ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ!

ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ!

<ವಿಧವೆಯರ ತಲೆ ಬೋಲಿಸುವುದಕ್ಕೂ ಮುಘಳನಿಗೂ ಇರುವ ಸಂಬಂಧ ತಮಗೇ ಚೆನ್ನಾಗಿ ತಿಳಿದಿರಬಹುದು.>

ಅಬ್ದುಲ್ ಅವರೇ, ವಿಚಾರಿಸಿ ನೋಡಿ, ವಿಧವೆಯರ ತಲೆ ಬೋಳಿಸುವುದನ್ನು ಆರಂಭಿಸಿದ್ದೂ, ಬೇರೆಯವರ ಆಸರೆಯಿಲ್ಲದಂಥ ಹೆಣ್ಣುಮಕ್ಕಳು ಸತಿ ಹೋಗಲು ಪ್ರಾರಂಭಿಸಿದ್ದೂ ವಿದೇಶಿ ಅತ್ಯಾಚಾರಿಗಳ ಕಾಟ ತಡೆಯಲಾರದೆಯೇ! ನಮ್ಮ ರಾಮಾಯಣ, ಮಹಾಭಾರತದಲ್ಲಿ ಕಂಡುಬರುವ ವಿಧವೆ ಪಾತ್ರಗಳಿಗೆ ಯಾರಿಗೂ ಇಂತಹ ಪರಿಸ್ಥಿತಿ ಇರಲಿಲ್ಲ.ಅವರೆಲ್ಲ (ಸತ್ಯವತಿ, ಕುಂತಿ, ಕೌಸಲ್ಯೆ, ಕೈಕೇಯಿ, ಸುಮಿತ್ರೆ, ಜಾಬಾಲಿ - ಸದ್ಯಕ್ಕೆ ನೆನಪಿಗೆ ಬಂದವರು) ಇವರೆಲ್ಲರೂ ಗಂಡನನ್ನು ಕಳೆದುಕೊಂಡರೂ ಮಕ್ಕಳ ಅಭ್ಯುದಯ ನೋಡಿಕೊಂಡು ಜೀವನ ನಡೆಸಿದರು.  ಮುಘಲರ ದಾಳಿಯ ಹೊತ್ತಿಗೆ ಜನ ಸಾಮಾನ್ಯರಲ್ಲಿ ಅವರ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಇರಲಿಲ್ಲ -ಎಂದೇ ಬಾಲ್ಯ ವಿವಾಹ ಪದ್ಧತಿ, ವಿಧವೆಯರ ತಲೆ ಬೋಳಿಸುವ ಪದ್ಧತಿ ಶುರುವಾಗಿದ್ದು. ಈಗ ಮುಘಲರ ಕಾಟ ಇಲ್ಲ - ಇಪ್ಪತ್ತು ವರ್ಷಗಳ ಹಿಂದೆ ನನ್ನ ಅಜ್ಜಿಯರು ಇಬ್ಬರೂ ವಿಧವೆಯಾದರೂ ಯಾರೂ ಅವರಿಗೆ ತಲೆ  ಬೋಳಿಸಿಕೊಳ್ಳಿ ಎನ್ನಲಿಲ್ಲ. ಇನ್ನು ನನ್ನ ತಂದೆಯವರು ತೀರಿಕೊಂಡರೂ ನನ್ನ ಅಮ್ಮನನ್ನು ನಾವೆಲ್ಲಾ ಹಣೆಯ ಕುಂಕುಮ, ಕರಿಮಣಿ ತೆಗೆಯಬೇಡಿ ಎಂದು, ಹೆಣ್ಣುಮಕ್ಕಳು, ಸೊಸೆಯರು ಎಲ್ಲರೂ ಕೇಳಿಕೊಂಡಿದ್ದೇವೆ. ನಮಗೀಗ ಯಾರ ಭಯವೂ ಇಲ್ಲ!  ಆಗಿನ ಕಾಲದಲ್ಲಿ ನಾವು ಹೀಗೆ ಮಾಡಲು ಸಾಧ್ಯವಿತ್ತೆ? ಇನ್ನು ಮುಂದೆ ಏನಾಗುವುದೋ ಯಾರು ಬಲ್ಲರು, ಆಗಿನ ಪರಿಸ್ಥಿತಿಗೆ ತಕ್ಕಂತೆ ಜನರೂ, ಸಮಾಜವೂ ಬದಲಾಗುವುದು ತಪ್ಪಿದ್ದಲ್ಲ.

ಅಲ್ಲದೆ ಈಗಲೂ ಮುಸ್ಲಿಮರಲ್ಲೂ ಹೆಣ್ಣುಮಕ್ಕಳು ಘೋಷಾದಲ್ಲಿರುವ  ಉದ್ದೇಶ ಹೆಣ್ಣುಮಕ್ಕಳು ಅನ್ಯರ ಪಾಲಾಗಿ ಅತ್ಯಾಚಾರಕ್ಕೀದಾಗಬಾರದೆಂದು ತಾನೇ? ಹೆಣ್ಣುಮಕ್ಕಳಿಗೆ ತೊಂದರೆಯಾಗುವ ಸನ್ನಿವೇಶವಿದ್ದರೆ,  ಆ ತೊಂದರೆ ನಿವಾರಿಸಲು ಘೋಷ ಸಹಾಯವಾಗುತ್ತದೆ ಎಂದರೆ, ಏಕಾಗಬಾರದು? ನನಗೆ ಅದರಲ್ಲೇನೂ ತಪ್ಪು ಕಾಣಿಸುತ್ತಿಲ್ಲ.

ಶಾಮಲ

 

 

 

Rating
No votes yet

Comments