ಕಮ್ಮಗೋಲನ ಚತುರ ಬಿಲ್ಗಾರಿಕೆ

ಕಮ್ಮಗೋಲನ ಚತುರ ಬಿಲ್ಗಾರಿಕೆ

ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!

ಸಂಸ್ಕೃತ ಮೂಲ:

ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥

एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥

-ಹಂಸಾನಂದಿ

ಕೊಸರು: ಮನ್ಮಥನು ವಸಂತಕಾಲದಲ್ಲಿ ಕಬ್ಬಿನ ಬಿಲ್ಲಿನಲ್ಲಿ ಐದು ಹೂಗಳ ಬಾಣವನ್ನು (ಅರವಿಂದ, ಅಶೋಕ, ಚೂತ, ನವಮಲ್ಲಿಕಾ ಮತ್ತು ನೀಲೋತ್ಪಲ) ಹೂಡಿ ಪ್ರೇಮಿಗಳ ಮೇಲೆ ಗುರಿಯಿಡುವನೆಂಬುದು ಕವಿಸಮಯ.

ಕೊನೆಯ ಕೊಸರು: ಕಮ್ಮಗೋಲ = ಮನ್ಮಥ - ಅಂದರೆ 'ಕಮ್ಮನೆ ಸುವಾಸನೆಯ ಕೋಲುಗಳ(ಬಾಣಗಳ)ನ್ನು ಧರಿಸಿದವ'. "ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ್ಯ ಗಣನಾಥನೇ" ಎಂದು ಕನಕದಾಸರು ಗಣೇಶನ ಬಗ್ಗೆ ಹಾಡಿರುವುದನ್ನು ನೆನೆಯಿರಿ.

Rating
Average: 5 (1 vote)

Comments