ನಿನಗಾಗಿ E-ಪತ್ರ
ನಿನ್ನ ಏನಂತ ಕರೆಯಬೇಕೋ ಗೊತ್ತಿಲ್ಲ....
ಆಗಾಗ ಚಿನ್ನ, ಡಾರ್ಲಿಂಗ್, ಸ್ವೀಟ್ ಹಾರ್ಟ್ ಅಂತ ಕರೆದಿದ್ರೂ... ನಮ್ಮಿಬ್ಬರ ಮದ್ಯ್ದದ ಪ್ರೀತಿಯ ಸಂಬಂದಕ್ಕೆ ನಾವ್ಯಾವತ್ತೂ ಹೆಸರನ್ನು ಇಟ್ಟಿಲ್ಲ. ಆ ಸಂಬಂದಕ್ಕೆ ಹೆಸರನ್ನು ಕೊಡೋ ಅವಶ್ಯಕತೆಯೂ ಬಂದಿರಲಿಲ್ಲ. ಮುಂದೆಯೂ ಬರುವುದಿಲ್ಲ , ಬರುವುದು ಬೇಡ ಎಂಬ ಆಸೆ ನನ್ನದು...
ಕಾರಣ ಪ್ರತಿಯೊಂದು ಸಂಭಂದಗಳೂ ತನ್ನದೆ ಇತಿ, ಮಿತಿ,ಪರಿಮಿತಿಗಳನ್ನು ಹೊಂದಿರುತ್ತದೆ ಎಂಬ ಭಾವನೆಯಿಂದಲೇ ಅಲ್ಲವೇ ನಮ್ಮಿಬ್ಬರ ಪ್ರೀತಿ ಅನನ್ಯಾನುಭವವನ್ನು ನೀದಲೆಂದು ನಾವು ನಮ್ಮಿಬ್ಬರ ಸಂಬಂದಕ್ಕೆ ಯಾವತ್ತು ಹೆಸರನ್ನು ಕೊಡದೆ ಇದ್ದದ್ದು.
ನೀನು ನನ್ನ ಕ್ಲಾಸ್ ಮೇಟ್ ಅಲ್ಲ. ನನ್ನ ಈ ಪ್ರೊಫೆಷನಲ್ ಜೀವನದಲ್ಲಿ ತುಂಬಾ ಚಿಕ್ಕವಳು. ನೀನು ನನ್ನದೇ ಕೋರ್ಸ್ ಮಾಡುತ್ತಿದ್ದರು ನನಗಿಂತ ಏಳು ವರ್ಷಕ್ಕೆ ಚಿಕ್ಕವಳು... ಆದರು ನೀನು ನನ್ನ ಹೋಗೋ ಬಾರೊ ಅಂತ ಕರೀತಿದ್ರೆ ನನ್ಗ್ಯಾವತ್ತು ಬೇಜಾರಾಗಿಲ್ಲ. ಕಾರಣ ನನ್ನ ಮೊದಲ ಕಲಾಕೃತಿಗಳ ಪ್ರದರ್ಶನದಲ್ಲಿ ನೀನು ನನ್ನೆಡೆಗೆ ನೋಡಿದ ನೋಟ ಇಂದಿಗು ನನ್ನ ನೆನಪಿನಿಂದ ಮಾಸಿಲ್ಲ. ಅಷ್ಟೊತ್ತಿಗಾಗಲೆ ನಿನಗೆ ನನ್ನ ಹಿಂದಿನ ಭಗ್ನ ಪ್ರೇಮದ ಕಥೆಗಳ ಪರಿಚಯ ಆಗಿತ್ತು ಮೊಬೈಲ್ ಚಾಟಿಂಗ್ ಮೂಲಕ. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರೂ ಯಾವತ್ತು ಪರಸ್ಪರ ಮಾತಾಡಿರಲಿಲ್ಲ..
