ಐಟಿಸಿ ಹೋಟಲ್ಗಳೂ, ರಾಜ ಮನೆತನಗಳೂ

ಐಟಿಸಿ ಹೋಟಲ್ಗಳೂ, ರಾಜ ಮನೆತನಗಳೂ

ಐ.ಟಿ.ಸಿ ಗ್ರೂಪ್ ಆಫ್ ಹೋಟೆಲ್ಸ್ ಅನ್ನೋ ಹೆಸರಿನ ಕಂಪನಿಯೋರು ಸುಮಾರು ಊರುಗಳಲ್ಲಿ ಫೈವ್ ಸ್ಟಾರ್ ಹೋಟಲ್ಗಳನ್ನ ನಡುಸ್ತಿದಾರೆ.
ಎಲ್ಲೆಡೆ ಆಯಾ ಜಾಗದ ಹಿನ್ನೆಲೆಗೆ ಒತ್ತು ಕೊಟ್ಟು, ಅಲ್ಲಿನ ರಾಜಮನೆತನಗಳ ಹೆಸರನ್ನೇ ಇಡಲಾಗಿದೆ. ಅವರು ಹೋಟಲ್-ಗಳಿಗಿಟ್ಟಿರೋ ಹೆಸರುಗಳನ್ನ ಒಮ್ಮೆ ನೋಡೋಣ.

  • ದೆಹಲಿ – ಐ.ಟಿ.ಸಿ ಮೌರ್ಯ
  • ಆಗ್ರಾ – ಐ.ಟಿ.ಸಿ ಮೊಘಲ್
  • ಮುಂಬೈ – ಐ.ಟಿ.ಸಿ ಮರಾಠಾ
  • ಜೈಪುರ – ಐ.ಟಿ.ಸಿ ಶೆರಟಾನ್ ರಾಜಪುತಾನಾ
  • ಹೈದರಾಬಾದು – ಐ.ಟಿ.ಸಿ ಕಾಕತೀಯ
  • ಚೆನ್ನೈ – ಐ.ಟಿ.ಸಿ ಶೆರಟಾನ್ ಚೋಳ

ಆದರೆ, ಐ.ಟಿ.ಸಿಯವರು ಇತ್ತೀಚೆಗೆ ಬೆಂಗಳೂರಲ್ಲಿ ತೆಗೆದಿರೋ ಹೋಟಲ್ ಹೆಸರು ಮಾತ್ರ “ಐ.ಟಿ.ಸಿ ರಾಯಲ್ ಗಾರ್ಡೇನಿಯಾ”.

ಈ ಹೆಸರು ಕೇಳಿದ ತಕ್ಷಣ ಮನಸ್ಸಲ್ಲಿ ಹುಟ್ಟೋ ಪ್ರಶ್ನೆಗಳು ಅಂದರೆ,

  • ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ, ಕದಂಬರಂತಹ ಹೆಮ್ಮೆಯ ಕನ್ನಡಿಗ ರಾಜಮನೆತನಗಳಿರೋದು ಐ.ಟಿ.ಸಿನೋರಿಗೆ ಗೊತ್ತಿಲ್ವಾ?
  • ಕನ್ನಡಿಗ ರಾಜಮನೆತನದ ಹೆಸರಿಡಕ್ಕೆ ಏನಾದ್ರೂ ಮುಜುಗರನಾ?
  • ಅಥವಾ ನಾವು ಕನ್ನಡಿಗರಿಗೆ ನಮ್ಮ ರಾಜಮನೆತನಗಳ ಬಗ್ಗೆ ಹೆಮ್ಮೆಯಿಲ್ಲಾ ಅಂತ ಏನಾದ್ರೂ ತಪ್ಪು ತಪ್ಪಾಗಿ ಅಂದುಕೊಂಡಿದಾರಾ?

ಇವರಿಗೆ ಫೀಡ್-ಬ್ಯಾಕ್ ಬರೆದು ಈ ಪ್ರಶ್ನೆಗಳನ್ನ ಕೇಳೋಣ ಬನ್ನಿ.
“ರಾಯಲ್ ಗಾರ್ಡೇನಿಯಾ” ಅನ್ನೋ ಬದಲು “ರಾಯಲ್ ಮೈಸೂರು” ಅಂತ ಹೆಸರಿಟ್ಟಿದ್ದಿದ್ರೆ ನಮಗೆ ಬಹಳಾ ಖುಷಿಯಾಗಿರೋದು ಅಂತನೂ ಹೇಳೋಣ.
ಇಲ್ಲಿ ಅನಿಸಿಕೆ ಬರೆಯಿರಿ: http://www.itcwelcomgroup.in/Hotels/itcroyalgardenia.aspx

Rating
No votes yet

Comments