ಭಾಷೆಯ ಹುಟ್ಟು

ಭಾಷೆಯ ಹುಟ್ಟು


http://sampada.net/blog/savithru/19/04/2010/24919 ನಲ್ಲಿ "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?" 


ಅನ್ನೋ ಪ್ರಶ್ನೆ ಕೇಳಿದ್ದೆ. ಅದಕ್ಕೆ ಕೆಲವರು ಆಸಕ್ತಿ ತೋರಿಸಿದರು. ಈ ಲೇಖನವು ಆ ಪ್ರಶ್ನೆಗೆ ಸಂಬಂಧಪಟ್ಟಿದೆ.  

..........................


ಜಗತ್ತಿನ ಅನೇಕ ಜನಾಂಗಗಳಲ್ಲಿ ಭಾಷೆ ಎಂಬುದು "ದೈವೀ ಮೂಲ" ಎಂದು ನಂಬಲಾಗಿತ್ತು. ಋಗ್ವೇದದ ಪ್ರಾಕಾರ "ವಾಗ್ದೇವಿ"ಯೇ ಭಾಷೆಯ ಅಧಿದೇವತೆ. ಬೈಬಲ್ಲಿನ ಜೆನೆಸಿಸ್ ಪ್ರಕಾರ GOD , ಈಜಿಪ್ಟ್ ನವರಿಗೆ "ಥಾಥ್" ಎಂಬ ದೇವತೆಗಳು ಭಾಷಾ ಅಧಿದೇವತೆಗಳು. ಭಾರತದ ಇನ್ನೊಂದು ನಂಬಿಕೆಯ ( ಬಹುಶ..ಪಾಣಿನಿಯ ಪ್ರಕಾರ?!) ಪ್ರಕಾರ ಈ ಭಾಷೆ / ದ್ವನಿಗಳು ಶಿವನ ಡಮರುಗ ದಿಂದ ಉತ್ಪತ್ತಿಯಾದವು. ಢಮರುಗದ ಒಂದು ಭಾಗದಿಂದ ಮೊದಲು "ಓಂ" ಕಾರ ಹೊರಟಿತು. ನಂತರ ಇನ್ನೊಂದು ಭಾಗದಿಂದ ಇತರ "ಅಕ್ಷರ"ಗಳು ಹುಟ್ಟಿದವು. ಪಾಣಿನಿಯ(?) ಮಹೇಶ್ವರ ಸೂತ್ರ ಸಂಸ್ಕೃತದ ಮೂಲ ಧ್ವನಿಗಳನ್ನು ಹಿಡಿದಿಡಲು ಪ್ರಯತ್ನಿಸಿದೆ. ಆದರೆ ಇದರಲ್ಲಿ ದ್ರಾವಿಡ ಭಾಷೆಯ ಕೆಲವು ಮೂಲ ಧ್ವನಿಗಳು ಬಿಟ್ಟು ಹೋಗಿವೆ.


ಮೇಲಿನ ನಂಬಿಕೆಗಳು ಏನೇ ಇರಲಿ, ಆಧುನಿಕ ವಿದ್ವಾಂಸರು ಭಾಷೆಯು ದೈವೀಮೂಲವೆಂದು ಒಪ್ಪದೇ, ಮಾನವನ ಅಭಿವ್ಯಕ್ತಿಯ ಅವಶ್ಯಕತೆಯ ಮೂಲಕಾರಣವೇ ಭಾಷೆಯ ಆವಿಷ್ಕಾರಕ್ಕೆ ಮೂಲ ಕಾರಣ ಎನ್ನುತ್ತಾರೆ.


ಭಾಷೆಯ ಹುಟ್ಟಿನ ಬಗ್ಗೆ ಅನೇಕ ವಾದಗಳಿವೆ. ಅವುಗಳಲ್ಲಿ ಮುಖ್ಯ್ವಾವಾದವು ಈ ಕೆಳಗಿನ ಐದು.
೧. ಅನುಕರಣವಾದ
೨. ಉದ್ಗಾರವಾದ
೩. ಅನುರಣನ ವಾದ
೪. ಶ್ರಮ ಪರಿಹಾರ ವಾದ
೫. ಸಂಜ್ಞ್ಯ ಭಾಷೆಯ ವಾದ
...ಇನ್ನೂ ಕೆಲವಿವೆ


ಅನುಕರಣವಾದ

ಪ್ರಾಚೀನ ಮಾನವ ತನ್ನ ಪರಿಸರದ ವಸ್ತುಗಳನ್ನು. ಅವುಗಳಿಂದ ಹೊರಡುವ ಶಬ್ಧಗಳನ್ನು ಅನುಕರಿಸಲು ಮಾಡಿದ ಪ್ರಯತ್ನದ ಫಲವೇ ಭಾಷೆ ಎಂಬುದು ಲೀಬ್ನಿಜ್ ಎಂಬುವನ ವಾದ. ಹೆಚ್ಚಿನ ವಿದ್ವಾಂಸರು ಈ ವಾದವನ್ನು ಸಮರ್ಥಿಸಿದ್ದರೂ ಪ್ರಾಣಿ ಪಕ್ಷಿಗಳ ವಸ್ತುಗಳ ಶಬ್ಧಗಳನ್ನು ಅವುಗಳಿಗಿಂತ ಮೇಲ್ಮಟ್ಟದ ಮನುಷ್ಯ ಅನುಕರಿಸುತ್ತನೆಂದರೆ ಒಪ್ಪಲಾಗುವುದಿಲ್ಲ ಎಂದು ರೇನಸ್ ಎಂಬಾತ ಈ ವಾದವನ್ನು ವಿರೋಧಿಸುತ್ತಾನೆ. ಮ್ಯಾಕ್ಷ್ ಮುಲ್ಲರ್  ಅಂತೂ ಈ ವಾದವನ್ನು bow  wow  ವಾದವೆಂದು ವಿಡಮ್ಬಿಸಿದ್ದಾನೆ.

  


ಉದ್ಗಾರವಾದ

ಮನುಷ್ಯ ತನ್ನ ಉತ್ಕಟ "ಭಾವಾವೇಶ"ಗಳ ಫಲವಾಗಿ ತನ್ನಿಂದ ಹೊರಟ ಉದ್ಗಾರಗಳನ್ನೇ ಭಾಷೆ ರೂಪದಲ್ಲಿ ಬಳಸಿಕೊಳ್ಳಲು ಯತ್ನ್ಸಿರಬಹುದು ಅನ್ನುವುದು ಹಮ್ಬೋಲ್ತ್ ಮತ್ತು ಹಿಲ್ಮಾರ್ ಅವರ ವಾದ. 

ಆದರೆ  ಹರ್ಡ್ರರ್ ಎಂಬಾತ 'ಓಹೋ', 'ಆಹಾ' , 'ಛೇ' , 'ಥೂ' ಎಂಬ ಉದ್ಗಾರಗಳಿಂದ ಭಾಷೆ ಹುಟ್ಟಿದೆ ಎಂಬುದು ತಪ್ಪು ಅಭಿಪ್ರಾಯ ಎಂದು ಈ ವಾದವನ್ನು ಅಲ್ಲಗೆಳೆಯುತ್ತಾನೆ.     


 

ಅನುರಣನ ವಾದ (ನಾದ ಸಿದ್ದಾಂತ)

ಪ್ರಕೃತಿಯಲ್ಲಿ ಪ್ರತಿಯೊಂದು ವಸ್ತುವೂ  ಮತ್ತೊಂದರೊಡನೆ  ಘರ್ಷಿಸಿದಾಗ ಬೇರೆ ಬೇರೆಯದೇ ಆದ ಶಬ್ಧಗಳು ಹೊರಡುತ್ತವೆ. ಅಂತಹ ಶಬ್ಧಗಳು ಮನುಷ್ಯನ ಮನಸ್ಸಿನ ಮೇಲೆ ಮೂಡಿಸಿದ ಭಾವನೆಗಳ "ಧ್ವನ್ಯನುರಣನ" ವೆ ಭಾಷೆ ಎಂದು ಮ್ಯಾಜ್ ಮುಲ್ಲರ್ ವಾದಿಸಿದ್ದ. ಆದರೆ ಈ ವಾದವೂ ಅನುಕರಣ ವಾದದಂತೆಏ ಕಂಡದ್ದರಿಂದ ಅವನೇ ತನ್ನ ವಾದವನ್ನು ನಂತರ ಹಿಂತೆಗೆದುಕೊಂಡ. 

ಕೆಲವರು ಮ್ಯಾಕ್ಷ್ ಮುಲ್ಲರ್ ನ ಈ ಸಿದ್ದಾಂತವನ್ನು ding dong theory ಎಂದು ವ್ಯಂಗ್ಯ ಮಾಡಿದ್ದಾನೆ.

   


ಶ್ರಮ ಪರಿಹಾರ ವಾದ

ಮಾನವ ತನ್ನ ದೇಹಕ್ಕೆ ಸುಸ್ತಾಗುವಂತೆ ಕೆಲಸ ಮಾಡಿದಾಗ ಉಸಿರನ್ನು ಮತ್ತೆ ಮತ್ತೆ ಹೊರಹಾಕುವುದರಿಂದ  ( ಉದಾ. ಉಷ್ಯಪ್ಪಾ..ಹುಹ್..ಇತ್ಯಾದಿ)  ಸುಸ್ತು ಕಡಿಮೆ ಆಗುವೆದೆಂದು , ನಮಗೆ ಗೊತ್ತಿಲ್ಲದೇ,  ಉಸಿರನ್ನು ಹೊರಹಾಕುತ್ತೇವೆ. ಇಂತಹ ಸಮಯದಲ್ಲಿ ಹೊರಹಾಕಿದ ಉಸಿರಿನೋಡೋನೆ  ಬಂದ ಧ್ವನಿಗಳೇ ಭಾಷೆಯ ಉಗಮಕ್ಕೆ ಕಾರಣ ಎಂಬುದು ನೋರಿ ಯ ವಾದ. 

ಕೆಲವರು ಈ ವಾದವೆನ್ನು "ಯೋ-ಹೇ-ಹೋ" ವಾದಬೆಂದು ಕರೆದರು.

 

ಸಂಜ್ಞ್ಯಾ ಭಾಷೆಯ ವಾದ

ಆಂಗಿಕ ಅಭಿನಯಗಳ ಮೂಲಕ ಅಭಿವ್ಯಕ್ತಿಯನ್ನು ಕಂಡುಕೊಂಡ ಮನುಷ್ಯ ಕ್ರಮೇಣ ಉಸುರಿದ ಶಬ್ಧಗಳೇ ಭಾಷೆಯ ಉಗಮಕ್ಕೆ ಕಾರಣವೆಂಬುದು ವುಂಡ್ಟ್ ಎಂಬಾತನ ವಾದ.  

.....................................

ಒಂದು ನುಡಿಯ ಹುಟ್ಟಿನ ಬಗ್ಗೆ ಏನೆಲ್ಲಾ ವಾದಗಳು ಇದ್ದಾರೂ ಇವೆಲ್ಲ ಭಾಷೆಯ ಒಂದೊಂದು ಅಂಶವನ್ನು ತಿಳಿಸುತ್ತವೆಯೇ ಹೊರತು ಮುಖ್ಯ ಅಂಶಗಳನ್ನು ತಿಲಿಸಲ್ಲ.   


 

ಎಸ್ಪರ್ಸನ್ ಎಂಬಾತ  "ಭಾಷೆಯ ಉಗಮವನ್ನು  ಕುರಿತ ವಾದಗಳು ಭಾಷೆಯ ಪ್ರಧಾನ ಲಕ್ಷಣಗಳತ್ತ ಗಮನವೇ ಹರಿಸುವುದಿಲ್ಲ"  ಎಂದು ಹೇಳುತ್ತಾ, ಯಾವುದೇ ಭಾಷೆಯ ಪ್ರಾರಂಬಿಕ ಅವಸ್ತೆಯನ್ನು ತಿಳಿಯಲು ಮೂರು ಮಾರ್ಗಗಳನ್ನು ಸೂಚಿಸಿದ. 

೧. ತೊದಲ್ನುಡಿಯನ್ನು ಬಳಸುವ ಮಕ್ಕಳ ಭಾಷೆ ಕುರಿತ ಅಧ್ಯಯನ.


ಮಕ್ಕಳು ಮಾತನಾಡುವುದನ್ನು ಕಲಿಯುವಾಗ, ತನ್ನ ಪರಿಸರದವರು ಆಡುವ ಭಾಷೆಯನ್ನು ಗಮನಿಸುತ್ತದೆಯಾದರೂ, ಅದಕ್ಕೂ ಮೊದಲು ಮಗುವೊಂದು ಧ್ವನಿಯನ್ನು ಹೇಗೆ ಉಚ್ಚರಿಸುತ್ತದೆ ಎಂಬುದನ್ನು ಗಮನಿಸಬೇಕು.   

 

೨. ಆದಿವಾಸಿ ಜನಾಂಗಗಳು ಬಳಸುವ  ಭಾಷೆಗಳ ಅಧ್ಯಯನ


ಆದಿವಾಸಿಗಳ ಭಾಷೆ ಬದಲಾವಣೆ ಗೊಂಡಿರದೆ ಮೂಲ ರೂಪದಲ್ಲಿಯೇ ಬಳಕೆಯಾಗುತ್ತಿರುತ್ತದೆ. ಅದ್ದರಿಂದ ತನ್ನ ಮೂಲರೂಪಗಳನ್ನ ಆದಿವಾಸಿಗಳ ಭಾಷೆ ಉಳಿಸಿಕೊಂಡಿರುವ  ಸಾಧ್ಯತೆ ಹೆಚ್ಚು. ಹೊರಗಿನ ಪ್ರಭಾವ ಕಡಿಮೆ ಹೊಂದಿರುವ ಈ ಆದಿವಾಸಿ ಭಾಷೆಗಳ ಮೂಲಕ  ( ಉದಾ. ಸೋಲಿಗರ ಭಾಷೆ ಕನ್ನಡ ಮೂಲ ರೂಪದ ಬಗ್ಗೆ ಹೊಳಹು ಕೊಡಬಲ್ಲುದು). ಪ್ರಾಚೀನ ಭಾಷೆಯ ಲಕ್ಷಣಗಳನ್ನು ತಿಳಿಯಬಹುದು.

೩. ಭಾಷಾ ಚರಿತ್ರೆಯ  ಅಧ್ಯಯನ.


ಒಂದು ಭಾಷೆಯ ಚಾರಿತ್ರಿಕ ಅಧ್ಯಯನದ ಮೂಲಕ ಆ ಭಾಷೆಯ ಹಿಂದಿನ ಸ್ವರೂಪವನ್ನು ತಿಳಿದುಕೊಳ್ಳಲು ಸಾಧ್ಯ.

 

ಆದರೆ ಈ ಅಧ್ಯಯನಗಳ ಮೂಲಕ ಭಾಷೆಯ "ಹುಟ್ಟಿನ" ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದಿಲ್ಲ.  :)

  
Rating
Average: 4.5 (2 votes)

Comments