ನಮ್ಮ ಬೆಕ್ಕು ಕಾಣೆಯಾಗಿದೆ !!

ನಮ್ಮ ಬೆಕ್ಕು ಕಾಣೆಯಾಗಿದೆ !!

ಇದೀಗ ಜಿ-ಟಾಕ್ ನಲ್ಲಿ ಅಮ್ಮ ಹೇಳಿದ ಸುದ್ದಿ. ’ನಮ್ಮ ಬೆಕ್ಕು ಕಾಣೆಯಾಗಿದೆ’.
ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಊಹಿಸಲಾಗಿದೆ.
ಪ್ರತೀ ಮೂರು ತಿಂಗಳಿಗೊಮ್ಮೆ ಕನಿಷ್ಟ ೨ ಮರಿಗಳನು ಈಯುವ ಅದು, ತನ್ನ ಕರ್ತವ್ಯವನ್ನು ಮುಂದುವರಿಸಲು ಉನ್ಮುಖವಾಗಿದೆ.
ಆಥವಾ :(, ನಮ್ಮ ಕೆಲಸಕ್ಕೆ ಬಾರದ ನಾಯಿ ಅದನ್ನು ಹಿಡಿದು ಬಿಟ್ಟಿದೆ. ಇಲ್ಲಿಯವರೆಗೆ ಶವ ಪತ್ತೆಯಾಗಿಲ್ಲ. ಆದ್ದರಿಂದ ಈ ಯೋಚನೆಯನ್ನು ಸದ್ಯಕ್ಕೆ ಅವಾಯ್ಡ್ ಮಾಡಲಾಗುತ್ತಿದೆ.
ನನ್ನಮ್ಮನ  ಪ್ರೀತಿಯ ಬೆಕ್ಕಾದ ಅದು, ನೋಡಲು ಮೇಲ್ಕಾಣಿಸಿದಂತೆ ಇದೆ. ಅಂದ ಹಾಗೆ ಅದು ಕಂಡವರಿಗೆ ನಮಸ್ಕಾರ ಮಾಡುವಷ್ಟು ಬುದ್ಧಿವಂತಳಲ್ಲ. ಛಳಿಗಾಲದ ಮುಂಜಾವಿನಲ್ಲಿ ಮುಖ ಒರೆಸಿಕೊಳ್ಳುತ್ತಿದೆ ಅಷ್ಟೆ.
ಅದು ಬೇಗ ಸಿಗಲಿ ಎಂಬ ಸದಾಶಯದೊಡನೆ,
 ವಸಂತ್ ಕಜೆ.
Rating
No votes yet

Comments