ಎರಡು ಸಾಲುಗಳು - 1

ಎರಡು ಸಾಲುಗಳು - 1

ಬೆಳಕಿನೆಡೆಗೆ ಹೋಗುವುದನ್ನು ಬಿಟ್ಟು ಬೇರೆ ಸ್ಥಳವಿಲ್ಲ ಬದುಕಲು
ನೀನೇಕೆ ಮಾತ್ರ ಕತ್ತಲನ್ನು ಓಡಿಸಲು ಪ್ರಯತ್ನಿಸುತ್ತಿರುವೆ

ಬದುಕುವದರಲ್ಲಿ ತುಂಬಾ ವ್ಯಸ್ತನಾಗಿದ್ದೇನೆ,
ನಾಳೆ ಬೆಳಕನ್ನು ನೋಡುತ್ತೇನೆ ಎಂಬ ಭರವಸೆ ಇಲ್ಲ

ಇಲ್ಲಿ ಸತ್ಯವಿಲ್ಲ, ಅದರಿಂದ ನ್ಯಾಯವಿಲ್ಲ
ಆದರೆ ಬೆನ್ನು ತಿರುಗಿಸಲು ನನಗಾಗುವುದಿಲ್ಲ

ಒಂದು ದಿನ ಬದಲಾವಣೆಯ ಕನಸಿನೊಂದಿಗೆ
ಸುಮ್ಮನೆ ಕೈ ಕಟ್ಟಿಕೊಂಡು ನಿಂತಿದ್ದೇನೆ

ಈಗೀಗ ಯಾಕೋ ನಿನ್ನ ಧ್ವನಿ ಮರೆತೇ ಹೋಗುತ್ತಿದೆ.
ನಿನ್ನನ್ನು ಪುನಃ ಕಳೆದುಕೊಳ್ಳುತ್ತಿದ್ದೇನೆ

ನಿನಗೆ ಎಲ್ಲಾ ಬಿಡಿಸಿ ಹೇಳಬೇಕೆನಿಸಿದೆ,
ಆದರೆ ಶಬ್ದಗಳಿಂದ ಹೇಳಿದರೆ ನಿನಗೆ ಅರ್ಥವಾಗುವುದಿಲ್ಲ

ನನ್ನ ನಿನ್ನ ಲೋಕದಲ್ಲಿ ಎಲ್ಲವು ಬದಲಾಗುತ್ತಿದೆ
ನಮ್ಮ ನಡುವಿನ ಅಂತರವನ್ನು ಬಿಟ್ಟು

ಇಂದು ಆ ಮರದ ಕೆಳಗೆ
ನಮ್ಮ ನೆರಳುಗಳು ಮಾತ್ರ ಉಳಿದಿವೆ

ನಮಗಾದ ಸೋಲು ನನಗೆ ಅರ್ಥವಾಗುವುದಿಲ್ಲ,
ನಾನು ನಿನ್ನ ಸೋಲೋ ಅಥವಾ ನೀನು ನನ್ನದೋ


Rating
No votes yet

Comments