ಕಾಸು - ಕುರ್ಚಿಯ ಖಾದಿಗಳ ನಡುವೆಯೊಬ್ಬ...

ಕಾಸು - ಕುರ್ಚಿಯ ಖಾದಿಗಳ ನಡುವೆಯೊಬ್ಬ...

 Jai Ram Ramesh            ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ. ಇಬ್ಬರೂ ಅಬ್ಬರಿಸುತಿದ್ದಿದ್ದು 'ಗುಂಡ್ಯ ಜಲ ವಿದ್ಯುತ್ ಯೋಜನೆ'ಯನ್ನ ಜಾರಿಗೆ ತಂದೆ ತರುತ್ತೇವೆ ಅಂತ.ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆಯೂ ಸಚಿವರಿಗೆ ಮೋಹವಿತ್ತು.BT (ಬಿಟ್ಟಿ?) ಬದನೇಕಾಯಿ ವಿಷಯದಲ್ಲಿ ಹೆಸರಿಗೆ ಕೃಷಿ ಸಚಿವರಾದರು ಸದಾ ಕಾಲ ಬ್ಯಾಟ್ ಹಿಡಿದು ಕ್ರಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಶರದ್ ಪವಾರ್ ಸಹ ಬಿ.ಟಿ  ಬದನೆ ಒಳ್ಳೇದು ಇರ್ಲಿ ಬಿಡಿ ಅಂದಿದ್ರು.ಮೊನ್ನೆ ಮೊನ್ನೆ ನಮ್ಮ ತಲೆ ಕೆಟ್ಟ ರಾಜ್ಯ ಸರ್ಕಾರ ಮೈಸೂರು-ಶಿವಮೊಗ್ಗದ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಾಗ, ಆಚಾರ್ಯ ಅವ್ರು ಹೇಳಿದ್ರಲ್ಲ ಗಣಿಗಾರಿಕೆಯನ್ನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಅಂತ, ಅದ್ಹೆಂಗೆ ಪರಿಸರಕ್ಕೆ ಹಾನಿಯಾಗದಂತೆ ಮಾಡೋದು ಅಂತ ಪುಣ್ಯಾತ್ಮ ಹೇಳಲಿಲ್ಲ, ಇವ್ರು ಗಣಿ ಅಗೆಯುವವರೆಗೂ ಇರೋ ಬರೋ ಕಾಡು-ಪ್ರಾಣಿ-ಪಕ್ಷಿಗಳನ್ನೆಲ್ಲ ತಮ್ಮ ತವರು ಕರಾವಳಿಯ ಕಡಲಿನಲ್ಲಿ ಇಡುತಿದ್ದರೆನೋ?  ಕುರ್ಚಿ ಸಿಗುತ್ತೆ ಅಂದ್ರೆ ವಿಧಾನ ಸೌಧದ ಕೆಳಗೂ ಅಗೆಯೋಕೆ ಬಿಡೋಕು ಸೈ  ಅನ್ನೋ ಈ ರಾಜಕಾರಣಿಗಳಿಗೆ common sense ಇಲ್ವಾ?

ಆದರೆ ಕಾಸು- ಕುರ್ಚಿಯ ಕನಸು ಕಾಣುವ ಖಾದಿಗಳ ನಡುವೆಯೊಬ್ಬ ಇತ್ತೀಚಿನ ದಿನಗಳಲ್ಲಿ  common sense ಇರುವಂತೆ,ಜನರ ಮನ ಅರಿತಂತೆ ವರ್ತಿಸುತಿದ್ದವ್ರು  ಕೇಂದ್ರ ಅರಣ್ಯ ಪರಿಸರ ಖಾತೆ ಸಚಿವ 'ಜೈ ರಾಮ್ ರಮೇಶ್'.

 

 

ಅದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ವಿಷಯವಿರಬಹುದು,ಗುಂಡ್ಯ ಯೋಜನೆಯಿರಬಹುದು,ಬಿ.ಟಿ ಬದನೆಯ ವಿಷಯ ಇರಬಹುದು.ಪರಿಸರಕ್ಕೆ ಹಾನಿಕಾರಕವಾಗಿದ್ದ ಇವುಗಳನ್ನ ಜಾರಿಗೆ ತರುವಲ್ಲಿ ಯಾವ ಲಾಭಿಗೂ  ಮಣಿಯದೆ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.ಬಳ್ಳಾರಿ ಹಾಳಾಗಿರೋದು ಸಾಲೋದಿಲ್ಲ ಅಂತ, ಯಡ್ಡಿ ಸರ್ಕಾರ ರಕ್ಷಿತಾ ಅರಣ್ಯದಲ್ಲೂ  ಗಣಿಗಾರಿಕೆ ಮಾಡಲು ಅನುಮತಿ ಕೊಟ್ಟು, ಇದಕ್ಕೆ ಕೇಂದ್ರದ ಒಪ್ಪಿಗೆಯು ಇದೆ ಅಂದಾಗ ಗರಂ ಆಗಿ ಪ್ರತಿಕ್ರಿಯಿಸಿದ ಜೈ ರಾಮ್ ರಮೇಶ್, ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ತಪರಾಕಿ ಹಾಕಿದ್ದರು. 

ತೀರ ಮೊನ್ನೆ ಮೊನ್ನೆ ಭೋಪಾಲ್ ಕಾನ್ವೊಕೇಷನ್ನಲ್ಲಿ ಗೌನ್ ಕಳಚಿ ಅದನ್ನ ಗುಲಾಮಗಿರಿಯ ಸಂಕೇತ ಅಂದಾಗಲು ಜನ ಖುಷಿ ಪಟ್ಟಿದ್ದರು, ಇಂತ  ಜೈ ರಾಮ್ ಚೈನಾಗೆ ಹೋಗಿ ತಮ್ಮ ಸಂಪುಟದ ಮತ್ತೊಬ್ಬ ದಕ್ಷ 'ಚಿದಂಬರಂ' ಅವರ ಸಚಿವಾಲಯದ ಕಾರ್ಯ ವೈಖರಿಯ ಬಗ್ಗೆ  common ಸೆನ್ಸ್ ಇಲ್ಲದವರಂತೆ ಮಾತಾಡಿದ್ದು ನೋಡಿ ಬೇಸರವಾಯಿತು.ಅವರನ್ನು ಕರೆಸಿ ಗದರಿಸಿ ಪ್ರಧಾನಿ  ಮತ್ತೆ ಇನ್ಯಾರು ಇಂತ ಕೆಲಸಕ್ಕೆ ಕೈ ಹಾಕಲು ಯೋಚಿಸುವಂತೆ ಮಾಡಿದ್ದಾರೆ.ಆದರೆ ಈ ವಿದ್ಯಮಾನಗಳಿಂದ ವಿಚಲಿತರಾಗಿ ರಾಜಿನಾಮೆ ನೀಡಲು ಹೊರಟಿದ್ದರು ಜೈ ರಾಮ್ ಅನ್ನೋ ಸುದ್ದಿ ಕೂಡ ಬಂದಿತ್ತು,ಅದನ್ನು ತಿರಸ್ಕರಿಸಿ ಪ್ರಧಾನಿ ಒಳ್ಳೆಯ ನಿರ್ಧಾರ ತಳೆದಿದ್ದಾರೆ. ಅದೇನೇನೋ ಕಂತ್ರಿ ಕೆಲಸ ಮಾಡಿ ಮಂತ್ರಿಗಳಾಗಿ ಮೂರು ಬಿಟ್ಟು ಕುರ್ಚಿ ಹಿಡಿದು ಕುಳಿತಿರುವ ಕೆಲಸಕ್ಕೆ ಬಾರದ ಮಂತ್ರಿಗಳ ನಡುವೆ , ಜನ ಪರ ನಿಲುವು ತಳೆಯುವ ಜೈ ರಾಮ್ ರಮೇಶ್ ಅಂತವರು ನಮಗಾಗಿ ಅಲ್ಲದಿದ್ದರೂ 'ಪರಿಸರ' ಖಾತೆಗಾಗಿಯಾದರು ಕುರ್ಚಿಯಲ್ಲಿ ಇರಬೇಕು .

(ಚಿತ್ರ ಕೃಪೆ : http://beta.thehindu.com)

Rating
No votes yet

Comments