ಅ ಎಲ್ಲಿ ಸೇರುತ್ತದೆ?

ಅ ಎಲ್ಲಿ ಸೇರುತ್ತದೆ?

Comments

ಬರಹ

ಅ ಎಲ್ಲಿ ಸೇರುತ್ತದೆ?
ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೇನ್‍ದ್ರೆ ಅ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಆಱನೇ ವಿಭಕ್ತಿ ಪ್ರತ್ಯಯ ಪ್ರಕರಣ.

ನಗರ+ಅ  = ನಗರದ
ಕಿಟಕಿ+ಅ = ಕಿಟಕಿಯ, ಮರಿ+ಅ = ಮರಿಯ
ಮನೆ+ಅ = ಮನೆಯ, ಮೞೆ+ಅ = ಮೞೆಯ
ಊರು+ಅ = ಊರಿನ, ನೀರ್(ನೀರು)+ಅ = ನೀರಿನ
ಹೀರೋ+ಅ = ಹೀರೋವಿನ, ಕೊಲಾಸೋ+ಅ = ಕೊಲಾಸೋವಿನ

ಇನ್ತಿರೆ, ನಿಯಮವೇನೆನ್ದರೆ

ಅಕಾರದೊನ್ದಿಗೆ ಕೊನೆಗೊಳ್ಳುವ ಸ್ವರಗಳಿಗೆ ದಕಾರಾಗಮ.
ಇಕಾರದೊನ್ದಿಗೆ ಕೊನೆಗೊಳ್ಳುವ ಸ್ವರಗಳಿಗೆ ಯಕಾರಾಗಮ.
ಎಕಾರದೊನ್ದಿಗೆ ಕೊನೆಗೊಳ್ಳುವ ಸ್ವರಗಳಿಗೆ ಯಕಾರಾಗಮ.
ಉಕಾರದೊನ್ದಿಗೆ ಕೊನೆಗೊಳ್ಳುವ ಸ್ವರಗಳಿಗೆ ಇನಾಗಮ.
ಒಕಾರದೊನ್ದಿಗೆ ಕೊನೆಗೊಳ್ಳುವ ಸ್ವರಗಳಿಗೆ ಇನಾಗಮ.

 
ಅಲ್ಲಿ ಎಲ್ಲಿ ಸೇರುತ್ತದೆ? ಎಂಬಲ್ಲಿನ್ದ ಮುನ್ದುವರಿಯುತ್ತ, ಮನೇಲಿ ಸರಿ ಯಾಕೆನ್ದರೆ ಹಾಗೆ ಬೞಸುವುದರಿನ್ದ ವಿಭಕ್ತಿಗೆ ಲೋಪವಾಗುವುದಿಲ್ಲ.ಕೊನೆಯ ಸ್ವರ ಒ ಆಗಿರುವನ್ಥ ಬೞಕೆಗಳಲ್ಲಿ 'ಅ' ಸೇರುವನ್ತೆಯೇ 'ಅಲ್ಲಿ'ಯೂ ಸೇರಬೇಕು.

ಇಷ್ಟೇ ಕಾಣ್ರಿ ಸದ್ಯಕ್ಕೆ ಆಱನೇ ವಿಭಕ್ತಿ ಪ್ರತ್ಯಯ ಪ್ರಕರಣ...ಮುನ್ದಿನ ಬರೆಹದಲ್ಲಿ ಇನ್ನಾ ಮಿಕ್ಕಿದ್ದನ್ನ ಹೇಳುವೆ.

ನಲುಮೆಯೊನ್ದಿಗೆ,
ಕೆಪಿ ಬೊಳುಂಬು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet