ರಾಜೇಶ್ವರಿ ಮಹಾತ್ಮೆ

ರಾಜೇಶ್ವರಿ ಮಹಾತ್ಮೆ

ಸಂಪದದಲ್ಲಿ ಬಿಸಿ ಬಿಸಿಯಾದ ವಾಗ್ಯುದ್ಧ, ಚರ್ಚೆ ಸಾಮಾನ್ಯ. ಅತ್ಯಂತ ಗಂಭೀರವಾದ ಲೇಖನಗಳು, ದೊಡ್ಡ ರೀತಿಯ ಚರ್ಚೆಗೆ ಎಡೆ ಮಾಡಿ ಕೊಡುತ್ತವೆ, ಸಾಕಷ್ಟು attack, counter attack, sniping ಎಲ್ಲಾ ಮಾಮೂಲು. all is fair in love and war ಅಂತಾರಲ್ಲ ಹಾಗೆ. ದೊಡ್ಡ ಪ್ರಮಾಣದ hostilities ಮುಗಿದ ನಂತರ ಎಲ್ಲರೂ ಮತ್ತೊಮ್ಮೆ ಮಿತ್ರರೇ. calm before storm ಅಂತಾರೆ ಆಂಗ್ಲ ಭಾಷೆಯಲ್ಲಿ, ಇಲ್ಲಿ ಸಂಪದ ದಲ್ಲಿ calm after storm.


ಈಗ ನಮ್ಮ ಮುಂದೆ ನಿಂತಿರುವ ಪ್ರಶ್ನೆ "ಲಿಂಗ" ದ್ದು. ಶಿವಲಿಂಗವೂ ಅಲ್ಲ, ಮಹಾಲಿಂಗವೂ ಅಲ್ಲ. ಅಥವಾ ಇಲ್ಲಿ ಯಾರಾದರೂ ಲಿಂಗ ಬದಲಾವಣೆ ಮಾಡಿ ಕೊಂಡಿದ್ದಾರೆಯೇ? ಅದೂ ಅಲ್ಲ. "ಹಮಾಲಿ ಕನಸಿನ" ಬಗ್ಗೆ ಬರೆದ writer (writer ಪದಕ್ಕೆ ಲಿಂಗದ ಪ್ರಾರಬ್ದ ಇಲ್ಲದಿರುವುದರಿಂದ ಈ ಪದ ಬಳಸಿದ್ದೇನೆ) ಅವರ ಲಿಂಗ ಯಾವುದಿರಬಹುದು ಎಂದು ತುಂಬಾ ಜನ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನಾನೂ ಸೇರಿ ಕೆಲವರ ಅಭಿಪ್ರಾಯ ಈ writer ಪುಲ್ಲಿಂಗ  ವರ್ಗಕ್ಕೆ ಸೇರಿದವ ಎಂದು, ಇನ್ನೂ ಕೆಲವರಿಗೆ ಈ ಅನುಮಾನ  ಸುಳ್ಳಾಗಿ writer ಸ್ತ್ರೀ ಲಿಂಗವೇ ಆಗಿರಲಿ ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಾ ಚರ್ಚೆಯಲ್ಲಿ ಮಗ್ನರಾಗುವ ಆಸೆ. ನನಗಾದರೋ ಆ ಮಂಡಿಗೆಯ ಅವಶ್ಯಕತೆ ಇಲ್ಲ. ಇರೋ ಮಂಡಿಗೆಯನ್ನೇ  ಸಂಭಾಳಿಸಿದರೆ ಸಾಕು. ತರೂರ್, ತಿವಾರಿ ಥರ ಥರಾವರಿ ಮಂಡಿಗೆ ನನಗೆ ಬೇಡ, ಅದಕ್ಕೆ ಅವಕಾಶ ಇದ್ದರೂ ( ನಾವು ನಾಲ್ಕು ಮದುವೆ ಆಗಬಹುದಲ್ಲ?). ಈಗ ಈ ಲಿಂಗ ಸಮಸ್ಯೆಗೆ ಒಂದು ಪರಿಹಾರವಾಗಿ ಸಂಪದ ನಿರ್ವಾಹಕ ತಂಡ ಮಧ್ಯೆ ಪ್ರವೇಶಿಸಲಿ. ಇಲ್ಲಿ ತಲೆ ಕೆಡಿಸಿ ಕೊಂಡವರ ಇರುವ ನಾಲ್ಕು ಕೂದಲೂ ಉದುರಿ ತಮ್ಮ ಮನದನ್ನೆಯರ ಕೆಂಗಣ್ಣಿಗೆ ಗುರಿಯಾಗುವುದು ಬೇಡ. ಸಂಸಾರದಲ್ಲಿನ ಸುಖ ಶಾಂತಿ ಬಹು ಬೇಗ ಕೆಡುವ ಮೊದಲು ಈ ಪ್ರಶ್ನೆಯನ್ನೂ ಬಗೆಹರಿಸಲಿ ಸಂಪದ. ಇಲ್ಲದಿದ್ದರೆ ಈ ಮಾವೋ ಹಿಂಸೆ, ಯೂರೋಪಿನ ಹೊಗೆ (ಯುರೂಪನ್ನು ಆವರಿಸಿರುವ volcanic dust), ತರೂರ್ ನ ಹೊಸ ಪ್ರೇಯಸಿ ಮತ್ತು ಸಾಹಸ ಇವೆಲ್ಲವೂ ತೆರೆಯ ಹಿಂದೆ ಸರಿಯುವ ಅಪಾಯವಿದೆ.


ಹೆಣ್ಣು ಮಾಯೆ. ಈ ಮಾಯೆ ನಮ್ಮ ಚಿತ್ತವನ್ನೆಲ್ಲಾ ಮಾಯವಾಗಿಸುವ ಮುನ್ನ ಸಂಪದ ಕಾರ್ಯಪ್ರವೃತ್ತವಾಗಲಿ.              


 


  

Rating
No votes yet

Comments