ಲೋಹಿತಂತ್ರಾಂಶದ ಕೆಲಸ ಸ್ಥಗಿತ!

ಲೋಹಿತಂತ್ರಾಂಶದ ಕೆಲಸ ಸ್ಥಗಿತ!

Comments

ಬರಹ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕನ್ನಡದ ಹೊಸ ಟೈಪಿಂಗ್ ಮತ್ತು ಪದಸಂಸ್ಕಾರಕ ತಂತ್ರಾಂಶವಾದ ಲೋಹಿತಂತ್ರಾಂಶದ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಅದರ ಕರ್ತೃ ಘೋಷಿಸಿದ್ದಾರೆ.

ಆದರೆ ಹಲವಾರು ಒತ್ತಡಗಳಿಂದ ಮತ್ತು ವೈಯಕ್ತಿಕವಾಗಿ ತೊಂದರೆಯಾಗುತ್ತಿರುವುದರಿಂದ ತಂತ್ರಾಂಶ ಅಭಿವೃದ್ಧಿ ನಿಲ್ಲಿಸಲಾಗಿದೆ ಮತ್ತು ತಂತ್ರಾಂಶ ಡೌನ್ ಲೋಡ್ ಗಾಗಿ ಲಭ್ಯವಿಲ್ಲ ಎಂದು www.lodyaashi.com ನಲ್ಲಿ ಹೇಳಲಾಗಿದೆ.

ಈವರೆಗೆ ಹೆಚ್ಚು ಬಳಕೆಯಲ್ಲಿದ್ದ ಬರಹ, ನುಡಿಗಳ ಟೈಪಿಂಗ್ ಅನುಕೂಲಗಳನ್ನು ಮತ್ತಷ್ಟು ಹೊಸ ಸೌಲಭ್ಯಗಳೊಂದಿಗೆ ತರಲು ಲೋಹಿತಂತ್ರಾಂಶ ಪ್ರಯತ್ನಿಸಿತ್ತು. ಬಹಳಷ್ಟು ಜನ ಇದರ ಬಳಕೆಯನ್ನೂ ಶುರುಮಾಡಿದ್ದರು. ಮೊನ್ನೆ ತಾನೆ ಲೋಹಿತಂತ್ರಾಂಶದ IME ಕೂಡ ಬಿಡುಗಡೆಯಾಗಿತ್ತು. ಈ ಬಳಿಕ ಇನ್ನೂ ಹೆಚ್ಚಿನ ಬಳಕೆದಾರರು ಅದರ ಉಪಯೋಗ ಪಡೆಯುವುದು ಖಾತ್ರಿಯಾಗಿತ್ತು.

ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ಲೋದ್ಯಾಶಿ ಅವರ ಜೊತೆಯಲ್ಲಿ ಅದಕ್ಕೆ ಸಹಕರಿಸಿದ ಕೆಲವರು ಸಂಪದದಲ್ಲಿಯೂ ಇದ್ದಾರೆ ಎಂದು ನನ್ನ ತಿಳುವಳಿಕೆ. ಕನ್ನಡದ ಮಟ್ಟಿಗೆ ಇಂತಹ ಪ್ರಯೋಗಗಳು ಅತೀ ಕಡಿಮೆ ಇರುವಾಗಲೇ ಹೀಗೆ ಈ ಕೆಲಸ ನಿಂತಿರುವುದು ಆಶ್ಚರ್ಯಕರ ಮತ್ತು ಆಘಾತಕಾರಿ. ಇದಕ್ಕೆ ಕಾರಣವೇನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet