ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪
54 nishu-mane.blogspot.com ಮತ್ತೊಂದು ಮಗುವಿನ ಕುರಿತಾದ ಬ್ಲಾಗ್ , ಫೋಟೋಗಳು , ವಿಡಿಯೋಗಳು , ಬರಹಗಳೊಂದಿಗೆ ತುಂಬ ಚೆನ್ನಾಗಿದೆ . ತಪ್ಪದೇ ನೋಡಿ. *****
55 chamarajsavadi.blogspot.com ಪತ್ರಕರ್ತ ಮತ್ತು ಸಂಪದಿಗ ಚಾಮರಾಜ ಸವಡಿಯವರ ಬ್ಲಾಗು ಇದು . ಸಂಯಮದ ಪ್ರಬುದ್ಧ ಬರವಣಿಗೆಗಳು ಇಲ್ಲಿವೆ . ಬಾಲ್ಯದ ನೆನಪುಗಳು , ಅನುಭವಗಳು , ಪತ್ರಕರ್ತ ಜೀವನದ ಒಳನೋಟಗಳು , ವಿಶಿಷ್ಟ ಚೇತನೆ ಮಗಳ ಕುರಿತು ಮನ ಕಲಕುವ ಬರಹಗಳು ಇಲ್ಲಿವೆ. ****
56. matumanikya.blogspot.com ಇದೂ ಅವರದೇ ಬ್ಲಾಗು , ಇಲ್ಲೂ ಕೆಲವು ಬರಹಗಳಿವೆ .
57 roopashriblog.blogspot.com ಪರಿಸರಗಣಪತಿ ಬಗ್ಗೆ ಮಾಹಿತಿ , ವೀಡಿಯೋ , ಡಿಸೈನರ್ ಕವನಗಳು , ಅಮೇರಿಕಾದಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆಯ ಫೋಟೋಗಳು , ಮಂಡ್ಯದ ಹತ್ತಿರ ಇರುವ ಹೊಸಹೊಳಲು ಊರಿನ ಹೊಯ್ಸಳ ಶೈಲಿಯ ದೇವಾಲಯದ ಚೆತ್ರಗಳು , ಟಂಗ್ ಟ್ವಿಸ್ಟರ್ ಗಳು , ಬಾವ್ಬಾಬ್ ( ಕಲ್ಪವೃಕ್ಷ ಎಂದು ಕರೆಸಿಕೊಳ್ಳುವ ದೊಡ್ದ ಬೊಡ್ಡೆಯ ಮರ - ಸವಣೂರಿನಲ್ಲೂ ಇದೆ . ಕೃಷ್ಣ ತಂದದ್ದು ಅಂತ ಕೇಳಿದ್ದೀನಿ) ಈ ಮರದ ಬಗ್ಗೆ ವಿಡಿಯೋ ಕೂಡ ಇದೆ . ವಿಚಿತ್ರ ಆಕಾರದ ಮರಗಳ ಫೋಟೋಗಳು , ಮರಳಿನಲ್ಲಿ ಕಲಾಕೃತಿಗಳ ಫೋಟೋಗಳು , , ರುದ್ರಾಕ್ಷಿಗಳ ಬಗ್ಗೆ ಲೇಖನ , ಬಣ್ಣಬಣ್ಣ್ದ ದ ಪಣತಿಗಳು , ನೀವು ಎಲ್ಲೂ ಓದಿ/ನೋಡಿ/ಕೇಳಿರಲಿಕ್ಕಿಲ್ಲದ ಬಗೆಬಗೆಯ ಗಣಪನ ಚಿತ್ರಗಳು . ***** . ಮುಂದಿನ ಒಳ್ಳೆಯ ಬ್ಲಾಗ್ ಕೂಡ ಇವರದೇ
58 puttiprapancha.blogspot.com ಮಕ್ಕಳ ಬಾಲಲೀಲೆಗಳನ್ನು ಕಂಡು ಸಂತೋಶಪಡದವರಾರು ? ಮಗಳ ಆಟಪಾಟ ನಲಿವುಗಳನ್ನು ಇಲ್ಲಿ ದಾಖಲಿಸಿದ್ದಾರೆ ***** ಮಕ್ಕಳ ಕುರಿತಾದ ಇಂಥ ಇತರ ಬ್ಲಾಗಗಳಿಗೆ ಕೊಂಡಿಯನ್ನೂ ಕೊಟ್ಟಿದ್ದಾರೆ .
59 puttanaputa.blogspot.com ರಾಶಿ ರಾಶಿ ಶಿಶುಸಾಹಿತ್ಯ - ಚೆನ್ನಾಗಿವೆ *****
60. balavana.wordpress.com ಮಕ್ಕಳಿಗಾಗಿ ಕತೆಗಳು , ಸುಪ್ರಸಿದ್ಧ ಶಿಶುಕವನಗಳು , ಮಕ್ಕಳಿಗಾಗಿ ಸ್ತೋತ್ರ (!), ಯೂಟ್ಯೂಬ್ ನಲ್ಲಿ ಒಳ್ಳೊಳ್ಳೆಯ ಕನ್ನಡ ಹಾಡುಗಳ ಕೊಂಡಿಗಳು ಇಲ್ಲಿವೆ . ಒಂದು ಸಲ ತಿರುವಿ ಹಾಕಿಬಿಡಿ! ****
61. bukwrm.wordpress.com ಮಕ್ಕಳ ಪುಸ್ತಕಗಳ ಪರಿಚಯ - ಮುಖಪುಟದ ಚಿತ್ರಗಳು ಮಾತ್ರ ಏಕೋ ? ಕಡಿಮೆ ಪೋಸ್ಟ್ ಗಳು **
62 vedasudhe.blogspot.com
ದೇಶದ ಅಧ್ಯಾತ್ಮಿಕ ಪರಂಪರೆ , ಸನಾತನ ಮೌಲ್ಯಗಳು , ವೇದಗಳು ಅಭಿರುಚಿ , ಅಭಿಮಾನ ಇರುವ ಸಂಪದಿಗ ಹರಿಹರಪುರ ಶ್ರೀಧರ್ ಅವರ ಬ್ಲಾಗ್ , ಅಶ್ವಮೇಧ ಯಾಗ ಶಬ್ದದಲ್ಲಿನ ಅಶ್ವ ಕುದುರೆ ಅಲ್ಲವಂತೆ , ಇಂದ್ರಿಯಗಳಂತೆ ಅವುಗಳನ್ನ ಹತೋಟಿಯಲ್ಲಿಡುವುದು ಅಂತ ಲೂ ಇನ್ನೊಂದೆಡೆ ಅಶ್ವ ಎಂದರೆ ರಾಷ್ಟ್ರ ಅಂತಲೂ ಅಶ್ವಮೇಧ ಅಂದರೆ ರಾಷ್ಟ್ರಗಳನ್ನು ಒಗ್ಗೂಡಿಸುವುದು ಅಂತಲೂ ಹೇಳಿದ್ದಾರೆ. ಆದರೆ ಅಶ್ವಮೇಧಯಾಗದಲ್ಲಿ ಕುದುರೆಯ ಪಾತ್ರ ಇದ್ದೇ ಇದೆಯಲ್ಲ ? ರಾಜರುಗಳ ಕತೆಗಳಲ್ಲಿ , ಅಶ್ವಮೇಧ ಯಾಗದ ವಿಧಿವಿಧಾನಗಳಲ್ಲಿ ? ಇದು ನನ್ನ ಪ್ರಶ್ನೆ .
"ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ" ಎಂದು ಇಲ್ಲಿನ ಬರಹವೊಂದರಲ್ಲಿ ಲೇಖಕರು ಹೇಳಿದ್ದಾರೆ .
ಈ ಬ್ಲಾಗಿನಲ್ಲಿ ಈವರೆಗೆ ವೇದಗಳ ಬಗೆಗೆ ಅಭಿಮಾನ ವ್ಯಕ್ತವಾಗಿದೆ , ವೇದಗಳ ಬಗೆಗೆ ಏನೂ ಮಹತ್ವದ ಮಾಹಿತಿ ಬಂದಿಲ್ಲ . ಮುಂದೆ ಬರಬಹುದು ಎಂದು ಆಶಿಸೋಣ .
Comments
ಉ: ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪
In reply to ಉ: ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪ by hariharapurasridhar
ಉ: ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