ಬರಹಾ, ನೂರು ನೂರು ತರಹಾ
ವಿರಹಾ, ನೂರು ನೂರು ತರಹಾ, ಹಾಗೆಯೇ ಬರಹಾ ನೂರು ನೂರು ತರಹಾ ಎನ್ನಬಹುದು. ಬರೆಯಲು ಪ್ರೇರಣೆ ಬೇಕಂತೆ. ಯಾವುದರ ಬಗ್ಗೆ ಬರೆಯುವುದು, ನಾನು ಬರೆದದ್ದು ಜನ ಓದುವರೋ, ನಗುವರೋ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ ಇರುವ ಸಮಯ ಹಾಳು ಮಾಡಿಕೊಳ್ಳಬೇಡಿ. ನಗುವವರು ನಗಲಿ, ನೀವೇನೆ ಮಾಡಿದರೂ ನಗುವವರು ಇರುತ್ತಾರೆ, ಏಕೆಂದರೆ ತಾವು ಮಾಡಲಾಗದ ಅಥವಾ ಸೋಮಾರಿತನದಿಂದ ಮಾಡಲು ಇಷ್ಟವಿಲ್ಲದ ಜನ ಎಲ್ಲರೂ ತಮ್ಮಂತೆಯೇ ಇರಲಿ ಎಂದು ಆಶಿಸುತ್ತಾರೆ. ಅವರ ಈ ಬಯಕೆಗೆ ನೀವು ಬಲಿಯಾಗುವುದು ಬೇಡ. ಬರಹಕ್ಕೆ ಬೇಕಾದ ವಸ್ತು, ಪ್ರೇರಣೆ ಬಗ್ಗೆ ಬ್ಲಾಗೊಂದರಲ್ಲಿ ಬಂದದ್ದು ನೋಡಿ. ಇದನ್ನು ನಾವೂ ಅಳವಡಿಸಿಕೊಳ್ಳಬಹುದು.
ಯಾವುದಾದರೂ ಒಂದು ಚಿತ್ರವನ್ನು ಆರಿಸಿಕೊಳ್ಳುವುದು. ಅದರ ಬಗ್ಗೆ ಒಂದೆರಡು ವಾಕ್ಯಗಳ ವಿಶ್ಲೇಷಣೆ. ದಿನ ಪೂರ್ತಿ ಚಿತ್ರದ ಮುಂದೆ ಕೂತು ಆಲೋಚನೆ ಮಾಡುವುದಲ್ಲ. ೧೦ ಅಥವಾ ೧೫ ನಿಮಿಷಗಳಿಗೆ ಅಲಾರಂ ಇಟ್ಟು ಬರೆಯುವುದು, ಸಮಯ ಮುಗಿದು ಘಂಟೆ ಮೊಳಗಿದ ಕೂಡಲೇ ನಿಲ್ಲಿಸಬೇಕು ಬರವಣಿಗೆಯನ್ನು.
ಚಹಾ ಅಥವಾ ಕಾಫಿಗೆ ಎಲ್ಲಾದರೂ ಹೋಗುತ್ತೀರಲ್ಲ. ಚಹಾ ಹೀರುತ್ತಾ ಅಲ್ಲಿ ಕುಳಿತ ಯಾರದರೊಬ್ಬರ ಬಗ್ಗೆ ಬರೆಯುವುದ. ಅವನ ರೂಪ, ಚಹಾ ಹೀರುವ ರೀತಿ (ನೂರೊಂದು ರೀತಿಯಲ್ಲಿ ಚಹಾ ಹೀರುವುದನ್ನು ಕಾಣಬಹುದು), ಅವನ ವೇಷ... ಹೀಗೆ.. ಅದೂ ಸಹ ಮೇಲೆ ಹೇಳಿದ ರೀತಿಯಲ್ಲಿ. ಅಲಾರ್ಮ್ ಘಂಟೆಯನ್ನು ಹೊತ್ತು ಕೊಂಡು ಹೋಗುವ ಅವಶ್ಯಕತೆಯಿಲ್ಲ, ಎಲ್ಲಾ mobile ಗಳಲ್ಲೂ ಇರುವಂಥದ್ದೇ.
ರೈಲು ಅಥವಾ ಬಸ್ ನಿಲ್ದಾಣದಲ್ಲಿ ಕಾಣುವ ದೃಶ್ಯಗಳು, ಜಾಹೀರಾತುಗಳು ಇವನ್ನು ಬರೆದಿಟ್ಟು ಕೊಳ್ಳುವುದು. ಮನೆಗೆ ಬಂದು ನಿಮ್ಮದೇ ಶೈಲಿಯಲ್ಲಿ ಬರೆಯುವುದು.
ಹೀಗೆ ಸ್ವಾರಸ್ಯಕರವಾಗಿ ಮೋಜಿನ ರೀತಿಯಲ್ಲಿ ಬರೆದು ಬರಹದ ಬೆಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಳ್ಳಬಹುದು.
Comments
ಉ: ಬರಹಾ, ನೂರು ನೂರು ತರಹಾ
In reply to ಉ: ಬರಹಾ, ನೂರು ನೂರು ತರಹಾ by shreekant.mishrikoti
ಉ: ಬರಹಾ, ನೂರು ನೂರು ತರಹಾ
In reply to ಉ: ಬರಹಾ, ನೂರು ನೂರು ತರಹಾ by abdul
ಉ: ಬರಹಾ, ನೂರು ನೂರು ತರಹಾ
ಉ: ಬರಹಾ, ನೂರು ನೂರು ತರಹಾ
ಉ: ಬರಹಾ, ನೂರು ನೂರು ತರಹಾ
In reply to ಉ: ಬರಹಾ, ನೂರು ನೂರು ತರಹಾ by ksraghavendranavada
ಉ: ಬರಹಾ, ನೂರು ನೂರು ತರಹಾ
ಉ: ಬರಹಾ, ನೂರು ನೂರು ತರಹಾ