ಹಿಂದು-ಮುಸ್ಲಿಮ್ ಸೌಹಾರ್ಧತೆಗೆ ಸಾಕ್ಷಿಯಾದ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ
ಭಟ್ಕಳದಲ್ಲಿ ಇತ್ತೀಚೆಗೆ ಜರುಗಿದ ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವವು ಸುಲ್ತಾನ್ ಪಳ್ಳಿ ಸಮೀಪವಿರುವ ಚಿರ್ಕಿನ್ ಮುಹಮ್ಮದ್ ಅನ್ಸಾರ್ ಸಾಹೇಬರ ಕುಟುಂಬದ ಅನುಮತಿಯನ್ನು ಪಡೆಯುವುದರೊಂದಿಗೆ ಚಾಲನೆಯನ್ನು ಪಡೆದು ಸಾವಿರಾರು ಜನರ ಸಮ್ಮುಖದಲ್ಲಿ ಇಲ್ಲಿನ ಹಿಂದು ಮುಸ್ಲಿಮ್ ಸೌರ್ಹಾದತೆಗೆ ಸಾಕ್ಷಿಯಾಯಿತು. ಕರಾವಳಿಯ ಅರಬ್ಬಿ ಸಮುದ್ರದ ಕಿನಾರೆಯಲ್ಲಿರುವ ಸುಂದರ ನಗರ ಭಟ್ಕಳ. ಇಲ್ಲಿ ಬಹು ಸಂಸ್ಕೃತಿ ಹಾಗು ಬಹುಧರ್ಮಿಯರು ತಲೆತಲಾಂತರದಿಂದಲೂ ಕೂಡಿ ಬಾಳಿ ಸೌಹರ್ಧತೆಯನ್ನು ಮೆರೆದಿದ್ದು ಇತ್ತಿಚೆಗೆ ಇದಕ್ಕೆ ಕಳಂಕವೆಂಬಂತೆ ಕೆಲವೊಂದು ರಾಜಕೀಯ ಪ್ರೇರಿತ ಕೋಮುಗಲಭೆಗಳಿಂದಾಗಿ ಇಲ್ಲಿ ಅಗಾಗ ಹೋಗೆ ಕಾಣಿಸುತ್ತಿರುತ್ತದೆ. ಇಲ್ಲಿ ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬರುವ ಐತಿಹಾಸಿಕ ಚೆನ್ನಪಟ್ಟಣ ಮಾರೂತಿ ದೇವಸ್ಥಾನದ ರಥೋತ್ಸವವು ಈ ಎಲ್ಲ ಕಲಹ ವೈಷಮ್ಯಗಳ ಮಧ್ಯೆಯು ತನ್ನ ಸೌಹಾರ್ಧತೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ವಿವಿಧ ಧರ್ಮ, ಸಮುದಾಯಗಳ ಸಾಮರಸ್ಯದ ಸಂಗಮದಂತಿರುವ ಈ ಚೆನ್ನಪಟ್ಟಣ ಮಾರೂತಿ ದೇವರ ರಥೋತ್ಸವಕ್ಕೆ ತನ್ನದೇ ಆದ ಶತ-ಶತಮಾನಗಳ ಇತಿಹಾಸವನ್ನು ಹೊಂದಿದ್ದು ಒಂದು ಅಂದಾಜಿನ ಪ್ರಕಾರ ಸುಮಾರು ೨೦೦ ವರ್ಷಗಳ ಹಿಂದೆ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ರಥೋತ್ಸವಕ್ಕೆ ಚಾಲನೆಯನ್ನು ನೀಡಲು ಒಬ್ಬ ಗೌರವಯುತ ವ್ಯಕ್ತಿಯು ಅದನ್ನು