ಬಿಲ್ ಗೇಟ್ಸ್

ಬಿಲ್ ಗೇಟ್ಸ್

ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದು ಹೋದರು. Microsoft ಬೆಂಗಳೂರಿನಲ್ಲಿ ಸಂಶೋಧನ ಕೇಂದ್ರ ಆರಂಭಿಸಲಿದೆ. ಬೆಂಗಳೂರಿನಿಂದ ಹೊರ ಹೊಗುತ್ತೇವೆ ಎನ್ನುವ Infosys ಮತ್ತು ಇತರೆ ಕಂಪೆನಿಗಳಿಗೆ ಇದು ಉತ್ತರವೇನೋ.

ತಮಿಳು ತಲೆ ದಯಾನಿಧಿ ಮಾರನ್ ನ ತಮಿಳು ಪ್ರೇಮ ಮೆಚ್ಚಬೇಕಾದುದ್ದೆ, ಬಿಲ್ ಗೇಟ್ಸ್ ಗೆ ಇಷ್ಟ ಇತ್ತೋ ಇಲ್ಲವೋ, ಆದರೂ ಗೇಟ್ಸನ್ನ ಚೆನ್ನೈ ಗೆ ಕರೆದೊಯ್ದ.

ಆದರೂ ಒಂದು ವಿಷಾದದ ವಿಷಯವೆಂದರೆ, ವಿಂಡೋಸ ಎಕ್ಸ್ ಪಿ ಸ್ಟಾರ್ಟರ್ ಎಡಿಷನ್ನು ಈಗಾಗಲೆ ಹಿಂದಿ ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಿದ್ದರಂತೆ. ಅದೇಕೋ ಗೊತ್ತಿಲ್ಲ, ಕರ್ನಾಟಕದ (ಕನ್ನಡಿಗರ) ರಾಜಧಾನಿ ಬೆಂಗಳೂರೂ ಐ ಟಿ ಕ್ಶೇತ್ರದಲ್ಲಿ ಭಾರತವೇಕೇ ಇಡೀ ವಿಶ್ವದ ಗಮನ ಸೆಳೆದಿದ್ದರೂ 'ಕನ್ನಡ' ಯಾಕೆ ಬೆಳೆಯಲಿಲ್ಲವೋ. ತಮಿಳು ಎಡಿಶನ್ ಮಾಡ್ತಾರೆ ಆದರೆ ಕನ್ನಡ ಎಡಿಶನ್ ಮಾಡಲ್ಲ. (ಗೂಗಲ್ ನ ಮುಖಪುಟದಲ್ಲಿ ಕನ್ನಡವೇ ಇಲ್ಲ!) ಸಂಕಟವಾಗುತ್ತದೆ :-( .

Rating
No votes yet

Comments