'ಸಂಪದ'ದ ಆಯ್ದ ಪುಟಗಳು

'ಸಂಪದ'ದ ಆಯ್ದ ಪುಟಗಳು

ಬರಹ

ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ ಸಮಯದಲ್ಲಿ ನಿರ್ವಹಣಾ ತಂಡವು ಸಂಪದ ಆರ್ಕೈವಿನಿಂದ ಹಲವು ಲೇಖನಗಳನ್ನು ಆಯ್ಕೆ ಮಾಡಿ ಕೆಳಗಿನ ಪಟ್ಟಿಗೆ ಸೇರಿಸುತ್ತಿದೆ:

http://sampada.net/articles

ಹೀಗೆ ಆಯ್ಕೆಯಾದ ಪುಟಗಳನ್ನು ಸೇರಿಸಿದ ಸದಸ್ಯರಿಗೆ ಆಯ್ಕೆಯಾದ ಪ್ರತಿ ಪುಟಕ್ಕೂ ಮೇಲಿನಂತೆ ಇ-ಮೇಯ್ಲ್ ತಲುಪುತ್ತಿದೆ. ಸಂಪದದ ಪುಟಗಳಲ್ಲಿ ಪ್ರಕಟವಾಗುವ ಕೆಲವು ಉತ್ತಮ ಹಾಗು ಸಧಬಿರುಚಿಯ ಲೇಖನಗಳನ್ನು  ಆಯ್ದು ಪಟ್ಟಿ ಮಾಡುವ ಪ್ರಯತ್ನ ಇದು. ಹೀಗೆ ಆರ್ಕೈವಿನಿಂದ ಆಯ್ಕೆಯಾದ ಲೇಖನಗಳಲ್ಲಿ ಒಂದನ್ನು ಆಯ್ದು ಸಂಪದದ ಮುಖಪುಟದಲ್ಲಿ ಪ್ರಕಟಿಸುವ ಉದ್ದೇಶವಿದೆ.

ಸೂ: ಈ ಕಾರ್ಯದಲ್ಲಿ ನೀವೂ ಪಾಲ್ಗೊಳ್ಳಬಹುದು. ಸಂಪದ ಆರ್ಕೈವಿನಲ್ಲಿ ನಿಮಗೆ ಕಂಡು ಬಂದ ಉತ್ತಮ ಲೇಖನವನ್ನು ಈ ಪುಟದಲ್ಲಿ ಪ್ರತಿಕ್ರಿಯೆ ಮೂಲಕ ಸೂಚಿಸಬಹುದು. ಅಂತಿಮ ನಿರ್ಧಾರ ಸಂಪದ ನಿರ್ವಹಣೆ ತಂಡದ್ದು. ಸಂಪದ ಆರ್ಕೈವ್ ವೀಕ್ಷಿಸಲು ಕೆಳಗಿನ ಲಿಂಕ್ ನೋಡಿ:

http://sampada.net/archive