ಸ್ವಯಂವರ ಮಾಡೋರಿಗೆ ಹೆಲ್ಪ್

ಸ್ವಯಂವರ ಮಾಡೋರಿಗೆ ಹೆಲ್ಪ್

ತೆಜಸ್ವಿಯವ್ರು ಬರೆದ ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ? ಬರೋಬ್ಬರಿ ಆರೇ ನಿಮಿಶದಾಗ್ ನಂದು  ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ? ಬರಹ ಪ್ರಕಟ ಆಯ್ತು ನೋಡ್ರಿ. ಅದೇನೂ co -incident ಅನ್ನೋ ಹಂಗೆ ಇಬ್ಬರ ಬರಹಾನು ಒಂದೇ ವಿಷಯ ಹೇಳ್ತಿತ್ತು "ಪ್ರೀತಿ".

ಬಹುಶ ಆ ಶಬ್ದದಲ್ಲೇ ಅಂತಹದ್ದೇನೂ ಮೋಡಿ ಇದೆ ಅಂತ ಕಾಣ್ಸುತ್ತೆ, ಅಭಿಪ್ರಾಯಕ್ಕೆನು ಕೊರತೆ ಕಾಣಲೇ ಇಲ್ಲಾ? ಇದರ ಸಲುವಾಗೆ ಭಾಳ ಜನರ ಕೆಂಗಣ್ಣಿಗೂ ಗುರಿಯಾಗಿ ಬಿಟ್ಟಿದ್ದಿವಿ ಅನ್ಸುತ್ತೆ,

 ಅದಕ್ಕೆ ಈ ಸಲ ನಾನು ಬರಹ ಪ್ರಕಟ ಆಗೋ ಟೈಮಲ್ಲಿ ಬೇರೆ ಯಾವ ಬರಹಾನು ಪ್ರಕಟ ಆಗದೆ ಇರ್ಲಿ ಅಂತ ನನ್ನ ಮನಸಲ್ಲೇ ಅಂದುಕೊಳ್ತಾ, ಪ್ರಾರಂಭ ಮಾಡ್ತಿನ್ರೀ........

 


ಸಂಪದದಲ್ಲಿ ಸ್ವಯಂವರ ಮಾಡೋರಿಗೆ ಹೆಲ್ಪ್ ಆಗ್ಲಿ ಅಂತ, ಹುಡುಗಿಯರಿಗೆ ಎಂಥ ಹುಡುಗ ಇಷ್ಟ ಆಗತಾನೆ ಅನ್ನೋ ಬಗ್ಗೆ ಒಂದೆರೆಡು ಟಿಪ್ಪಣಿಗಳು.

 

ಹುಡುಗಿ ತನ್ನ ಗಂಡನಾಗುವವನಲ್ಲಿ ಬಯಸೋದು, ಅವ್ನು ನನ್ನ ಭಾವನೆಗಳಿಗೆ ಸ್ಪಂದಿಸಬೇಕು, ಗಂಡನಿಗೆ ಎಲ್ಲರಿಗಿಂತಾ ಹತ್ತಿರದವಳು ತಾನಾಗಬೇಕು, ಅವನು ಮಾಡೋ ಪ್ರತಿ ನಿರ್ಧಾರಕ್ಕೂ ಮುಂಚೆ ನನ್ನದೊಂದು ಅಭಿಪ್ರಾಯ ಕೇಳಬೇಕು, ಅದನ್ನು ಕಾರ್ಯಗತ ಮಾಡೋದೇನು ಬೇಕಾಗಿಲ್ಲ, ಆದ್ರೆ ನಾನು ಅವನ ಜೀವನದ ಅವಿಭಾಜ್ಯ ಅಂಗ ಅನ್ನೋ ಮನೋಭಾವ ನನ್ನಲ್ಲಿ ಮೂಡಿಸಬೇಕು. ನಾನಲ್ದೆ ಅವನ ಬಾಳಲ್ಲಿ ಬೇರೆ ಯಾವ ಹುಡುಗಿನು ಇರಕೂಡದು.


ಹುಡುಗಿಯರಿಗೆ ಸ್ವಲ್ಪ ಸಂಶಯ ಜಾಸ್ತಿ, ಆತ ಸ್ವಲ್ಪ ತಾಳ್ಮೆಯಿಂದಿರಬೇಕು. ನಾನು ಕೇಳಿದ್ದೆಲ್ಲ ತಂದು ಕೊಡಬೇಕಂತೆನು ಇಲ್ಲಾ, ಬರಿ ತಂದು ಕೊಡುತ್ತೇನೆ ಅನ್ನೋ ಭರವಸೆ ಕೊಟ್ಟರು ಸಾಕು.

 

ಅದೆಲ್ಲದರ ಜೊತೆಗೆ ಒಂದಿಷ್ಟು ಪ್ರೀತಿ, ಒಂದಿಷ್ಟು ಸಮಯ, ಇಷ್ಟು ಸಾಕು ಅನ್ಸುತ್ತೆ.


ಇನ್ನು ಭಾಳ ಅದಾವ್ರೀ, ಆದ್ರ ಇವತ್ತಿಗ ಇಷ್ಟ ಸಾಕು ಅನ್ಕೊತಿನ್ರೀ......

 

-ಅಶ್ವಿನಿ
Rating
No votes yet

Comments