ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿ

ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿ




ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿ
ಸಂಜೆ ಬಾನಿನ ಮೇಘ ಉಸಿರಿತಲ್ಲಾ
ಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯ
ಇಹುದು ಸನಿಹದೆ ಸುದಿನ ಪರ್ವವೆಲ್ಲಾ           //೧//

ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪು
ತೇಲಿಸುತ್ತಿದೆ ನನ್ನ ಮತ್ತಲಿಂದೂ
ಮನದ ಕಡಲಿನ ಮೇಲೆ ಬಿಚ್ಚು ನೆನಪಿನ ಹಾಯಿ
ತೇಲಿ ಸೇರಲಿ ನಾವೆ ಕನಸಲಿಂದೂ               //೨//

ತಾಳು ಕೆಲವೇ ಸಮಯ ಆತುರದಿ ನಲ್ಲನಿಹ
ಕಾಯುತಿಹ ಬಳಿ ಸೇರೋ ದಾರಿಯೆಲ್ಲಾ
ಎರಡು ದೇಹವು ಮಾತ್ರ ಪ್ರಾಣ ಒಂದೇ ಒಂದು
ನಲ್ಲನಲ್ಲೆಯರೆಂದೂ  ಬೇರೆಯಲ್ಲಾ               //೩//





















Rating
No votes yet

Comments