ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?

ಎರಡು ರಾಜಕೀಯ ಬೆಳವಣಿಗೆಗಳು... ಎತ್ತ ಸಾಗುತ್ತಿದ್ದೇವೆ ನಾವು?

Comments

ಬರಹ

೧) ಇಂದು ರೇಣುಕಾಚಾರ್ಯ ಸಂಪುಟ ಸೇರಿದ್ದಾರೆ...  ಶಿಸ್ತಿನ ಪಕ್ಷ ಎಂದು ಹೆಸರುವಾಸಿಯಾಗಿ(ಯಾವಗ ಎನ್ನುವ ಪ್ರಶ್ನೆ ಬೇಡ:)) ,  ಈಗ ಆ ಪದಕ್ಕೆ ಮುಂದೆ "ಅ" ಸೇರಿಸಿಕೊಂಡು (ಕು ) ಖ್ಯಾತಿ ಪಡೆಯುತ್ತ ಮುಂದೆ ಸಾಗುತ್ತಿರವ ಬಾಜಪ ದ ಯೆಡ್ಡಿ ನೇತ್ರುತ್ವದ ಸರ್ಕಾರಕ್ಕೆ.  ನರ್ಸ್ ಜಯ ಪ್ರಕರಣ,ಭಿನ್ನಮತ, ಶೊಭ ಅನ್ನುವ ಮಹಿಳೆ ಸಚಿವೆಯನ್ನು ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ ರೀತಿ,  ಬ್ಲ್ಕಾಕ್ ಮೇಲ್ ಮಾಡಿ ಮಂತ್ರಿಗಿರಿ ಪಡೆದುಕೊಂಡ ರೀತಿ ಇದೆಲ್ಲ ನೋಡಿದರೆ ಇವರು ಮಂತ್ರಿ/ಶಾಸಕ ಆಗಲು ಅರ್ಹರೆ ಅನ್ನುವ ಪ್ರಶ್ನೆ ಇಂದು ಜನರನ್ನ ಕಾಡುತ್ತಾ ಇದೆ.

೨) ಝಾರ್ಕಂಡ್ ರಾಜ್ಯದಲ್ಲಿ ಶಿಬು ಸೋರೆನ್ ಹಿಂದೆ ಬಿದ್ದಿರುವ ರಾಜಕೀಯ ಪಾರ್ಟಿಗಳು, ಅಧಿಕಾರಕ್ಕೆ ಯಾವ ಮಟ್ಟಕ್ಕೆ ಇಳೀಯಲೂ ಸಿದ್ದ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಶಿಬುಸೊರೇನ್ ರ ಮಾತು ಹೀಗಿದೆ ""My role is important for a stable and corruption free government in Jharkhand."  ಬಹುಶಃ ನಾವೆಲ್ಲ ತಿಳಿದು ಕೊಂಡಿರುವ corruption ಅನ್ನುವ ಪದದ ಅರ್ಥ ಬೇರೆಯೆ ಇದೆ ಎನ್ನಿಸ್ಸುವುದಿಲ್ಲವೇ?ಕೊಲೆಯ ಆರೋಪಿಯಾಗಿರುವ ವ್ಯಕ್ತಿ "king" ಆಗುವ ಬಗ್ಗೆ ಮಾತನಾಡುತ್ತಿದ್ದಾರೆ.

 

ಹೀಗೆ ರೇಣುಕಾಚರ್ಯ/ ಸೊರೆನ್, ಇಂಥವರು ನಮನ್ನು ಆಳುವ ಮಟ್ಟಕ್ಕೆ ರಾಜಕೀಯ ಇಳಿದಿದೆ ಎಂದರೆ ನಾವು ಎತ್ತ ನಡೆದಿದ್ದೀವೆ?  ಸಭ್ಯ ವ್ಯಕ್ತಿಗಳು ರಾಜಕೀಯದ ಕಡೆ ಮುಖ ತಿರುಗಿಸಲು ಆಗದಷ್ಟು ಹಳಸಿದೆಯಲ್ಲ? ಹೀಗೆ ಆದಲ್ಲಿ ನಮ್ಮ ದೇಶದ ಭವಿಷ್ಯವೇನು?   ನಮನ್ನಾಳುವ ವ್ಯಕ್ತಿಗಳಿಂದ ಏನು ನಿರೀಕ್ಷಿಸಲಾದೀತು?

 

ಕೊಸರು: ನಾನೊಬ್ಬ ಬಾಜಪ ಬೆಂಬಲಿಗ ಹಾಗು ಅವಕಾಶವಾದಿ ಎಂದು ಹೇಳಿಕೊಂಡು ತಿರುಗುತ್ತಿರುವ ವ್ಯಕ್ತಿ/ಗುಂಪಿನ ಗಮನ ಸೆಳೆಯಲು ಬರೆದ ಲೇಖನ ಅಲ್ಲ ಇದು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet