ಸಂಪದ ಸ್ವಯಂವರ

ಸಂಪದ ಸ್ವಯಂವರ

ಸಣ್ಣದಾಗಿ ಒಂದ್ಸ್ವಲ್ಪ ಕಾಲೆಳೆಯೋಣ ಎನ್ನಿಸ್ತಿತ್ತು ಅದಕ್ಕೆ ಈ ವಿಷಯ ಹುಡುಕಿಕೊಂಡೆ.

ಸಂಪದಿಗರಲ್ಲಿ ತುಂಬಾ ಜನ (ಹುಡುಗರು) ಮದುವೆಗೆ ಸಿದ್ದರಿದ್ದರೂ ನಮಗೆ ಒಂದೂ ಮದುವೆ ಊಟನೆ ಸಿಗ್ತಾ ಇಲ್ಲ. ಸಿಗುವ ಲಕ್ಷಣಗಳು ಕಾಣಿಸ್ತಾ ಇಲ್ಲ. ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಪ್ರಶ್ನೆಗೆ ಉತ್ತರ ಹೀಗಿದೆ. ಒಂದು ಅರ್ಹ ಹುಡುಗಿ ಸಂಪದದ ಸದಸ್ಯಳಾಗಿ "ನಾನು ಸಂಪದಕ್ಕೆ ಹೊಸಬಳು" ಎಂದು ಬರೆದರೆ ಸಾಕು. ಅದಕ್ಕೆ ಮುಗಿ ಬೀಳುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸಾಕು.

ಅರ್ಹ ಸಂಪದಿಗ ಅಭ್ಯರ್ಥಿಗಳೇಕೆ ಪ್ರಯತ್ನಿಸಬಾರದು. ನಮಗೂ ಬೇಗ ಮದುವೆ ಊಟ ಸಿಗಬಹುದೆನ್ನುವ ಬಯಕೆ.

ಸದ್ಯಕ್ಕಂತೂ ಸಂಪದದ ಕರ್ತೃ ಹರಿಪ್ರಸಾದ್ ನಾಡಿಗ್ ಅವರ ಮದುವೆ ಊಟವಷ್ಟೆ ಗಟ್ಟಿಯೇನೋ? ಹರಿ ಈ ವಿಷಯವನ್ನು ನೀವು ಗುಟ್ಟಾಗಿಡ್ಬೇಕೂಂತ ಅನ್ಕೊಂಡಿದ್ರೇನೊ? ಅದನ್ನು ನಾನು ಬಯಲು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ.

 ಮನೆಯಲ್ಲಿ ನಡೆಯವ ವಧು ಸಂದರ್ಶನಗಳನ್ನು ತಪ್ಪೆನ್ನುವ ಮಹಿಳಾವಾದಿಗಳು, ಒಂದು ಹೆಣ್ಣನ್ನು ಕೂಡಿಸಿಕೊಂಡು ಆಕೆಗೆ ರೇಟಿಂಗ್ ಕೊಡುವ ಈ ಕಾರ್ಯಕ್ರಮವನ್ನೇಕೆ ವಿರೋಧಿಸುತ್ತಿಲ್ಲ?

Rating
No votes yet

Comments