ಗದ್ದೆ ಗೊರವ ಹಕ್ಕಿ
14 hours 30 minutes ago - ಬರಹಗಾರರ ಬಳಗಬೇಸಗೆಯ ಬಿಸಿಲು ತಾರಕದಲ್ಲಿದೆ. ಬಿಸಿಲು ಏರಿದ ಮೇಲೆ ಹೊರಗೆ ಹೋಗುವುದೇ ಬೇಡ ಎನ್ನುವಷ್ಟು ಕಿರಿಕಿರಿ. ಕಳೆದ ವಾರ ಚುನಾವಣಾ ಕರ್ತವ್ಯ ಮುಗಿಸಿ ಬಂದು ಆರೋಗ್ಯವೂ ಸ್ವಲ್ಪ ಕೆಟ್ಟಿತ್ತು. ಎರಡು ದಿನ ಎಲ್ಲೂ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆದೆ. ರಜೆಯಲ್ಲಿ ಆಟ ಆಡಲು ಯಾರೂ ಇಲ್ಲದೆ ಮಗಳು ಮನೆಯಲ್ಲಿ ಚಡಪಡಿಸುತ್ತಿದ್ದಳು. ಅಪ್ಪಾ ಬೀಚ್ ಗೆ ಹೋಗಿ ಸ್ವಲ್ಪ ಆಟ ಆಡಿ ಬರೋಣ ಎಂದು ಪ್ರಸ್ತಾವನೆ ಇಟ್ಟಳು. ತಕ್ಷಣ ಆಗಬಹುದು ಎಂದು ಮಗಳನ್ನೂ ಮಡದಿಯನ್ನೂ ಕರೆದುಕೊಂಡು ತಣ್ಣೀರುಬಾವಿ ಬೀಚ್ ಕಡೆ ಬಂದೆ. ವಾರದ ದಿನವಾದ್ದರಿಂದ ಹೆಚ್ಚು ಜನಜಂಗುಳಿ ಇರಲಿಲ್ಲ. ನೀರಿನ ಮಟ್ಟ ಸ್ವಲ್ಪ ಹೆಚ್ಚಿತ್ತು. ಚಂದ್ರ ಮತ್ತು ಭೂಮಿಯ ನಡುವೆ ಗುರುತ್ವಾಕರ್ಷಣೆಯ ಕಾರಣದಿಂದ ಸಮುದ್ರ ತೀರದಲ್ಲಿ ಉಬ್ಬರ ಮತ್ತು ಇಳಿತಗಳಾಗುತ್ತವೆ. ಇಳಿತ ಇದ್ದಾಗ ಬಹಳ ಅಗಲ ಆಟವಾಡುವ ಜಾಗ ಇರುತ್ತಿದ್ದುದು ಉಬ್ಬರದ ಕಾರಣ ಬಹಳ ಕಿರಿದಾಗಿ ಕಾಣುತ್ತಿತ್ತು. ಮಗಳಿಗೆ ಇದರ ಪರಿವೆಯೇ ಇರಲಿಲ್ಲ. ಬೇಗ ಹೋಗಿ ಕಾಲು ಒದ್ದೆ ಮಾಡಿಕೊಂಡು ಆಟ ಪ್ರಾರಂಭ ಮಾಡಿದಳು. ಅವಳ ಅಮ್ಮನೂ ಸೇರಿಕೊಂಡಳು. ಇಬ್ಬರೂ ಮರಳಿನಲ್ಲಿ ಮನೆ ಕಟ್ಟಲು ಪ್ರಾರಂಭ ಮಾಡಿದರು.
ಸಮುದ್ರದ ಅಲೆಗಳ ಜೊತೆ ಬರುವ ಸಂಜೆಯ ಗಾಳಿಯೂ ಬಿಸಿಯಾಗಿತ್ತು. ದೂರದಲ್ಲಿ ನೋಡಿದರೆ ಬೀಸಿ ಬಂದ ಗಾಳಿ ದೂರದ ಕಡಲ ಕಿನಾರೆಯ ಮೇಲೆ ನೀರಿನ ಹನಿಗಳನ್ನು ತಂದು ರಾಶಿ ಹಾಕುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಹೊತ್ತು ಅದನ್ನೇ ನೋಡುತ್ತಾ ಸುಮ್ಮನೆ ಕುಳಿತಿದ್ದೆ. ಅಷ್ಟರಲ್ಲಿ ಪಕ್ಕದ ಮರಳಿನ ಮೇಲೆ ಏನೋ ಓಡಾಡಿದ ಹಾಗಾಯ್ತು. ಸೂಕ್ಷ್ಮವಾಗಿ ಗಮನಿಸಿದಾಗ ಮರಳಿನದ್ದೇ ಬಣ್ಣದ ಸಣ್ಣ ಏಡಿಗಳು ತಮ್ಮ ಬಿಲದ ಒಳಗಿನಿಂದ ಹೊರಬಂದು ಓಡಾಡುತ್ತಿರುವುದು ಕಾಣಿಸಿತು. ಮರಳಿನಲ್ಲಿ ಸಣ್ಣ ಸಣ್ಣ ನೂರಾರು ತೂತುಗಳು ಕಾಣಿಸಿದವು. ನೀ… ಮುಂದೆ ಓದಿ...