವಲ್ಪವು ಬಡತನ ಇಲ್ಲ . ಎಷ್ಟೇ ಕಷ್ಟ ಬಂದರೂ ತನ್ನ ಮಕ್ಕಳು ಚೆನ್ನಾಗಿ ಇರಲಿ ಎಂದು ಬಯಸುತ್ತಾಳೆ ...ತಾನು ಉಪವಾಸವಿದ್ದು ತನ್ನ ಮಕ್ಕಳ ಪೋಷಣೆ ಮಾಡುತ್ತಾಳೆ..
ಇಂತಹ ತಾಯಿಯ ಸೃಷ್ಟಿಕರ್ತನಾದ ಭಗವಂತನಿಗೆ ನಾನು ಧನ್ಯ. ನಾನು ನನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೇನೆ. ಈಗಲೂ ಸಹ ನಾನು ಅವಳ ಮಡಿಲಲ್ಲಿ ಮಲಗುವೆ. ಆ ಹಿತವೇ ಬೇರೆ. ಅಬ್ಬಾ! ಆಕೆ ನನ್ನನ್ನು ಪ್ರೀತಿಯಿಂದ ಓಲೈಸುವ ಪರಿಯೇ ವಿಚಿತ್ರವಾದದ್ದು. ಅಮ್ಮಾ ಇದು ನನ್ನ ಸಂಪದ ಪತ್ರಿಕೆಯ ಮೊದಲ ಬರಹ. ಅದಕ್ಕೆ ನಾನು ನಿನ್ನ ಸ್ಮರಣೆಯೊಂದಿಗೆ ಪ್ರಾರಂಭಿಸುತ್ತಿದ್ದೇನೆ... ಅಮ್ಮ ಈ ನನ್ನ ಬರಹ ನಿನಗೆ ಸಮರ್ಪಿತವಾಗಲಿ.
Comments
ಉ: sanna kate.
ಉ: ಸಣ್ಣ ಕಥೆ
ಉ: ಸಣ್ಣ ಕಥೆ