ನನ್ನ ನಂಬರ್ ನೀನು ಅದು ಹೇಗೋ ಪಡೆದುಕೊಂಡಿದ್ದೆ.ಹಾಗಾಗಿ ರಾತ್ರಿ ಪೂರ ಚಾಟ್ ಮಾಡಿದ್ದೆ. ಆದರೂ ನನ್ಗೇಕೋ ಗೊತ್ತಿಲ್ಲ ಅದು ನೀನೆ ಮಾಡ್ತಾ ಇದ್ದಿದ್ದು ಅಂತ ಸ್ವಲ್ಪವೂ ಅನುಮಾನ ಬಂದಿರಲಿಲ್ಲ. ನನ್ನ ಅನುಮಾನವೆಲ್ಲ ಪ್ರಭಳೆಡೆಗೆ ಇತ್ತು.
ನಿನ್ನನ್ನು ಮೊದಲು ಸಲ ಮಾತಾಡಿಸಿದ್ದೇ ನನ್ನ ಕಲಾ ಪ್ರದರ್ಶನದಲ್ಲಿ.. ಅದಕ್ಕೂ ಮೊದಲು ನನ್ನೊಂದಿಗೆ ಚಾಟ್ ಮಾಡುತ್ತಿದ್ದುದು ನೀನೆ ಅಂತ ನನಗೆ ಗೊತ್ತಿರಲಿಲ್ಲವಲ್ಲಾ..
ನಿಮ್ಮ ಫಸ್ಟ್ ಇಯರ್ ಕ್ಲಾಸ್ನಲ್ಲಿ ಹದಿನೈದು ಮತ್ತು ಹಾಬಿಕ್ಲಾಸ್ ಹುಡುಗೀರು ಆರುಜನ ಇದ್ದಿದ್ರಿಂದ particular ಆಗಿ ನೀನೆ ಅಂತ ಗುರುತಿಸೋದಿಕ್ಕೆ ಆಗಿರಲಿಲ್ಲ ನನಗೆ.
ಆದರೆ ಆವತ್ತು ಕಲಾಪ್ರದರ್ಶನದಲ್ಲಿ ಅಕಸ್ಮಾತಾಗೋ ಅಥವ ಉದ್ದೇಶ ಪೂರ್ವಕವಾಗೋ ನೀನು ನನ್ನ ಕಣ್ಣೆದುರಿಗೆ ಬಂದು ನಿಂತಾಗ ನನ್ನ ಮನಸ್ಸು ಹೇಳಿತು...
ಅದು ನೀನೇ ಎಂದು..
ಅದಕ್ಕೂ ಹಿಂದೆ ನಾನು ಬರೆದಿದ್ದ ನನ್ನ ಹಿಂದಿ ಕವನದ ಸಾಲುಗಳು ಆಗ ನೆನಪಿಗೆ ಬಂತು..
ಡೂಂಡ್ತಾ ಹುಂ ಉನ್ ದೋ ಆಂಖೋಕೇಲಿಯೆ
ವೊ ಜೋ ಡೂಂಡ್ತೀ ಹೋಗಿ ಮೇರಿ ಸಾತ್ ಕೇಲಿಯೆ!
ನಿಜ... ನನ್ನ ಮನಸ್ಸು ಎದೆಯಲ್ಲಿ ಡಿಟಿಎಸ್ ಎಫೆಕ್ಟಲ್ಲಿ ಬಡ್ಕೊಳ್ತಾ ಹೇಳ್ತು.. ಆ ಕಣ್ಣು ನಿಂದೇ ಅಂತ.
ಅಲ್ಲಿಂದ ಮುಂದೆ ನಮ್ಮಿಬ್ಬರ ಮಧ್ಯೆ ಬೆಳೆದ ನಂಟು ನನ್ನ ಇಡೀ ಜೀವನದಲ್ಲಿ ನಮ್ಮಿಬ್ಬರನ್ನು ಮಾನಸಿಕವಾಗಿ ಬೇರೆ ಪಡಿಸಲಾಗದ ಪರ್ಮನೆಂಟ್ ಫೆವಿಕಾಲ್ ನಂಟು .. ಆಗಲೆ ಅಲ್ಲವೇ ನಾವಿಬ್ಬರೂ ನಿರ್ಧರಿಸಿದ್ದು. ಮುಂದೆ ನಮ್ಮ ನಮ್ಮ ಮನೆಯವರಿಂದ ಎದುರಾಗಲಿರುವ ತೊಂದರೆಗಳನ್ನು ದಾಟಿ ನಿಲ್ಲಲು ನಮ್ಮ ಸಂಬಂದಕ್ಕೆ ಯಾವುದೇ ಹೆಸರನ್ನು ನೀಡದೆ.. ಪ್ರೀತಿಯನ್ನು ಮಾತ್ರ ಪರಸ್ಪರ transmission ಮಾಡಿಕೊಳ್ತಾ ಇದ್ದಿದ್ದು.
ಹಾಗಿದ್ದರೂ ಇಂದೇಕೆ ನೀನು ಯಾವುದೋ ಹುಡುಗಿಯ ಕೆರಿಯರ್ ಗೆ ಸಂಬಂದಿಸಿದ ವಿಶಯಕ್ಕೆ ನನ್ನೊಂದಿಗೆ ವಾದ ಮಾಡಿ ಕೊನೆಗೆ ಸಡನ್ನಾಗಿ ಫೋನ್ ಕಾಲ್ ಕಟ್ ಮಾಡಿ ಸ್ವಿಚ್ ಆಫ್ ಮಾಡಿದ್ದು. ಅಲ್ಲಿನ ವಿಷಯ ತೀರಾ ಸಣ್ಣದಾದ್ರು ನೀನು ಫೋನ್ ಕಾಲ್ ಕಟ್ ಮಾಡ್ಬಿಟ್ಟೆ. ಅದರಿಂದ ನಾನು ಅನುಭವಿಸಿದ ಯಾತನೆಯ ಅರಿವು ನಿನಗಾಯ್ತಾ?
ಎಲ್ಲಿ ಅರಿವಾಗುತ್ತೆ ನಿನಗೆ.. ಕಂಬಳಿಯ ಹೊದಿಕೆಯ ಬೆಚ್ಚನೆಯ ಆಲಿಂಗನದಲ್ಲಿ ಮಲಗಿರುವ ನಿನಗೆ ಇಂದು ಆಕಸ್ಮಿಕವಾಗಿ ಬಂದ ಗುಡುಗು ಸಿಡಿಲಿನ ಆರ್ಭಟದ ತಣ್ಣಗಿನ ಮಳೆಯೊಳಗೆ ಬೆರೆತು, ಹರಿದು ಹೋದ ನನ್ನ ಬಿಸಿ ಕಣ್ಣೀರಿನ ಅರಿವು ಹೇಗಾಗಲು ಸಾದ್ಯ?
ಆದರೂ ನಮ್ಮಿಬ್ಬರ ಮಧ್ಯದ ಹೆಸರಿಲ್ಲದ ಈ ಅನನ್ಯ ಪ್ರೀತಿಯ ಮೇಲಿರುವ ನಂಬಿಕೆಯಿಂದ ನಿನ್ನದೊಂದು ಸಣ್ನ ಎಸೆಎಮೆಸ್ ಗಾಗಿ ಕಾಯುತ್ತಿರುವ ನಿನ್ನ...
------
ಮಂಸೋರೆ.
Comments
ಉ: ನಿನಗಾಗಿ E-ಪತ್ರ
In reply to ಉ: ನಿನಗಾಗಿ E-ಪತ್ರ by Harish Athreya
ಉ: ನಿನಗಾಗಿ E-ಪತ್ರ
In reply to ಉ: ನಿನಗಾಗಿ E-ಪತ್ರ by manjunath s reddy
ಉ: ನಿನಗಾಗಿ E-ಪತ್ರ
ಉ: ನಿನಗಾಗಿ E-ಪತ್ರ