ಈ ನರ್ಸಮ್ಮನ ಬಗ್ಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ!

ಈ ನರ್ಸಮ್ಮನ ಬಗ್ಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ!

  

ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ**

ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾಜೀ ಆಗಿದಾಳಲ್ರೀ

 


ದಾವೆಯಲಿ ಅವಗುಣವಾದರೆ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಸಮಸ್ಯೆ

ನರ್ಸಮ್ಮನಿಗೆ ಮಾನ ಹೋದರೆ ಹೋಗಲಿ ಕಾಸಾದರೂ ಸಿಗಲಿ ಎಂಬಾಸೆ

 

ಮಠಾಧೀಶರು ಹೇಳಿದ ಕೂಡ್ಲೇ ಈ ನರ್ಸಮ್ಮನ ಹೋದ ಮಾನ ಬಂತೇ

ಅಲ್ಲಾ ಅಬಕಾರಿ ಸಚಿವರ ಕಡೆಯಿಂದ ಕೊಟ್ಯಾನುಕೋಟಿ ಕೈವಶವಾಯ್ತೇ

 

ಅಂದು ಜನತೆಯ ಮುಂದೆ ಗೋಳಾಡಿ ಈಗ ಗುಟ್ಟಿನಲ್ಲಿ ರಾಜಿ ಆಗಿದ್ದೇಕೆ

ಸಹಾನುಭೂತಿ ತೋರಿದ್ದ ಜನತೆಗೆ ಸಮಜಾಯಿಷಿ ನೀಡುತ್ತಿಲ್ಲವಲ್ಲ ಏಕೆ

 

ನ್ಯಾಯಾಲಯದಲ್ಲಿ ದಾವೆ ಹೂಡಿ ಈಗ ರಾಜಿ ಆಗುವುದೆಂದರೆ ಅದಕ್ಕೇನರ್ಥ

ದಂಡ ವಿಧಿಸಬಾರದೇ ನ್ಯಾಯಾಲಯದ ಸಮಯ ಮಾಡಿರುವುದಕ್ಕೆ ವ್ಯರ್ಥ

 

ದೂರದರ್ಶನದಲ್ಲಿ ಬಂದು ಕೂಗಾಡಿ ಗುಟ್ಟಲ್ಲಿ ರಾಜೀ ಮಾಡಿಕೊಳ್ಳುವ ಈ ಶೈಲಿ

ಹೊಸದೇನೂ ಅಲ್ಲ ಮೊನ್ನೆ ಮೊನ್ನೆ ಆಡಿದ್ದರು ಐಂದ್ರಿತಾ ರೇ ಮತ್ತು ನಾಗತೀಹಳ್ಳಿ

*************

ಆತ್ರಾಡಿ ಸುರೇಶ ಹೆಗ್ಡೆ

**ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?


 

 
Rating
No votes yet

Comments