ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ????

ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ????

ಹುಡುಗಿಯರಿಗೆ ಯಾವ ತರಹದ ಗಂಡು ಅಂದ್ರೆ ಇಷ್ಟ????
 
ತುಂಬಾ ದಿನದಿಂದ ಸಂಪದ ಓದ್ತಾ ಇದ್ದೆ, ಏನಾದ್ರು ಬರೀಬೇಕು ಇನ್ನಿಸ್ತಾ ಇತ್ತು, ಸಂಪದಕ್ಕೆ ಸ್ವಾಗತ್ತಿಸುತ್ತಿರಾ?? ಬರೆದು ಹಾಕಲು ಮನಸ್ಸೊಪ್ಪಲಿಲ್ಲ.
ಹೇಳಿ ಕೇಳಿ ಉತ್ತರಕರ್ನಾಟಕದವಳು, ನಮ್ಮ ಕನ್ನಡ ನಿಮಗೆ ತಿಳಿಯುತ್ತೋ ಇಲ್ಲೋ, ಅನ್ನೋ ಭಯ ಬೇರೆ ಅದಕ್ಕೆ ಬರೆಯೋಕೆ ತುಂಬಾ ದಿನ ಹಿಡಿತು.
ಭರತ್ ರವರ "ಅನಿಸುತಿದೆ........" ಓದುತಿದ್ದಂತೆ ನಾನು ಗಿಚಿದ ಹಳೆ ಕವನ ಭರತ್ ರವರಿಗೆ ಪ್ರತಿಕ್ರಿಯೆ ಯಾಗಿ ಕಳುಹಿಸಿದೆ.
 
ಹಳ್ಳಿಯಿಂದ ಬಂದ ನನಗೆ ಪಟ್ಟಣಗಳೆಂದರೆ ಅಷ್ಟಕಷ್ಟೇ, ಇಲ್ಲಿನ ಜನಸಂದಣಿ ನನಗೆ ಇಷ್ಟ ಆಗಲ್ಲ, ನಮ್ಮೂರಿನ ಜನರಲ್ಲಿರುವ ಕಾಳಜಿ, ಪ್ರೀತಿ, ಇಲ್ಲಿನ ಜನರಲ್ಲಿ ಇಲ್ಲ, ತುಂಬಾ selfish ಜನಾ ಅನ್ಸುತ್ತೆ. ಇದು ನನ್ನ ಅಭಿಪ್ರಾಯ.
 
ನಿನ್ನೆ ಊಟದ ಸಮಯದಲ್ಲಿ ನಾವೆಲ್ಲಾ ಕುಳಿತು ಊಟಾ ಮಾಡ್ತಾ ಇರ್ಬೇಕಾದ್ರೆ ಒಂದು ಚರ್ಚೆ ನಡಿತಾ ಇತ್ತು. ಅದನ್ನು ನಿಮ್ಮ ಜೊತೆ ಹಂಚಿ ಕೊಳ್ಳೋಣ ಅಂತ,
ಈಗಿನ ಹುಡುಗಿಯರಿಗೆ ಮದುವೆ ಯಾಗಲು ಎಂಥ ಹುಡುಗ್ರು ಬೇಕು ಅನ್ನೋದೇ ಚರ್ಚೆ,
ಎಲ್ಲರದು ಒಂದೊಂದು ಆಸೆ, ಬೇರೆಯದೇ selection . ಕೆಲವರಿಗೆ filmstar ಅಂದ್ರೆ ಕೆಲವರು sportsman.
ಇನ್ನು ಕೆಲವರು ಯಾವುದೋ ರೌಡಿ, ವಿಲ್ಲನ್ ತರಹ ಬೇಕು ಅನ್ನೋರು,
ನನಗೆ ತುಂಬಾ ಆಶ್ಚರ್ಯ, ನಮ್ಮ ಕಡೆ ಹುಡಗನನ್ನ ನೋಡಬೇಕಾದ್ರೆ ಮೊದ್ಲು ವಿಚಾರ್ಸೋದು, ಆತನ ಗುಣ, ನಡುವಳಿಕೆ, ಓದು, ಹಿರಿಯರಿಗೆ ಕೊಡೊ ಗೌರವ, ಮನೆತನ ಇತ್ಯಾದಿ, ಆದ್ರೆ ಇಲ್ಲಿನ ಹುಡುಗಿಯರಿಗೆ ಇದ್ಯಾವುದು ಬೇಕಿಲ್ಲ. ಕೇಳಿದ್ರೆ ನಾನು ಇಲ್ಲಿರೋದಕ್ಕೆ ನಾಲಾಯಕ್ ಅಂತಾರೆ.
ಇವರೆಲ್ಲ next generation ಅಂತೆ, ನಾನು ಅಜ್ಜಿ ಟೈಪ್ ಅಂತೆ. ಸರಿ ಅವ್ರ ಜೊತೆ ವಾದಿಸೋಕೆ ನನ್ನಿಂದಾಗಲಿಲ್ಲ, ಆದ್ರೆ ಇದು ಸರಿನಾ?
 
ಎಷ್ಟಾದರೂ ನಮಗೆ ನಮ್ಮ ಸಂಸ್ಕೃತಿ ಮುಖ್ಯ ಆಲ್ವಾ?? ಇದೆನಾ ನಮ್ಮ next generation ??
 
--ಅಶ್ವಿನಿ
Rating
No votes yet

Comments