ನಾ ನಿನ್ನ ಮರೆಯಲಾರೆ

ನಾ ನಿನ್ನ ಮರೆಯಲಾರೆ

ಕಳೆಯಿತೇನು ನಾಲ್ಕು ವರುಷ  
ನಿನ್ನನೊಯ್ದು ಕಾಲನು
ನಾ ನಿನ್ನ ಮರೆಯಲಾರೆನು.

ಗುಟ್ಟೊಂದ ಹೇಳಿದ ಪರೋಪಕಾರಿ ನೀನು
ಚಂದದ ನುಡಿಯನಾಡುವ
ಗಂಧದ ಗುಡಿಯ ರಾಜಕುಮಾರನು

ದೇಶ ಕಾಲ ಗಡಿಯ ಮೀರಿ ,
ಸಾಕ್ಷಾತ್ಕಾರದೊಲವ  ತೋರಿ ,
ಸಂಧ್ಯಾರಾಗದಿಂಪು  ತಂದ ಸಿಪಾಯಿ ರಾಮನು.

ತಾಯಿಗೆ ತಕ್ಕ ಮಗ ,ಜಗಮೆಚ್ಚಿದ ಮಗ
ಮನಮೆಚ್ಚಿದ ಮಡದಿಗೊಡೆಯ
ಹೃದಯಗೆದ್ದ  ನೀನೊಬ್ಬ ಕಳ್ಳ , ಒಳಗಣ್ಣ ತೆರೆದ ಬೇಡರ ಕಣ್ಣಪ್ಪನು    

ನಟಸಾರ್ವಭೌಮ -ಗಾನಗಂಧರ್ವ
ಅಪೂರ್ವಸಂಗಮದ  ಒಂದು ಮುತ್ತಿನ ಕತೆ  ನೀನು
ನಿನ್ನ ಕಂಡ ಭಾಗ್ಯವಂತರು  ನಾವು . ಅಮರ ನಿನ್ನ ನೆನಪು.

ಪದ್ಮಭೂಷಣ, ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ  
ಕಳೆಯಲೇಳು ಸಾವಿರವರುಷ  ನಾ ನಿನ್ನ ಮರೆಯಲಾರೆನು.

Rating
No votes yet

Comments