ninna nagu
ಕವನ
ನಿನ್ನ ನಗು
ನಾನೇ ನೆಟ್ಟ ಪುಟ್ಟ ಗಿಡ
ನೋಡುನೋಡುತ್ತ ಬೆಳೆದು
ಮೈ ತುಂಬ ಹೂವ ತುಂಬಿ
ಕಣ್ಣ ಮಿಟುಕಿಸಿ ನಕ್ಕಿತು
ಬಾಂದಳದಿ ಚಂದಿರನು
ತುಂಬು ಬೆಳೆದಿಂಗಳ ಚೆಲ್ಲಿ
ನೀರ ಬುಗ್ಗೆಗಳಲಿ ತನ್ನನೇ
ಬಿಂಬಿಸಿ ನಗುತಿತ್ತು
ಗಿರಿಯ ಶೃಂಗಗಳು
ಮೇಲಕ್ಕೆ ಮುಖ ಮಾಡಿ
ಬಿಳಿ ಮೋಡಗಳ ಕರೆಯುತ್ತ
ತುಟಿಬಿರಿಸಿ ನಗುತಿತ್ತು
ಸುಳಿ ಗಾಳಿ ಸುಳಿ ಸುಳಿದು
ಕೊಳಲಿನಿಂಚರವ ಪಸರಿಸಿ
ಗಿಡಗಳಿಗೆ ಕಚಗುಳಿ ಇಟ್ಟು
ತುಂಟ ನಗು ನಗುತಿತ್ತು
ಈ ಎಲ್ಲ ನಗುವಿನಲಿ
ನಿನ್ನ ನಗು ಎಲ್ಲಿ ಇದೆ ಎಂದು
ಕಂಗಾಲಾಗಿ ಹುಡುಕಿದಾಗ
ನಗುತ ನೀನೆಂದೆ
"ಯದ್ಯದ್ವಿಭೂತಿ ಮತ್ಸತ್ವಂ"
Comments
ಉ: ninna nagu
ಉ: ninna nagu
ಉ: ninna nagu