ನಾನು ಗಂಡೇ ಅಲ್ಲ !
"I am not a man, godman Nityananda told CID sleuths". ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ನಮ್ಮ flirting master ನಮ್ಮ ಕ್ರಿಕೆಟ್ನ ಮಾಸ್ಟರ್ ಬ್ಲಾಸ್ಟರ್ ರೀತಿ ಧಾಳಿ ಮಾಡುತ್ತಾನೆಂದು? ನಾನು ಗಂಡೇ ಅಲ್ಲ ! ಎಂಥ ಗಂಡೂ, ಗಂಡೇ ಅಲ್ಲದಿದ್ದರೂ ಈ ಮಾತನ್ನು ಆಡಲು ಎಂಟೆದೆ ಬೇಕು. ಪುರುಷ ತನ್ನ erectile ಸಾಮರ್ಥ್ಯದ ಬಗ್ಗೆ ಅನುಮಾನ ಇದ್ದರೂ ದೊಡ್ಡ macho ರೀತಿಯ ಫೋಸ್ ಕೊಡುತ್ತಾನೆ. ಗಂಡ್ಸಾ ದರೆ ಬಾರೋ ಎಂದು ಚಾಲೆಂಜ್ ಮಾಡುವುದಿದೆ. ಆದರೆ ನಾನು ಗಂಡೇ ಅಲ್ಲ ಕಣೋ ಅಂದು ಬಿಟ್ಟರೆ? ಮರ್ಯಾದೆ ಬಿಟ್ಟು ಮಾನ ಸಂಪಾದಿಸುವ ಚಾಣಾಕ್ಷತನ. ನಾನು ಮಂತ್ರಮುಗ್ಧನಾದೆ ಈ ವ್ಯಕ್ತಿಯ ಪ್ರತಿಭೆಗೆ. ನನ್ನ ಶುಕ್ರವಾರದ ಬೆಳಗಿನ ಮಂಪರು ಎಗರಿ ಹೋಯಿತು ನಿತ್ಯಾನಂದನ ಈ ಯಾರ್ಕರ್ ಗೆ. ಈಗ ನಮ್ಮ ಪೊಲೀಸರು ಏನು ಮಾಡಬಹುದು? doppler test ಅಂತೂ ಇದ್ದೇ ಇದೆ ಅನ್ನಿ. ಬೆಂಗಳೂರಿನ ಪೊಲೀಸರು ಮಧ್ಯ ವ್ಯಸನಿಗಳನ್ನು ಟೆಸ್ಟ್ ಮಾಡೋದು ನೋಡಿರಲೇಬೇಕು ನೀವು. ಎಲ್ರೀ, ಬಾಯ್ ಬಿಚ್ಚಿ ಉಫ್ಫ್ ಅನ್ರೀ ಅಂತ ನಮ್ಮ ಬಾಯ ಕೆಳಗೇ ನಿಂತಿರುತ್ತಾರೆ ಆ ದುರ್ನಾತದ ನಿರೀಕ್ಷೆಯಲ್ಲಿ. ನಿತ್ಯಾನಂದನ ಈ ಸಮಸ್ಯೆಗೂ ಪೊಲೀಸರು ಕಚ್ಚೆ ಇಳಿಸಬಹುದು, ಆದರೂ ನಾನು ಗಂಡಲ್ಲ ಎಂದು ಅವನು ಹಠ ಮಾಡಿದರೆ? ಅವನೊಂದಿಗೆ ಮರ, ಕ್ಷಮಿಸಿ ಮಂಚ ಸುತ್ತಿದ ಲಲನಾ ಮಣಿಗಳನ್ನು ಪೊಲೀಸರು ಬುಲಾವ್ ಮಾಡಬಹುದೇ ನಿತ್ಯಾನಂದನನ performance evaluation ಮಾಡಲು?
ಭಾರತ ಒಂದು ದೊಡ್ಡ drama stage. ಯಾವ ಯಾವ ರೀತಿಯ, ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ಬೆರಗಾಗಿ ನೋಡುವ ಒಂದು ಡ್ರಾಮ ನಮ್ಮ ಭಾರತ.
ನೀವೇನಂತೀರಾ? ಏನಾದರೂ ಅನ್ನಿ, ತಮಾಷೆಗೆ ಕೂಡ ನಾನು ಗಂಡಲ್ಲ ಎನ್ನಬೇಡಿ.
Comments
ಉ: ನಾನು ಗಂಡೇ ಅಲ್ಲ !
In reply to ಉ: ನಾನು ಗಂಡೇ ಅಲ್ಲ ! by savithru
ಉ: ನಾನು ಗಂಡೇ ಅಲ್ಲ !
ಉ: ನಾನು ಗಂಡೇ ಅಲ್ಲ !
ಉ: Thu nimma ಆ ಸ್ನಾಮಿ ಗಂಡೇ ಅಲ್ಲ ಎಂದು ಹೇಳಿ....... !
ಉ: ನಾನು ಗಂಡೇ ಅಲ್ಲ !