ರಾಮ ಮಂದಿರ ಚಳುವಳಿ ಮತ್ತು ಭಾರತದ ಬುದ್ದಿಜೀವಿ. . .

ರಾಮ ಮಂದಿರ ಚಳುವಳಿ ಮತ್ತು ಭಾರತದ ಬುದ್ದಿಜೀವಿ. . .

Comments

ಬರಹ

 1ನೇ ಡಿಸೆಂಬರ್  2009 ರಂದು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಧೀಂದ್ರ ಕುಲಕರಣಿ  ಅವರ ವಾಜಪೇಯಿ ಸೋಗಲಾಡಿ ಆಂದ್ರೆ ಸೌಮ್ಯವಾದಕ್ಕೆ ಏನರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ ನೀಡಬಯಸುತ್ತೇನೆ. ಪ್ರಸ್ತುತ ಲೇಖನದ ಲೇಖಕರು ಇತ್ತೀಚೆಗೆ ಮಾಧ್ಯಮಕ್ಕೆ ಸೋರಿಕೆಯಾಗಿ, ನಂತರ ಸಂಸತ್ತಿನಲ್ಲಿ ಮಂಡಿಸಲ್ಪಟ್ಟ ಲಿಬರ್ಹಾನ್ ವರದಿಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಸೌಮ್ಯವಾದಿ ಸೋಗಲಾಡಿ ಎಂದು ಜರಿದಿರುವುದಕ್ಕೆ ತಮ್ಮ ಆಕ್ಷೇಪಣೆಯನ್ನು ಎತ್ತುತ್ತಾರೆ. ಜೊತೆಗೆ ನಾನು ಇಂದಿಗೂ ರಾಮ ಮಂದಿರ ಚಳುವಳಿಯನ್ನು ಬೆಂಬಲಿಸುತ್ತೇನೆ. ಎಂದು ಘೋಷಿಸುತ್ತಾರೆ. ಈ ಚರ್ಚೆಯಲ್ಲಿ  ಪ್ರಮುಖವಾಗಿ ಎರಡು ಅಂಶಗಳನ್ನು ಗುರುತಿಸಬಹುದು.

 ಮೊದಲನೆಯದು ವಾಜಪೇಯಿ ಅವರನ್ನು ಸೌಮ್ಯವಾದಿ ಸೋಗಲಾಡಿ ಎಂದು ಜರಿದಿರುವುದು ಕಾಂಗ್ರೆಸ್ ಸರಕಾರದ  ವೋಟ್ ಬ್ಯಾಂಕ್ ರಾಜಕೀಯ ಎಂಬುದು,   ಇದ್ದರೂ ಇರಬಹುದು ಇದರ ಕುರಿತಂತೆ ನಾನು ಇಲ್ಲಿ ಹೆಚ್ಚು ಚರ್ಚಿಸುವುದಿಲ್ಲ

ಎರಡನೇಯದು ಅಂದರೆ ರಾಮ ಮಂದಿರ ಚಳುವಳಿಯನ್ನು ನಾನು ಇಂದಿಗೂ ಬೆಂಬಲಿಸುತ್ತೇನೆ ಎನ್ನುವುದಕ್ಕೆ ಲೇಖಕರು ಕೊಡುವ ಕಾರಣ ಇಲ್ಲಿ ಬಹಳ ಪ್ರಮುಖವಾಗುತ್ತದೆ. ಮತ್ತು ಅದು ಇಂದಿನ ಬುದ್ಧಿಜೀವಿಗಳಿಂದ ಹಿಡಿದು ಅಡ್ವಾಣಿಯವರ ಮಾಜಿ ಆಪ್ತ ಸಲಹೆಗಾರನವರೆಗೆ ರಿಲಿಜನ್ ವಿಷಯದ ಕುರಿತಾಗಿನ ಬೌದ್ಧಿಕ ಗ್ರಹಿಕೆಯ ಪ್ರತಿಬಿಂಬವಾಗಿದೆ. ಅವರು ರಾಮ ಮಂದಿರ ಚಳುವಳಿ ಬೆಂಬಲಿಸಲು ನೀಡಿರುವ ಕಾರಣವನ್ನು ಅವರದೇ ಮಾತಿನಲ್ಲಿ ಹೇಳುವುದಾದರೆ,