ವಹಿಸಿಕೊಳ್ಳಬೇಕಿತ್ತು. ಈ ಮಹತ್ತರ ಜವಾಬ್ದಾರಿಯನ್ನು ಅಂದಿನ ಕಾಲದ ಭಟ್ಕಳದ ಮುಸ್ಲಿಮ್ ನವಾಯತ್ ಸಮುದಾಯದ ಶಾಬಂದ್ರಿ ಸಿದ್ದಿ ಮುಹಮ್ಮದ್ ಎಂಬ ಓರ್ವ ಶ್ರೀಮಂತರು ಈ ಜವಾಬ್ದಾರಿಯನ್ನು ವಹಿಸಿಕೊಂಡು ರಥೋತ್ಸವಕ್ಕೆ ಸಂಬಂಧಿಸಿದಂತೆ ಬ್ರಟೀಷ್ ಸರ್ಕಾರಕ್ಕೆ ಜಾಮೀನಾಗಿ ನಿಂತು ರಥೋತ್ಸವವನವನ್ನು ಸುಗಮವಾಗಿ ನೆರವೇರುವಂತೆ ಮಾಡಿದ್ದರು ಎನ್ನಲಾಗಿದ್ದು ಅದರ ಗೌರವ ಪ್ರತೀಕವೆಂಬಂತೆ ಇಂದಿಗೂ ಪ್ರತಿ ವರ್ಷ ರಾಮನವಮಿಯೆಂದು ಶಾಂಬಂದ್ರಿ ಸಿದ್ದಿ ಮುಹಮ್ಮದ್ ರ ಮೂರನೇ ಪೀಳಿಗೆಯಾಗಿರುವ ಶಾಂಬಂದ್ರಿ ಚಿರ್ಕಿನ್ ಮುಹಮ್ಮದ್ ಅನ್ಸಾರ್ ಎನ್ನುವವರ ಮನೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳೊಂದಿಗೆ ಆಗಮಿಸಿ ಅವರಿಗೆ ವೀಳೆದೈಲೆಯನ್ನು ಅರ್ಪಿಸಿ ಅವರಿಂದ ಅನುಮತಿಯನ್ನು ಪಡಯುವ ವಾಡಿಕೆಯುಂಟು.
ಮಧ್ಯಾಹ್ನ ವಾದ್ಯಘೋಷದೊಂದಿಗೆ ಆಗಮಿಸಿದ ಚೆನ್ನಪಟ್ಟಣ ದೇವಸ್ಥಾನದ ಆಡಳಿತ ಮಂಡಳಿಯ ಟ್ರಷ್ಟಿ ಸುರೇಂದ್ರ ಶಾನುಭಾಗ ಅವರು ಚಿರ್ಕಿನ್ ಮುಹಮ್ಮದ್ ಅನ್ಸಾರ್ ಮನೆಗೆ ತೆರಳಿ ಅವರನ್ನು ಆತ್ಮೀಯವಾಗಿ ರಥೋತ್ಸವಕ್ಕೆ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿರ್ಕಿನ್ ಶಾಬಂದ್ರಿ ಮುಹಮ್ಮದ್ ಅನ್ಸಾರ್ ನೂರಾರು ವರ್ಷಗಳಿಂದ ನಾವು ಇಲ್ಲಿ ಹಿಂದು ಮುಸ್ಲಿಮರು ಸಹೋದರರಂತೆ ಬಾಳುತ್ತಿದ್ದೇವೆ. ನಮ್ಮ ಹಿರಿಯರು ಇಲ್ಲಿನ ಹಿಂದುಗಳನ್ನು ಅತ್ಯಂತ ಪ್ರೀತಿಯಿಂದ ಗೌರವಿಸುತ್ತಿದ್ದರು. ತಮ್ಮ ಜೀವಕ್ಕೆ ಜೀವವನ್ನು ಕೊಡಲು ಅವರು ಸಿದ್ದರಿದ್ದರು. ಅದಕ್ಕಾಗಿಯೆ ಅಂದು ಬ್ರಿಟೀಷ್ರರಿಗೆ ಹಿಂದುಗಳ ಪರವಾಗಿ ಜಾಮೀನು ನೀಡಿ ರಥೋತ್ಸವವನ್ನು ಸುಗಮವಾಗಿ ನೆರವೇರುವಂತೆ ಮಾಡಿದರು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷವು ನಮ್ಮಲ್ಲಿಗೆ ಬಂದು ಅತ್ಯಂತ ಗೌರವದೊಂದಿಗೆ ನಮ್ಮನ್ನು ರಥೋತ್ಸವಕ್ಕೆ ಆಹ್ವಾನವಿತ್ತು ನಮ್ಮ ಅನುಮತಿ ಪಡೆಯುತ್ತಾರೆ. ಈ ಭಟ್ಕಳದಲ್ಲಿ ಎಷ್ಟೆ ವಿಷಮ ಪರಿಸ್ಥಿತಿ ಇದ್ದಾಗಲೂ ಈ ಪ್ರಕ್ರಿಯೆ ಮುಂದುವರೆದುಕೊಂಡು ಬಂದಿದೆ. ಇದು ಭಟ್ಕಳದ ಹಿಂದು ಮುಸ್ಲಿಮರ ಸೌಹಾರ್ಧತೆಗೆ ಸಾಕ್ಷಿಯಾಗಿದೆ. ಹೊರಗಿನ ದುಷ್ಟಶಕ್ತಿಗಳು ಹಾಗೂ ರಾಜಕೀಯ ಪ್ರೇರಿತ ವಿಷದ ಕೆನ್ನಾಲಗೆ ಇಲ್ಲಿ ಎಷ್ಟೆ ಚಾಚಿಕೊಂಡರೂ ಕೂಡ ಅದು ಫಲಕಾರಿಯಾಗದು ಏಕೆಂದರೆ ಇಲ್ಲಿ ಹಿಂದು ಮುಸ್ಲಿಮರು ಇದೇ ರೀತಿಯಲ್ಲಿ ಸೌಹಾರ್ಧತೆಯಿಂದಲೆ ಇರುವರು ಎಂದು ಹೇಳಿದ ಅವರು ಓಂ ಶಾಂತಿ ಶಾಂತಿ ಎಂಬ ಸಂಸ್ಕೃತ ಶ್ಲೋಕವನ್ನು ಪಠಿಸಿ ಇಲ್ಲಿ ಯಾವಾಗಲೂ ಶಾಂತಿಯು ನೆಲೆಸಿರಲಿ ಎಂದು ಹಾರೈಸಿದರು.
ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಂದ್ರ ಶಾನುಭಾಗ ಅವರು ಮಾತನಾಡಿ ಈ ಚೆನ್ನಪಟ್ಟಣ ಹನುಮಂತ ರಥೋತ್ಸವವು ಇಲ್ಲಿನ ಹಿಂದು-ಮುಸ್ಲಿಮರು ಯಾವ ರೀತಿಯಲ್ಲಿ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿದ್ದರೆ ಎಂಬುದನ್ನು ತೋರಿಸಿಕೊಡುತ್ತದೆ. ನಾವು ಇಲ್ಲಿ ಎಲ್ಲರೂ ಶಾಂತಿಯಿಂದಲೆ ಜೀವಿಸುತ್ತಿದ್ದೇವೆ ಎಂದರು.
Comments
ಉ: ಹಿಂದು-ಮುಸ್ಲಿಮ್ ಸೌಹಾರ್ಧತೆಗೆ ಸಾಕ್ಷಿಯಾದ ಚೆನ್ನಪಟ್ಟಣ ಹನುಮಂತ ...
In reply to ಉ: ಹಿಂದು-ಮುಸ್ಲಿಮ್ ಸೌಹಾರ್ಧತೆಗೆ ಸಾಕ್ಷಿಯಾದ ಚೆನ್ನಪಟ್ಟಣ ಹನುಮಂತ ... by ksraghavendranavada

In reply to ಉ: ಹಿಂದು-ಮುಸ್ಲಿಮ್ ಸೌಹಾರ್ಧತೆಗೆ ಸಾಕ್ಷಿಯಾದ ಚೆನ್ನಪಟ್ಟಣ ಹನುಮಂತ ... by savithru