ಒಲವಿನ ಪ್ರಿಯತಮೆ ನಿನಗಾಗೀ

ಒಲವಿನ ಪ್ರಿಯತಮೆ ನಿನಗಾಗೀ


ನಿನ್ನವನೇ ಪಿಯ ಎನಿಸಿದ ಮೇಲೆ
ಈ ನಾಚಿಕೆಯ ತೆರೆಯೇಕೆ
ನಿನ್ನನೆ ಪ್ರಿಯಗೆ ನೀಡಿದ ಮೇಲೆ
ಇಹದ ಪರದೆಯ ಮರೆಯೇಕೆ


ನಿನಗೆನಿತೋ ಪ್ರೇಮವು ಎನ್ನಲಿ
ಅದಕೇ ನೀ ನನ್ನರಿತಿರುವೆ
ನಾನೂ ನಿನ್ನನೆ ನೆನೆಸೀ ನೆನೆಸೀ
ನನ್ನಿರವನ್ನೇ ಮರೆತಿರುವೆ

ಕಠಿಣ ಸಮಸ್ಯೆಯ  ಹೊತ್ತಿನಲೂ
ನೀನೋರ್ವಳೇ ಎನಗಾಧಾರ
ನನ್ನೆಲ್ಲಾ ಚಿಂತನೆಗಳಿಗೂ ಪ್ರಿಯೆ
ನೆನಪಲ್ಲೇ ಇದೆ ಪರಿಹಾರ

ನನ್ನೀ ಹೃದಯವೆ ಮಿಡಿಯುತಿದೆ
ಒಲವಿನ ಪ್ರಿಯತಮೆ ನಿನಗಾಗೀ
ಪ್ರೇಮದ ಕಂಪನು ಪಸರಿಸಿಸಿ
ಶಾಂತಿಯ ನೀಡೂ ನನಗಾಗೀ

ಬರುವೆನಿದೋ ನಿನ್ನ ಕನಸಲ್ಲೇ ನಾ
ನಗೆಯನು ಅರಳಿಸಿ ಮುಖದಲ್ಲೇ
ಪಡೆಯುವೆ  ಮಹದಾನಂದವನೂ ನಾ
ಸಿಂಗರಿಸೀ ನಿನ್ನ ಒಲವಲ್ಲೇ


Rating
No votes yet

Comments