ಪತ್ರ ಬರೆಯುವ ಬಗೆ

ಪತ್ರ ಬರೆಯುವ ಬಗೆ

ನನ್ನ ಸ್ನೇಹಿತರೊಬ್ಬರಿಗೆ ನಾನು ಇ-ಅಂಚೆ ಕಳುಹಿಸಿದ್ದೆ. ಅದರಲ್ಲಿ ಮಾಮೂಲಾಗಿ ಇಂತಿ ನಮಸ್ಕಾರಗಳು ಅಂತ ಕೊನೆಯಲ್ಲಿ ಬರೆದಿದ್ದೆ. ಅದಕ್ಕೆ ಅವರು ಇದೇನು ಹೀಗೆ ಬರೆದಿದ್ದೀರಿ. ಹೀಗೆ ಬರೆಯುವ ವಾಡಿಕೆ ಇದೆಯಾ ಅಂತ ಕೇಳಿದರು. ಆಗ ನನಗನ್ನಿಸಿದ್ದು, ಇ-ಮೈಲ್ ಉಪಯೋಗಿಸುವ ಮೂಲಕ ಮೊದಲಿನ ಹಾಗೆ ಪತ್ರ ಬರೆಯುವುದನ್ನು ಸಾರಾಸಗಟಾಗಿ ಈಗೀಗ ಮರೆಯುತ್ತಿದ್ದೇವೆ. ಅದರ ಬಗ್ಗೆ ಸ್ವಲ್ಪ ನೆನಪು ಮಾಡಿಕೊಳ್ಲೋಣ ಅಂದುಕೊಂಡೆ. ಹಾಗೇ ಇದನ್ನೇ ಇಂದಿನ ನನ್ನ ಡೈರಿಯಲ್ಲಿ ಬರೆಯೋಣ ಅಂತಲೂ ನಿರ್ಧರಿಸಿದೆ. ನೀವೂ ಒಮ್ಮೆ ನೋಡಿ. ನಾನು ಎಡವಿರುವ ಕಡೆ ತಿದ್ದಿ. ಮೊದಲು ಪತ್ರ ಬರೆಯುವ ಕ್ರಮ ಇದ್ದದ್ದು ಹೀಗೆ ಶುಭಮಸ್ತು ಶ್ರೀರಾಮ ಮುಂಬಯಿ ದಿನಾಂಕ ೬ನೇ ಆಗಸ್ಟ್ ೨೦೦೫ ತೀರ್ಥರೂಪು / ಮಾತು: ಶ್ರೀ / ಚಿರಂಜೀವಿ ರಾಜಶ್ರೀ / ಚಿರಂಜೀವಿ ಸೌಭಾಗ್ಯವತಿ ಹರಿದ್ರಾಕುಂಕುಮ ಶೋಭಿತೆ ....... ನಿಗೆ / ಳಿಗೆ, ಉಭಯ ಕುಶಲೋಪರಿ ಸಾಂಪ್ರತ ಇಂತಿ ನಮಸ್ಕಾರಗಳು / ಇಂತಿ ಆಶೀರ್ವಾದಗಳೊಂದಿಗೆ ಪತ್ರದಲ್ಲಿ ಎಲ್ಲಿಯೂ ಮಸಿ ಚೆಲ್ಲಿರಬಾರದು ಎಂದು ಹಿರಿಯರು ಹೇಳುತ್ತಿದ್ದರು. ಅದು ಅಶುಭ ಸೂಚಕ. ಪತ್ರ ಬಂದ ಕೂಡಲೇ ಹಿರಿಯರು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದುತ್ತಿದ್ದರು. ಈ ಕಾರಣಕ್ಕಾಗಿಯೇ ಮೊದಲಿಗೆ ಶುಭಮಸ್ತು ಅಂತ ಬರೆಯುವುದು. ಅಲ್ಲಿ ಆ ಪದ ಇಲ್ಲದೇ ಕಪ್ಪು ಮಸಿ ಇದ್ದರೆ, ಇದೇನೋ ಅಶುಭ ಸೂಚಕ ಪತ್ರ ಅಂದುಕೊಂಡು - ಮೊದಲು ವಿಷಯವನ್ನು ಮನಸ್ಸಿನಲ್ಲಿಯೇ ಓದಿ, ತಿಳಿಸಬೇಕಾದದ್ದನ್ನು ಮಾತ್ರವೇ ತಿಳಿಸುತ್ತಿದ್ದರು. ಮಿಕ್ಕ ವಿಷಯಗಳೆಲ್ಲ ಎಲ್ಲರಿಗೂ ಗೊತ್ತೇ ಇರುತ್ತದೆ. ಇನ್ನೂ ಹೆಚ್ಚಿನದಾಗಿ ನಿಮಗೆ ತಿಳಿದಿದ್ದರೆ ತಿಳಿಸಿ.
Rating
Average: 4 (1 vote)

Comments