ಆಮಂತ್ರಣ

ಆಮಂತ್ರಣ

ಆಮಂತ್ರಣ

ಪ್ರಾಣಪ್ರಿಯಾ ನೀ ಬಾರೋ, ಬಾರೋ
ತಪಿತ,ತೃಷಿತ,ಕೃಷಾಂಗ ವಸುಧೆಯಾ
ಪ್ರೇಮ ಧಾರೆಯ  ವರಿಸಿ ತಣಿಸಲು               /ಪ್ರಾಣ ಪ್ರಿಯಾ/

ಅಂತರ್ಮನದಾ ತಾಪ ಕಳೆಯಲೂ
ಮಧುರ ಮಧುರತಮ ಪ್ರೇಮ ಹರಿಸಲೂ
ಶಾಂತಿ ಕಿರಣವಾ ಎಲ್ಲೆಡೆ ಹರಡಲೂ
ನವಜೀವನದಾ ಜ್ಯೋತಿಯ ಬೆಳಗಲೂ          /ಪ್ರಾಣ ಪ್ರಿಯಾ/

ಸಾಹಸ ಕಾರ್ಯವ ಉತ್ತೇಜಿಸಲೂ
ಪೌರುಷ ಶಕ್ತಿಯ ಉದ್ದೀಪಿಸಲೂ
ಸದ್ವಿಚಾರವ ಉತ್ಥಾನಿಸಲೂ
ವಸುಧೆಯ ರಕ್ಷಾದೀಪವ ಬೆಳಗಲೂ        /ಪ್ರಾಣ ಪ್ರಿಯಾ/

ನಿಜ ಜೀವನ ಪಥ ನಿರ್ದೇಶಿಸಲೂ
ಸರ್ವ ಅಭಾವವ ನೀಗಿ ಭರಿಸಲೂ
ನವಯುಗವಾ ನಿರ್ಮಾಣ ಮಾಡಲೂ
ಸಾರ್ಥಕ ಯಶ ಇತಿಹಾಸ ರಚಿಸಲೂ      /ಪ್ರಾಣ ಪ್ರಿಯಾ/




Rating
No votes yet

Comments