1992 ರಲ್ಲಿ  ನಾನು ಬಿಜೆಪಿಗೆ ಸೇರಿರಲಿಲ್ಲ, ಆದರೂ ರಾಮ ಮಂದಿರ ಚಳುವಳಿಯನ್ನು ಬೆಂಬಲಿಸಿದೇ  ಇವತ್ತು ನಾನು ಬಿಜೆಪಿಯಲ್ಲಿ ಇಲ್ಲ, ಆದರೆ ರಾಮಮಂದಿರ ನಿರ್ಮಾಣಕ್ಕೆ  ನನ್ನ ಬೆಂಬಲ ಇದ್ದೇ ಇದೆ. ನನ್ನಂತಹ ಲಕ್ಷಾಂತರ ಹಿಂದೂಗಳು ಲಿಬರ್ಹಾನ್ ವರದಿಯಿಂದ ಕ್ರುದ್ಧರಾಗಿದ್ದಾರೆ. ಲಿಬರ್ಹಾನ್ರಂಥವರ ಪ್ರಕಾರ ಮತಾಂಧ ಮುಂಸ್ಲಿ ಆಡಳಿತಗಾರರ ದೇವಾಲಯ ಧ್ವಂಸ ನೀತಿಯನ್ನು ಒಪ್ಪಿಕೊಳುವುದು ಜಾತ್ಯತೀತವಾಗುತ್ತದೆಯೇ? ಈ 21ನೇ ಶತಮಾನದಲ್ಲಿ ಇಸ್ಲಾಂ ಮೂಲಭೂತವಾದಿಗಳು ಬಾಮಿಯ ಬುಧ್ಧನ ವಿಗ್ರಹವನ್ನು ದ್ವಂಸಗೊಳಿಸಿರುವುದು ಕಣ್ಮುಂದೆ ಇರುವಾಗ ಮಧ್ಯಕಾಲಿನ ಭಾರತದಲ್ಲಿ ದೇವಾಲಯಗಳ ನಾಶ ಆಗಿರಲೇ ಇಲ್ಲ ಎಂದು ನಂಬಿಬಿಡೋಣವೇ?

ಲೇಖಕರ ಈ ಮೇಲಿನ ವಿವರಣೆಯಿಂದ ಎರಡು ಅಂಶಗಳನ್ನು ಗುರುತಿಸಬಹುದು

1) ಮುಸ್ಲಿಂ ಆಡಳಿತಗಾರರು ಮಧ್ಯಕಾಲದಲ್ಲಿ ದೇವಾಲಯಗಳನ್ನು ಧ್ವಂಸಮಾಡಿ ತಮ್ಮ ಮಸೀದಿಗಳನ್ನು ನಿರ್ಮಿಸಿದ್ದಾರೆ

 2) ಅದಕ್ಕೆ ಪರ್ಯಾಯವಾಗಿ  ನಾವು ಇಂದು ರಾಮ ಮಂದಿರ ಚಳುವಳಿ ಬೆಂಬಲಿಸಬೇಕು. ಈ ಹಿನ್ನೆಲೆಯಲ್ಲಿ ನಾನು ನನ್ನ ವಾದವನ್ನು ಬೆಳೆಸುತ್ತೆನೆ.

 ಸಮಾಜ ವಿಜ್ಞಾನದ ವಿದ್ಯಾರ್ಥಿಯಾದ  ನನಗೆ ಲೇಖಕರ ಇಡೀ ವಾದ ರಿಲಿಜನ್ಗಳ ಕುರಿತಾದಂತಹ ಒಂದು ಪೂರ್ವ ಪ್ರತಿಪಾದಿತ ಜ್ಞಾನದ ಹಿನ್ನೆಲೆಯಿಂದ ರೂಪ ಪಡೆದುಕೊಂಡಿದೆ ಎನಿಸಿತು. ಅದು ಅವರ ಅನಿವಾರ್ಯವೂ ಹೌದು! ಏಕೆಂದರೆ ನನ್ನ ಜ್ಞಾನದ ಮಿತಿಯಲ್ಲಿ ಹೇಳುವುದಾದರೆ ಭಾರತ ಅದರಲ್ಲಿಯೂ ಕರ್ನಾಟಕದ  ಯಾವುದೇ ವಿಶ್ವವಿದ್ಯಾನಿಲಯಗಳು ರಿಲಿಜಿಯನ್ ಕುರಿತಾದಂತಹ ಒಂದು ಆಸಕ್ತಿದಾಯಕ ಮತ್ತು ಉಪಯುಕ್ತ ಸಂಶೋಧನೆಗಳನ್ನು ನಡೆಸುತ್ತಿಲ್ಲ. ಆದರೂ ಹಿಂದೂ ಎಂದರೆ ಯಾರು? ಹಿಂದೂಯಿಸಂ ಒಂದು ರಿಲಿಜಿಯನ್ನಾ? ಸೆಮಿಟಿಕ್ ರಿಲಿಜಿಯನ್ ಎಂದರೆ ಏನು? ಅವುಗಳ ಲೋಕ ದೃಷ್ಟಿ (ವರ್ಲ್ಡ್ ) ಹೇಗಿರುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪಾಶ್ಚಿಮಾತ್ಯರು ನೀಡಿದ ಬಹುಸಂಪುಟಗಳ ಗ್ರಂಥಗಳೇ ನಮಗೆ ಆಧಾರವಾಗಿವೆ. ಈ ಹಿನ್ನೆಲೆಯಲ್ಲಿ ರಿಲಿಜನ್ ಕುರಿತಾದಂತೆ ಇನ್ನು ಮೂಲಭೂತವಾದ ಕೆಲವು ಅಂಶಗಳನ್ನು ಮನವರಿಕೆ ಮಾಡಿಕೊಳ್ಳುವುದು ಅವಶ್ಯಕ ಮತ್ತು ಆ ರೀತಿ ರಿಲಿಜಿಯನ್ ಅನ್ನು ಗ್ರಹಿಸುವ ದಾರಿಯೇ ನಮ್ಮ ಎಲ್ಲಾ ಪ್ರಶ್ನೆಗಳಿಗೆ  ಉತ್ತರವಾಗುತ್ತದೆ ಎಂಬ ನಂಬಿಕೆಯೊಂದಿಗೆ ರೀಲಿಜಿಯನ್ ಕುರಿತಾಗಿ ಮಾತನಾಡುತ್ತೇನೆ.

ಮೊದಲು ನಮಗೆ ರಿಲಿಜಿಯನ್ (ಖಜಟರಠಟಿ) ಮತ್ತು ನಾವು ಕನ್ನಡದಲ್ಲಿ ಕರೆಯುವ ಧರ್ಮ ಇವೆರಡು ಬೇರೆಯದೆ ಅರ್ಥವನ್ನು ನಿಡುವ ಪದಗಳು ಎಂಬುದು ತಿಳಿದಿರಬೇಕಾದ ವಿಷಯ. ಹಾಗಾದರೆ ರಿಲಿಜಿಯನ್ ಎಂದರೆ ಎನು? ಒಂದು ಗುಂಪು ರಿಲಿಜಿಯಸ್ ಗುಂಪು ಎಂದು ಕರೆದುಕೊಳ್ಳಬೇಕಾದರೆ ಅದಕ್ಕೆ ಇರಬೇಕಾದ ಮೂಲಭೂತ ಲಕ್ಷಣಗಳಾವುವು? ಎಂದು ತಿಳಿದುಕೊಳ್ಳೊಣ. ಒಂದು ಗುಂಪನ್ನು ರಿಲಿಜಿಯಸ್ ಗುಂಪು ಎಂದು ಕರೆಯಬೇಕಾದರೆ ಅದು ಈ ಕೆಳಗಿನ ಅಂಶಗಳನ್ನು ಹೊಂದಿರಲೇಬೇಕು ಅವು ಯಾವುವೆಂದರೆ.

1.               ಏಕದೇವ ಕಲ್ಪನೆ

2.               ಒಬ್ಬ ಪ್ರವಾದಿ

3.               ದೇವೋಪಾಸನೆಗೆ ಒಂದು ಸಂಸ್ಥೆ

4.               ಒಂದು  ಪವಿತ್ರ ಗ್ರಂಥ



ಇವುಗಳನ್ನು ಹೊಂದಿರುವ ರಿಲಿಜಿಯನ್ಗಳನ್ನು ಸೆಮಿಟಿಕ್ (Semitic) ರಿಲಿಜನ್ಗಳು ಎಂದು ಕರೆಯುತ್ತಾರೆ ಉದಾ; ಇಸ್ಲಾಂ, ಕ್ರಿಶ್ಚಿಯಾನಿಟಿ, ಜೂಡಾಯಿಸಂ. ಈ ರೀತಿಯ  world view  ಇಲ್ಲದ ರಿಲಿಜಿಯನ್ಗಳು ನಾನ್ ಸೆಮಿಟಿಕ್ ಅಥವಾ ಹಿದನ್ ರಿಲಿಜಿಯನ್ನುಗಳು ಎಂದು ಗುರುತಿಸಲ್ಪಡುತ್ತವೆ. ಉದಾ: ಹಿಂದೂಯಿಸಂ (ರಿಲಿಜಿಯನ್ಗಳಲ್ಲಿ  religion and Heathen religion  ಅಥವಾ Non Semitic religion  ಈ ಎರಡು ವಿಭಾಗಗಳು ಪಾಶ್ಚಾತ್ಯರು ಗುರುತಿಸಿರುವುದು) ಇಲ್ಲಿ ನಾವು ಪ್ರಮುಖವಾಗಿ ತಿಳಿಯಬೇಕಾದ ಅಂಶಗಳು ಎಂದರೆ ಸೆಮಿಟಿಕ್ ರಿಲಿಜಿಯನ್ನಿನ  world view  (ಜಗತ್ತನ್ನು ಅರ್ಥಮಾಡಿಕೊಳ್ಳುವ ರೀತಿ) ಹೇಗಿರುತ್ತದೆ ಎಂದು. ಆದರ ಪ್ರಕಾರ ಇಡೀ ಜಗತ್ತನ್ನು ವಿವರಿಸುವ  ಶಕ್ತಿ ಇರುವುದು ನನಗೆ, ಎಕೆಂದರೆ ಜಗತ್ತಿನ ಒಟ್ಟಾರೇ ಸಾರವೇ ನನ್ನ ರಿಲಿಜಿಯನ್. ನನ್ನ ರಿಲಿಜಿಯನ್ನಿನ ಹೊರತಾಗಿ ಬೇರೊಂದು ರಿಲಿಜಿಯನ್ ಇರಲು ಸಾಧ್ಯವೇ ಇಲ್ಲ  ಇದ್ದರೆ ಖಂಡಿತ ಅದು ನಾಗರೀಕತೆಯ ಆರಂಭದ ಹಂತದಲ್ಲಿರುವ ಹಿದನ್ ಗಳಾಗಿರುತ್ತಾರೆ. ಅವರು ದೇವರನ್ನು ಪೂಜಿಸದೇ ದವ್ವಗಳನ್ನು ಪೂಜಿಸುತ್ತಿರುತ್ತಾರೆ. (Devil worshipers) ಎಕೆಂದರೆ ಅವರಿಗೆ ದೇವರು ತೋರಿರುವ ಸನ್ಮಾರ್ಗ ಅರ್ಥವಾಗಿಲ್ಲ. ಆದ್ದರಿಂದ ಅವರಿಗೆ ದೇವರ ಮಾರ್ಗವನ್ನು ತಿಳಿಸುವ, ಅವರನ್ನು ಸರಿಯಾದ ರಿಲಿಜಿಯನ್ (True religion)  ನೆಡೆಗೆ ತರುವ ಹೊಣೆಗಾರಿಕೆ ನಮ್ಮ ಮೇಲಿದೆ ಅದು ದೇವರೆ ನಮಗೆ ಲೋಕ ಕಲ್ಯಾಣಕ್ಕಾಗಿ ನಮಗೆ ವಹಿಸಿರುವ ಕೆಲಸ ಎಂದು ನಂಬುತ್ತವೆ. ಮತ್ತು ಈ ನಂಬಿಕೆಯ ಭಾಗವಾಗಿಯೇ  ಸೆಮಿಟಿಕ್ ರಿಲಿಜಿಯನ್ ಗಳು ಮತಾಂತರ ಮತ್ತು ದೇವಾಲಯ ಒಡೆಯುವ ಚಟುವಟಿಕೆಯಲ್ಲಿ ತೊಡಗುತ್ತವೆ.

 ಏಕೆಂದರೆ ಅವರ ಪ್ರಕಾರ ದೇವರುಗಳ ಆಲಯವನ್ನು ಒಡೆಯುವುದು, ಮತಾಂತರ ಮಾಡುವುದು ಮುಂತಾದ ಕ್ರಿಯೆಗಳು  ತಪ್ಪು ರಿಲಿಜಿಯನ್ ಹೊಂದಿರುವ ವ್ಯಕ್ತಿಯನ್ನು ಸರಿಯಾದ ರೀಲಿಜಿಯನ್ನೆಡೆಗೆ ತರುವ ವಿಧಾನ. ನಿಜ ಅರ್ಥದಲ್ಲಿ ಅವರು ನಮಗೆ ದೇವರು ತೋರಿದ ಸತ್ಯಮಾರ್ಗವನ್ನು ತೋರಿಸಲು ನಮ್ಮನ್ನು ಪವಿತ್ರಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ನೋಡುವುದಾದರೆ ಅವರ ಉದ್ದೇಶ ಒಳ್ಳೆಯದೇ, ಎಕೆಂದರೆ ಈ ರೀತಿಯ ಗ್ರಹಿಕೆ ಅವರ ರಿಲಿಜಿಯನ್ ನಲ್ಲಿಯೇ ಇರುತ್ತದೆ. ಮತ್ತು ಅವರು ಸಿದ್ಧಾಂತದ ಪರ ಜನರಾಗಿರುತ್ತಾರೆ. ಅವರ ಪ್ರತಿಯೊಂದು ಕ್ರಿಯೆಯನ್ನು ಯಾವುದೊ ಒಂದು ಸಿದ್ಧಾಂತ ಗೈಡ್ ಮಾಡುತ್ತಿರುತ್ತದೆ. ಉದಾ: ಬೈಬಲ್, ಕುರಾನ್ ಮುಂತಾದ ಗ್ರಂಥಗಳು.  ಯಾಕೆ ಈ ರೀತಿಯ ಮನೋಭಾವನೆ ಸೆಮಿಟಿಕ್ ರಿಲಿಜಿಯನ್ಗಳಲ್ಲಿ ಇದೆ ಎಂದರೆ ಅವರ ಪ್ರಕಾರ ರೀಲಿಜಿಯನ್ ಇಲ್ಲದ ಯಾವುದೇ ಸಮಾಜದ ಅಸ್ತಿತ್ವ ಸಾಧ್ಯವೇ ಇಲ್ಲ  ಪ್ರತಿಯೋಂದು ಸಮಾಜವು ರಿಲಿಜಿಯನ್ ಹೊಂದಿರುತ್ತದೆ ಮತ್ತು ಹೊಂದಿರಲೇಬೇಕು ಅದ್ದರಿಂದಲೇ ಅವರು  true religion  ಮತ್ತು  false religion ಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ   non religion  (ರಿಲಿಜಿಯನ್ ರಹಿತ ಸಮಾಜ) ಎಂಬ ಒಂದು ಪರಿಕಲ್ಪನೆ ಪಾಶ್ಚಾತ್ಯರಲ್ಲಿ ಇಲ್ಲ  ಎಕೆಂದರೆ ಮೊದಲೇ ತಿಳಿಸಿದಂತೆ ಅವರು ಸಿದ್ಧಾಂತ ಪರವಾದ ಜನರು ಮತ್ತು ಅವರ ಪ್ರತಿಯೋಂದು ಕ್ರಿಯೇಯನ್ನು ಯಾವುದಾದರೊ ಒಂದು ಸಿದ್ಧಾಂತ ನಿರ್ದೆಶಿಸುತ್ತಿರುತ್ತದೆ . ಮುಸ್ಲಿಂ ಜನಾಂಗ ಮಾತ್ರ ಈ ರೀತಿಯ ಗುಣ ಹೊಂದಿಲ್ಲ ಯಾವವುಗಳನ್ನು ನಾವು ಖಜಟಣಛಿ ರಿಲಿಜಿಯನ್ಗಳು ಎಂದು ಕರೆಯುತೇವೊ, ಅವೆಲ್ಲವುಗಳ ಜಗತ್ತನ್ನು ನೋಡುವ, ವಿವರಿಸುವ ವಿಧಾನವೇ ಇದಾಗಿದೆ ಮತ್ತು ಈ ರೀತಿಯ  Religious way of understanding the world ಅವರನ್ನು, ದೇವಲಯಗಳನ್ನು ಒಡೆಯುವಂತೆ, ಮತಾಂತರದಲ್ಲಿ ತೊಡಗುವಂತೆ ಮಾಡುತ್ತದೆ. ಭಯೋತ್ಪಾದನೆಯು ಈ ನಂಬಿಕೆಯ ಒಂದು ಭಾಗವೆ! ಈ ಚಟುವಟಿಕೆ ಜಗತ್ತಿನಲ್ಲಿನ ಜಿಹಾದ್ ಮೂಲಕ ಕಾಷಿರ್(ಸುಳ್ಳು ದೇವರ ಆರಾಧಕರು ಅಥವಾ  false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ.

          ಈ ರೀತಿಯ ಒಂದು ರಿಲಿಜಿಯಸ್ ಸಮುದಾಯ ಅಥವಾ ಗುಂಪಿನ ಚಟುವಟಿಕೆಗೆ ನಮ್ಮ ಅಂದರೆ ಭಾರತೀಯ ವಿದ್ವಾಂಸರ ಪ್ರತಿಕ್ರಿಯೆ ಏನಿರಬೇಕಿತ್ತು ಅಂದರೆ, ನೋಡಿ ಏಷ್ಯಾ ಅದರಲ್ಲಿಯೂ ಭಾರತ ಸಂಸ್ಕೃತಿ ನಿಮಗಿಂತ ಅಂದರೆ ಪಶ್ಚಿಮಕ್ಕಿಂತ ಭಿನ್ನವಾದ ಒಂದು ಕಲಿಕಾ ವಿಧಾನವನ್ನು ಹೊಂದಿದೆ. ಉದಾ: ಇಲ್ಲಿ ಆಚರಣೆಯೇ ಪ್ರಧಾನ, ಮತ್ತು ಅಂತಹ ಆಚರಣೆಯನ್ನು ಯಾವುದೇ ರೀತಿಯ Belief  ನಿರ್ದೇಶಿಸುವುದಿಲ್ಲ . ಕ್ರಿಶ್ಚಿಯನ್ನರಿಗೆ ರಿಲಿಜಿಯನ್ ಎಷ್ಟು ಮುಖ್ಯವೋ ಭಾರತೀಯ ಸಮಾಜಕ್ಕೆ  Ritual (ಸಂಪ್ರದಾಯ) ಅಷ್ಟೇ ಮುಖ್ಯವಾಗಿದೆ. ಆದ್ದರಿಂದಲೇ ಭಾರತೀಯ ಸಮಾಜ ಒಂದು ಆಚರಣೆ ಪ್ರಧಾನ ಜ್ಞಾನದ (Performative knowledge)  ಸಮಾಜವೇ ಹೊರತು ಪಾಶ್ಚಾತ್ಯರು ವಿವರಿಸುವಂತೆ ಸಿದ್ಧಾಂತ ಪ್ರಧಾನವಾದ ರಿಲಿಜಿಯಸ್ ಸಮಾಜವಲ್ಲ. ಆದ್ದರಿಂದ ರಿಲಿಜಿಯನ್ ಎಂಬ ಪರಿಕಲ್ಪನೆ ಭಾರತದಂತಹ ಆಚರಣೆಯ ಪ್ರಧಾನ ಸಂಸ್ಕೃತಿಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಮತ್ತು ಆ ಜ್ಞಾನದ ಸೈದ್ಧಾಂತಿಕ ಚೌಕಟ್ಟಿನಲ್ಲಿ (Religious) ಭಾರತದಂತಹ ಸಂಪ್ರದಾಯ ಪ್ರಧಾನ ಸಮಾಜವನ್ನು ವಿವರಿಸಲೂ ಸಾಧ್ಯವಿಲ್ಲ. ರಿಲಿಜಿಯನ್ ಎಂಬ ಒಂದು ಪರಿಕಲ್ಪನೆಯೇ ಭಾರತದ ಸಾಮಾಜಿಕ ಸಂದರ್ಭಕ್ಕೆ ಅಗತ್ಯವಿಲ್ಲದ್ದಾಗಿದೆ. ವಸಾಹತುಶಾಹಿ ಚಿಂತಕರ ಪ್ರಮುಖವಾದ ಸಮಸ್ಯೆಯೆಂದರೆ ಅವರು ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಗಳ ನಡುವಿನ ಭಿನ್ನತೆಯನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ವಿವರಿಸಬೇಕಿತ್ತು. ಹೀಗೆ ವಿವರಿಸಿದ್ದರೆ ಅವರಿಗೆ ಸರಿಯಾಗಿ ಅರ್ಥವಾಗುತ್ತಿತ್ತೇನೋ.?

ಆದರೆ ನಮ್ಮ ವಿದ್ವಾಂಸರು ವಿವರಿಸುತ್ತಿರುವ ಮಾದರಿ ಹೇಗಿದೆ ಅಂದರೆ ನೀವು ರಿಲಿಜನ್ ಹೊಂದಿದ್ದಿರಾ! ಹಾಗಾದರೆ ನಾವು (ಭಾರತಿಯರು) ರಿಲಿಜಿಯನ್ ಹೊಂದಿದ್ದೇವೆ, ಅದು ಹಿಂದೂಯಿಸಂ! ನಿಮಗೆ ಅಲ್ಲಾ, ಏಸು ಇದ್ದರೆ, ನಮಗೆ ರಾಮನಿದ್ದಾನೆ, (ಕೆಲವರು ನಿಮಗೆ ಒಬ್ಬ ದೇವರಿದ್ದರೆ ನಮಗೆ ಸಾವಿರ ದೇವರಿದ್ದಾರೆ ಎಂದು ವಾದಿಸುತ್ತಾರೆ. ಆದರೆ ಈ ಎರಡು ಗುಂಪಿನವರು ಭಾರತದಲ್ಲಿನ ಹಿಂದುಯಿಸಂ ಒಂದು ರಿಲಿಜಿಯನ್ ಎಂಬುದನ್ನು ಒಪ್ಪುತ್ತಾರೆ) ನಿಮಗೆ ಬೈಬಲ್, ಕುರಾನ್ ಇದ್ದರೆ ನಮಗೆ ಭಗವದ್ಗೀತೆ ಇದೆ, (ಕೇಲವರು ವೇದ, ಪುರಾಣಗಳನ್ನು ಉದಾಹರಣೆಯಾಗಿ ನೀಡುತ್ತಾರೆ) ನಿಮಗೆ ಮೆಕ್ಕಾ, ಜೆರುಸಲೆಂ ಇದ್ದರೆ ನಮಗೆ ಅಯೋಧ್ಯ ಇದೆ. ಇತ್ಯಾದಿಯಾಗಿ ವಿವರಿಸುತ್ತಿದ್ದಾರೆ. ಇದರ ಪರಿಣಾಮ ಖಜಟಣಛಿ ರಿಲಿಜಿಯನ್ಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ ನಮ್ಮ  Ritual (ಸಂಪ್ರದಾಯ) ಪ್ರಧಾನ ಸಂಸ್ಕೃತಿಯನ್ನು  Semitic ರಿಲಿಜನ್ ಮಾದರಿ ಚೌಕಟ್ಟಿಗೆ ಹೊಂದಿಸಿ ವಿವರಿಸುತ್ತಿದ್ದೇವೆ. ಮೇಲೆ ತಿಳಿಸಿದ ಲೇಖನದ ಲೇಖಕರು ಇದೇ ತಪ್ಪನ್ನೇ ಮಾಡುತ್ತಿದ್ದಾರೆ. (ರಾಮ ಮಂದಿರ ಚಳುವಳಿಗೆ ಅವರ ಬೆಂಬಲದ ಹಿಂದೆ ರಿಲಿಜಿಯನ್ಗಳ ಕುರಿತ ಇದೇ (ಅ)ಜ್ಞಾನ ಕೆಲಸಮಾಡಿದೆ) ಇದರ ನಿಜವಾದ ಪರಿಣಾಮ ಸ್ವಂತಿಕೆಯ ನಾಶ ಮತ್ತು ಸಿದ್ಧಾಂತಗಳ ಹೆಸರಿನಲ್ಲಿ ಜಾಗತಿಕ ಶಕ್ತಿಗಳ ಪ್ರಾಬಲ್ಯ. ಇವೆರಡರಿಂದ ತಪ್ಪಿಸಿಕೊಳ್ಳಬೇಕಾದರೆ, ಪರ್ಯಾಯಗಳ   ಕುರಿತು ಚಿಂತಿಸುವ, ಆ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳುವ,  ಆ ಮೂಲಕ ನಮ್ಮ ನಾಡಿನ ಘನತೆ, ಪ್ರತಿಷ್ಠೆ, ವೈಶಿಷ್ಟ್ಯ ಮತ್ತು ನಮ್ಮ ಆಚರಣೆ ಪ್ರಧಾನ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿ ವಿವರಿಸುವ ಅಗತ್ಯವಿದೆ. ಏಕೆಂದರೆ,  Religion  ಹೆಸರಿನಲ್ಲಿ ಜಗತ್ತಿನ ಇತಿಹಾಸದಲ್ಲಿ ಆಗಿರುವ, ಆಗುತ್ತಿರುವ  ರಕ್ತಪಾತ ಅವರಿಗೆ ಇಲ್ಲಿನ ಆಚರಣೆ ಪ್ರಧಾನ ಸಂಸ್ಕೃತಿಯಿಂದ ಬಹಳಷ್ಟು ಕಲಿಯುವಿಕೆಯ ಅನಿವಾರ್ಯತೆಯನ್ನು ಇಂದು ಹುಟ್ಟುಹಾಕಿದೆ. ಆದರೆ ಅವರು ಇಲ್ಲಿಂದ ಕಲಿಯುವುದು ಏನು ಎಂಬುದಷ್ಟೇ ನಾವು ಜಗತ್ತಿಗೆ ತಿಳಿಸಬೇಕಿದೆ. ಅದನ್ನು ಬಿಟ್ಟು ಇಲ್ಲದ್ದನ್ನು ಇದೆ ಎಂಬಂತೆ ವಿವರಿಸಿ ಇಲ್ಲಿಯೂ ರಕ್ತಪಾತಕ್ಕೆ ನಾವು ಕಾರಣವಾಗುತ್ತಿದ್ದೇವೆ. ಇದು ನಮಗೆ ಬೇಕಾ? ಈ ನಿಟ್ಟಿನಲ್ಲಿ ನಮ್ಮ ಚಿಂತಕರು ಚಿಂತಿಸುತ್ತಾರೆಯೇ ಎಂಬುದೇ ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet