ಉಗ್ರರು ದಾಳಿ ಮಾಡಲಿದ್ದಾರೆ.. ಎಚ್ಚರಿಕೆ

ಉಗ್ರರು ದಾಳಿ ಮಾಡಲಿದ್ದಾರೆ.. ಎಚ್ಚರಿಕೆ

Comments

ಬರಹ

ಇಂದಿನ ಪ್ರಜಾವಾಣಿಯ ಮುಖಪುಟದಲ್ಲಿ ಈ ಸುದ್ದಿ ರಾರಾಜಿಸುತ್ತಿದೆ- "ದೆಹಲಿ ದಾಳಿಗೆ ಉಗ್ರರ ಸಂಚು- ಅಮೆರಿಕಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಎಚ್ಚರಿಕೆ". ವಿಜಯ ಕರ್ಣಾಟಕದ ಇಂದಿನ ಆನ್-ಲೈನ್ ಆವೃತ್ತಿ ಇನ್ನೂ ಬಂದಿಲ್ಲ. ಬಂದಿದ್ದಲ್ಲಿ ಇನ್ನಷ್ಟು ಮಾಹಿತಿ ಸಿಗುತ್ತಿತ್ತೇನೋ..

ತಮ್ಮ ದೇಶಗಳಿಂದ ಭಾರತಕ್ಕೆ ಪ್ರವಾಸ ಮಾಡಲೆಂದು ಬಂದಿರುವ ಪ್ರಜೆಗಳ ಸುರಕ್ಷತೆಗಾಗಿ ಈ ದೇಶಗಳು ಈ ಎಚ್ಚರಿಕೆ ನೀಡುತ್ತಿವೆ. ಕಳೆದ ಹದಿನೈದು ದಿನಗಳಲ್ಲಿ ಇದು ಮೂರನೇ ಎಚ್ಚರಿಕೆ. ಈ ಎಚ್ಚರಿಕೆಯನ್ನು ನಮ್ಮ ಕೇಂದ್ರ ಸರಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆಯಂತೆ. ಅಂತೂ ವಿದೇಶಿ ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದಲಾದರೂ ಈ ದಾಳಿಗಳನ್ನು ತಡೆಗಟ್ಟಲು ಸಾಧ್ಯವಾಗಲಿ ಎಂದು ಹಾರೈಸೋಣ.

ಈ ಸುದ್ದಿಯನ್ನು ಓದುತ್ತಿದ್ದಂತೆ ನನನ್ನು ಕಾಡುತ್ತಿರುವ ಪ್ರಶ್ನೆಗಳು: ಜನನಿಬಿಡ ಪ್ರದೇಶಗಳಲ್ಲಿ ಸ್ವಂತ ಬಲದಿಂದ ರಾಜಾರೋಶವಾಗಿ ದಾಳಿ ಮಾಡಬಹುದಾದಷ್ಟು ಸಾಮರ್ಥ್ಯವನ್ನು ವಿದೇಶೀ ಉಗ್ರರು ಪಡೆದಿದ್ದಾರೆಯೇ? ನಮ್ಮ ದೇಶದ ಗುಪ್ತಚರ ಇಲಾಖೆ ತೀರಾ ಇಷ್ಟೊಂದು ದೈನೇಸಿಯಾಗಿದೆಯೇ- ಬೇರೆ ದೇಶಗಳ ವರದಿಯನ್ನು ಅವಲಂಬಿಸುವಷ್ಟು? "ದೇಸಿ ಉಗ್ರ"ರ ಪ್ರತ್ಯಕ್ಷ/ ಪರೋಕ್ಷ ಬೆಂಬಲವಿಲ್ಲದೇ ದಾಳಿ ಸಾಧ್ಯವೇ?

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet