ಜಾರ್ಜ್ ಬುಷ್ ಜೂನಿಯರ್- ಕೆಲವು ಗೊತ್ತಿಲ್ಲದ ಮುಖವಾಡಗಳು

ಜಾರ್ಜ್ ಬುಷ್ ಜೂನಿಯರ್- ಕೆಲವು ಗೊತ್ತಿಲ್ಲದ ಮುಖವಾಡಗಳು

Comments

ಬರಹ

ಬರಾಕ್ ಒಬಾಮಾಗಿಂತಲೂ ಮೊದಲು ಎರಡು ಅವಧಿಗಳಿಗೆ (ಹತ್ತು ವರ್ಷ) ಅಮೆರಿಕಾ ಅಧ್ಯಕ್ಷನಾಗಿದ್ದ ಜಾರ್ಜ್ ವಾಕರ್ ಬುಶ್ ಮಾಡದ ರಾದ್ದಾಂತಗಳಿಲ್ಲ. ಇರಾಕ್ ಆಕ್ರಮಣವೊಂದೇ ಸಾಕು ಈತನ "ಸಾಧನೆ"ಗಳನ್ನು ವಿವರಿಸಲು. ಅಮೆರಿಕಾದ ಅತ್ಯಂತ ಪ್ರತಿಷ್ಠಿತ ಕುಟುಂಬಗಳಲ್ಲಿ ಹುಟ್ಟಿದ (ಇವನ ತಂದೆ ಅಮೆರಿಕಾ ಅಧ್ಯಕ್ಷ, ತಾಯಿಯೂ ರಾಜವಂಶೀಯ ಕುಟುಂಬವರ್ಗದವಳು,  ತಾತನೂ ಒಬ್ಬ ಸೆನೆಟರ್ ಹಾಗೂ ವಾಲ್ ಸ್ಟ್ರೀಟ್ ಬ್ಯಾಂಕರ್)  ಈತನ ಬಗ್ಗೆ ಹೀಗೇ ಮಾಹಿತಿ ಜಾಲಾಡುತ್ತಿದ್ದಾಗ ಕೆಲವು ಕುತೂಹಲಕಾರಿ ವೆಬ್ ಸೈಟುಗಳು ದೊರೆತವು. ಇವುಗಳಲ್ಲಿ ಒಂದು ಇದು: http://www.realchange.org/bushjr.htm#Iraq. ಇದನ್ನು ಓದಿದಲ್ಲಿ ಈತನ ಇಡೀ ಹಗರಣಗಳ ಮಾಹಿತಿ ಸಿಗುತ್ತದೆ.

 

ನನಗೆ ಇನ್ನೂ ವಿಶೇಷವೆನಿಸಿದ್ದು ಇನ್ನೊಂದು ವೆಬ್ ಲೇಖನ. ಇದು  ತೆಹೆಲ್ಕಾ ಚಾನೆಲ್-ನ ಸೈಟ್. ಇದನ್ನು ಓದಿದ ನಂತರ ನನಗನಿಸಿದ್ದು ಈ ಮಟ್ಟಿಗಿನ ಮತಾಂಧತೆಯೂ ಸಾಧ್ಯವೇ ಎಂದು, ಅದೂ ಧಾರ್ಮಿಕ, ಮಾನವ ಹಕ್ಕು ಎಂದೆಲ್ಲಾ ಬೊಬ್ಬೆಯಿಡುವ ಮಂದಿಯಿಂದ. ವೆಬ್ ಲೇಖನ ಸ್ವಲ್ಪ ದೊಡ್ಡದಾಗಿರುವುದರಿಂದ ಎಲ್ಲಾ ಮಾಹಿತಿಗಳನ್ನೂ ಇಲ್ಲಿ ಪ್ರಸ್ತಾವಿಸುವುದು ಸಾಧ್ಯವಿಲ್ಲ. ಹೀಗಾಗಿ ಅತ್ಯಂತ ಕಳವಳಕಾರಿ ಎನಿಸಬಹುದಾದ ಅಂಶಗಳನ್ನಷ್ಟೇ ಇಲ್ಲಿ ನೀಡುತ್ತಿದ್ದೇನೆ.

  • ಬುಷ್ ಪ್ರಥಮ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗುವ ಮೊದಲು ಅಂದರೆ 2000ನೇ ಇಸವಿಯಲ್ಲಿ ಕ್ರಿಶ್ಚಿಯನ್ ಬ್ರಾಡ್-ಕಾಸ್ಟಿಂಗ್ ನೆಟ್-ವರ್ಕ್ ಎಂಬ  ಚಾನೆಲ್-ನ ವ್ಯಾಪಕ ಪ್ರಚಾರ ಈತ ಅಧ್ಯಕ್ಷನಾಗುವುದಕ್ಕೆ ತುಂಬಾ ಸಹಕಾರಿಯಾಯ್ತು.  ಈ ಚಾನೆಲ್-ನ ಮುಖ್ಯಸ್ಥ ಪ್ಯಾಟ್ ರಾಬಿನ್ಸನ್ ಎಂಬ ಬಹುಕೋಟ್ಯಧೀಶ ಇವಾಂಜೆಲಿಕ್.. ಹೀಗೆ ಅಧಿಕಾರಕ್ಕೆ ಬರುವಾಗಲೇ ಇಂಥವರ ಬೆಂಬಲ ಪಡೆದಿರುವಾಗ ಆನಂತರ ಅವರನ್ನು ಕೈಬಿಡಲಾದೀತೇ..
  • ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಡುವ ಬುಷ್ 2002ರಲ್ಲಿ ದಿ ಆಫೀಸ್ ಆಫ್ ದಿ ಫೈತ್ ಬೇಸ್ಡ್ ಆ್ಯಂಡ್ ಕಮ್ಯುನಿಟಿ ಇನಿಶೀಯೇಟಿವ್ಸ್ ಎಂಬ ಹೊಸ ಕಛೇರಿಯೊಂದನ್ನೇ ಶ್ವೇತ ಭವನದಲ್ಲಿ ತೆರೆಯುತ್ತಾನೆ. ಇದರ ನಿರ್ದೇಶಕ ಜಿಮ್ ಟೋವಿ ಎಂಬುವವ, ಈತ ಮದರ್ ತೆರೆಸಾನ ಕಾನೂನು ಸಲಹೆಗಾರನಾಗಿದ್ದವನು.
  • ಅಮೆರಿಕಾದ ವಿವಿಧ ಇವಾಂಜೆಲಿಕ್-ಗಳಿಂದ ಮುಖ್ಯವಾಗಿ ಭಾರತದಲ್ಲಿ ಮತಾಂತರ ತೀವ್ರಗೊಳಿಸಲೆಂದೇ ಎ.ಡಿ.2000 ಎಂಬ ವಿಶೇಷ ತಂತ್ರವೊಂದನ್ನು ಹೂಡಲಾಗುತ್ತದೆ. ಎ.ಡಿ. 2000 ಕಾರ್ಯಕ್ರಮವನ್ನು ಒಂದು ಮಿಲಿಟರಿ ಕಾರ್ಯಾಚರಣೆಯಂತೆ- ಅಂದರೆ ಮೊದಲು ನುಸುಳು, ನಂತರ ಆಕ್ರಮಿಸು, ಆಮೇಲೆ ನಿಯಂತ್ರಿಸು, ಕೊನೆಗೆ ಶರಣಾಗತನನ್ನಾಗಿಸು- ಎಂಬ ತಂತ್ರದ ಮೇಲೆ ಯೋಜಿಸಲಾಗಿದೆ. ಇದರಡಿಯಲ್ಲಿ ವಿವಿಧ ಹೆಸರುಗಳಡಿ ಮಿಶಿ-ನರಿ ಕಾರ್ಯ ಕೈಗೊಳ್ಳುತ್ತಿರುವ ಸಂಸ್ಥೆಗಳನ್ನು "ಪೂರಕ"ವಾಗಿ ಕೆಲಸ ಮಾಡಲು ಸಹಾಯಕವಾಗುವ ವ್ಯವಸ್ಥೆ ಮಾಡಲಾಗಿದೆ. ಜೋಶುವ-1, ಜೋಶುವ-2 ಹೆಸರಿನಲ್ಲಿ ವಿವಿಧ ಪ್ರದೇಶಗಳಲ್ಲಿ ಮತಾಂತರ ಅವ್ಯಾಹತವಾಗಿ ನಡೆದುಕೊಂಡೇ ಬಂದಿದೆ. ವಿವಿಧ ಪ್ರದೇಶಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಿಕೊಡಲಾಗಿದೆ, ಇದು ಒಂದು ರೀತಿಯ ಕಾಂಟ್ರಾಕ್ಟ್ ವ್ಯವಸ್ಥೆ.
  • ಈ ಯೋಜನೆಯ ಪ್ರಮುಖ ಗುರಿ ಉತ್ತರ ಭಾರತ. ಉ. ಭಾರತವನ್ನು "core of the core of the core" ಎಂದು ಗುರುತಿಸಲಾಗಿದೆ, ಅದೂ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ.
  • ಎ.ಡಿ. 2000 ಅನ್ನು "the largest, most pervasive global evangelical network ever to exist" ಎಂದು ಹೇಳಲಾಗಿದೆ. ಬಿಲ್ಲಿ ಗ್ರಹಾಂ ಎಂಬ ಇವಾಂಜೆಲಿಕ್ ಇದರ ಸಹ-ಮುಖ್ಯಸ್ಥ. ಈತನನ್ನು ಸ್ವತಃ ಬುಷ್ ತನ್ನ ಗಾಡ್ ಫಾದರ್ ಎಂದು ಹೇಳುತ್ತಾನೆ.
  • ಭಾರತದ ವಿವಿಧ ಭಾಗಗಳಲ್ಲಿಯ ಜನರು, ಜನಜೀವನ, ಅಲ್ಲಿನ ಆಡಳಿತ ಯಂತ್ರ, ಎಲ್ಲವನ್ನೂ ಅತ್ಯಂತ ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ (ಬಹುಶಃ ಭಾರತದ ಯಾವುದೇ ಸೆನ್ಸಸ್ ಇದಕ್ಕೆ ಸಮನಲ್ಲವೇನೋ.. ). ಇದಕ್ಕೆ ತಕ್ಕಂತೆ ಮತಾಂತರವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
  • ಭಾರತದಲ್ಲಿ ನಡೆಸಲಾಗುತ್ತಿರುವ ಕಾರ್ಯಾಚರಣೆಗಳನ್ನು ನಿರ್ವಹಣೆ ಮಾಡಲೆಂದು ಎಂ.ಐ.ಎಸ್ (ಮ್ಯಾನೇನ್ಮೆಂಟ್ ಇನ್ಫೋರ್ಮೇಶನ್ ಸಿಸ್ಟಂ) ರೀತಿಯ ಪಿನ್-ಕೋಡ್ ಆಧಾರಿತ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ. ಭಾರತೀಯ ಅಂಚೆಯು ರೂಪಿಸಿರುವ ಪಿನ್-ಕೋಡ್ ಗಳನ್ನೇ ಬಳಸಿ ಎಲ್ಲಾ ಪ್ರದೇಶಗಳ ಕುರಿತಾದ ಅತ್ಯಂತ ವ್ಯವಸ್ಥಿತ ಹಾಗೂ ಸುರಕ್ಷಿತ ಡೇಟಾ-ಬೇಸ್ ಕಲೆಹಾಕಲಾಗಿದೆ. ಇದನ್ನು ಉಪಯೋಗಿಸಿಕೊಂಡು ಯಾವ ಹಳ್ಳಿಯಲ್ಲಿ ಯಾವ ಜಾತಿಯ ಜನರನ್ನು ಮತಾಂತರ ಮಾಡಲಾಗಿದೆ, ಯಾರು ಮಾಡಿದ್ದಾರೆ, ಯಾವ ಅವಧಿಯಲ್ಲಿ ಮಾಡಲಾಗಿದೆ ಎಂಬೆಲ್ಲಾ ಮಾಹಿತಿ ಕ್ಷಣಮಾತ್ರದಲ್ಲಿ ಲಭ್ಯ.
  • ಬಹುಮುಖ್ಯ ಹಾಗೂ ಕಳವಳಕಾರಿ ಅಂಶ: ಅಮೆರಿಕದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ)ಗೆ ಈ ಎಲ್ಲಾ ವ್ಯವಸ್ಥೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ- ಭಾರತದಲ್ಲಿ ಮಾತ್ರವಲ್ಲ, ಇತರೇ ದೇಶದಲ್ಲೂ). ಇದನ್ನು ಸ್ವತಃ ಸಿಐಎ ಅಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡ ಉದಾಹರಣೆಗಳಿವೆ. ಇಂತಹ ಒಂದು ಉದಾಹರಣೆಯನ್ನು ವೆಬ್-ಸೈಟ್ ನಲ್ಲಿ ನೀಡಲಾಗಿದೆ.
  • ಭಾರತದಲ್ಲಿ ವಿದೇಶಿ ಮಿಶಿ-ನರಿಗಳಿಗೆ ವೀಸಾ ನೀಡಲಾಗುವುದಿಲ್ಲ. ಪ್ರವಾಸಿ ವೀಸಾ, ತಾತ್ಕಾಲಿಕ ಭೇಟಿಯ ವೀಸಾ ಇತ್ಯಾದಿ ಹೆಸರಿನಲ್ಲಿ ವೀಸಾ ಪಡೆಯಲಾಗುತ್ತಿದೆ.
  • ಈ ಮೇಲೆ ಹೇಳಿದ ಸಿಬಿಎನ್ ಚ್ಯಾನೆಲ್ ಮುಖ್ಯಸ್ಥ ಪ್ಯಾಟ್ ರಾಬಿನ್ಸನ್ ಹೇಳಿರುವುದನ್ನು ನೋಡಿ: "ಹಿಂದೂ ಧರ್ಮದ ಅಪ್ರತ್ಯಕ್ಷ (occult) ಚಟುವಟಿಕೆಗಳು ಭೂತ ಪ್ರೇತಗಳ ಆರಾಧನೆಯಿಂದ ಹುಟ್ಟಿದವುಗಳು. ಆ ಧರ್ಮವು ಎಲ್ಲಾ ಧರ್ಮಗಳೂ ಒಂದೇ ಹಾಗೂ ಸಮಾನ ಎಂಬಂತೆ ಹೇಳುತ್ತದೆ. ಆದರೆ ಇದು ನಿಜವಲ್ಲ". ಈತನು ವಿಶ್ವಾದ್ಯಂತ ನಡೆಸುವ ಮತಾಂತರಕ್ಕೆ ವಾರ್ಷಿಕ 66 ಮಿಲಿಯನ್ ಡಾಲರ್ ವೆಚ್ಚವಾಗುತ್ತಿದೆ. ಈತನ ಸ್ನೇಹಿತನೊಬ್ಬ ಪ್ರವಾದಿ ಮಹಮ್ಮದರ ಬಗ್ಗೆ ಅತ್ಯಂತ ಕೀಲು ಮಟ್ಟದ ಹೇಳಿಕೆಯನ್ನು ಟಿ.ವಿ. ಚ್ಯಾನೆಲ್ ಮೂಲಕ ನೀಡಿ ವಿವಾದಕ್ಕೆ ಕಾರಣನಾಗುತ್ತಾನೆ.
  • ಬುಷ್ ಅಧಿಕಾರಾವಧಿಯಲ್ಲಿ ವಿದೇಶಗಳಿಗೆ ಸಹಾಯದ ಹೆಸರಿನಲ್ಲಿ ಇಂಥ ಸಂಸ್ಥೆಗಳಿಗೆ ನೀಡಿರುವ ಗ್ರಾಂಟ್ 18 ಬಿಲಿಯನ್ ಡಾಲರ್ (2008 ರಲ್ಲಿ). 2002ರಲ್ಲಿ ಇದು 11 ಬಿಲಿಯನ್ ಆಗಿತ್ತು. ಈ ಆರು ವರ್ಷಗಳಲ್ಲಿ ವಿದೇಶಿ ಸಹಾಯಕ್ಕೆಂದು ವ್ಯಯಿಸಲಾಗಿರುವ ಹಣವು ಇದುವರೆಗಿನ ಎಲ್ಲಾ ವೃದ್ಧಿದರಗಳಿಗಿಂತಲೂ ಹೆಚ್ಚು, ಅದೂ ರಿಪಬ್ಲಿಕನ್ ಪಾರ್ಟಿಯಂಥ ವಿದೇಶಗಳಿಗೆ ಸಹಾಯ ನೀಡುವುದನ್ನು ವಿರೋಧಿಸುವ ಪಕ್ಷವೊಂದರಿಂದ.
  • ಮಾನವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮುಂತಾದ ಗುರಾಣಿಗಳನ್ನು ಬಳಸುತ್ತಾ ಹೇಗೆ ಅಶಾಂತಿಯನ್ನು ಈ ಎಲ್ಲಾ ಸಂಸ್ಥೆಗಳು ವಿವಿಧ ದೇಶಗಳಲ್ಲಿ ಹರಡುತ್ತಿವೆ ಎಂಬುದನ್ನು ಸುಡಾನ್ ದೇಶದ ಉದಾಹರಣೆಯ ಮೂಲಕ ಬಹಳ ಚೆನ್ನಾಗಿ ವಿವರಿಸಲಾಗಿದೆ.

 

  • ಹೆಚ್ಚಿನ ವಿವರಗಳಿಗೆ ಈ ಲಿಂಕ್-ಗೆ ಭೇಟಿ ಕೊಡಿ http://www.tehelka.com/story_main.asp?filename=ts013004qaeda.asp

 

ಇದನ್ನೆಲ್ಲಾ ನೋಡಿದ್ರೆ, ಇನ್ನು ಇಪ್ಪತ್ತು ವರ್ಷಗಳಲ್ಲಿ ಭಾರತದ ಗತಿ ಹೇಗಿರಬಹುದು ಎಂದು ಇಲ್ಲಿ ಕೂತು ನನ್ನ ತಲೆ ಬಿಸಿಯಾಗುತ್ತಿದೆ. ಒಂದೆಡೆ ಬಹಿರಂಗವಾಗಿ ಅಟ್ಯಾಕ್ ಮಾಡುವ ಆತಂಕವಾದಿಗಳ ಕಾಟ, ಇನ್ನೊಂದೆಡೆ ಈ ರೀತಿ ಕುತಂತ್ರದಿಂದ ಒಂದು ದೇಶವನ್ನೇ ಕೊಲ್ಲುವ ವೈರಿಗಳು.. ಈ ಹಿಂದೆಯೂ ಅನೇಕ ರೀತಿಯ ದಾಳಿಗಳು ಭಾರತೀಯ ಸಂಸ್ಕೃತಿಯ ಮೇಲೆ ಆಗಿವೆಯಾದರೂ ಈ ಮಟ್ಟಿಗಿನ ವ್ಯವಸ್ಥಿತವಾದ ಯೋಜನೆಗಳು ಇವಾಗಿರಲಿಲ್ಲ. ದೇವರೇ ಕಾಪಾಡಬೇಕು ನಮ್ಮನ್ನು.

ಆದರೆ ಒಂದಂತೂ ನಿಜ, ಮನುಷ್ಯ ತಾನೊಂದು ಬಗೆದರೆ ವಿಧಿಯಾಟ ಬೇರೆಯೇ ಇರಬಹುದಲ್ಲವೇ? ಇಲ್ಲದಿದ್ದರೆ ಈ ರಿಸೆಶನ್ ಈಗಲೇ ಬರಬೇಕೇ ಈ ದೇಶಕ್ಕೆ? ಬಂದಿದ್ದು ಬಂತು, ಈ ದೇಶಕ್ಕೆ ಮಾತ್ರವೇ? ಎಲ್ಲರಿಗೂ ಬಡಿಯಿತು. ಹೀಗಾಗಿ ಕೊನೆಗೆ ಏನಾಗುವುದೋ ಅದೇ ಆಗುತ್ತದೆ ಎಂಬ ಆಶಾ ಭಾವನೆಯೊಂದಿಗೆ ಈ ಬರಹವನ್ನು ಅಂತ್ಯಗೊಳಿಸುತ್ತೇನೆ....

ನನ್ನ ಕೊನೆಯ ಪ್ರಶ್ನೆ: ಅಮೆರಿಕಾದಂಥ ದೇಶದಲ್ಲೇ ಹೀಗಿರುವಾಗ, ನಮ್ಮ ಯಡ್ಡ್ಯೂರಪ್ನೋರು ಯಾವುದೋ ಕೆಲ ಮಠಗಳಿಗೆ ಜುಜುಬಿ ಒಂದೆರಡು ಕೋಟಿ ಕೊಟ್ಟಿದ್ದಕ್ಕೇ ಇಡೀ ಆಕಾಶ ಭೂಮಿ ಒಂದು ಮಾಡಿದ್ದು ಸರೀನಾ ಸ್ವಾಮಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet