ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪

ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪

54  nishu-mane.blogspot.com    ಮತ್ತೊಂದು   ಮಗುವಿನ   ಕುರಿತಾದ  ಬ್ಲಾಗ್  , ಫೋಟೋಗಳು , ವಿಡಿಯೋಗಳು , ಬರಹಗಳೊಂದಿಗೆ ತುಂಬ ಚೆನ್ನಾಗಿದೆ . ತಪ್ಪದೇ  ನೋಡಿ.     *****

55  chamarajsavadi.blogspot.com  ಪತ್ರಕರ್ತ ಮತ್ತು ಸಂಪದಿಗ ಚಾಮರಾಜ ಸವಡಿಯವರ   ಬ್ಲಾಗು ಇದು . ಸಂಯಮದ ಪ್ರಬುದ್ಧ ಬರವಣಿಗೆಗಳು  ಇಲ್ಲಿವೆ . ಬಾಲ್ಯದ ನೆನಪುಗಳು , ಅನುಭವಗಳು , ಪತ್ರಕರ್ತ ಜೀವನದ ಒಳನೋಟಗಳು , ವಿಶಿಷ್ಟ ಚೇತನೆ ಮಗಳ ಕುರಿತು ಮನ ಕಲಕುವ ಬರಹಗಳು  ಇಲ್ಲಿವೆ.   ****

56. matumanikya.blogspot.com  ಇದೂ ಅವರದೇ ಬ್ಲಾಗು , ಇಲ್ಲೂ ಕೆಲವು ಬರಹಗಳಿವೆ .

57  roopashriblog.blogspot.com    ಪರಿಸರಗಣಪತಿ ಬಗ್ಗೆ ಮಾಹಿತಿ , ವೀಡಿಯೋ ,  ಡಿಸೈನರ್ ಕವನಗಳು ,  ಅಮೇರಿಕಾದಲ್ಲಿ  ವರಮಹಾಲಕ್ಷ್ಮಿ    ವ್ರತಾಚರಣೆಯ   ಫೋಟೋಗಳು , ಮಂಡ್ಯದ ಹತ್ತಿರ ಇರುವ ಹೊಸಹೊಳಲು ಊರಿನ  ಹೊಯ್ಸಳ ಶೈಲಿಯ ದೇವಾಲಯದ ಚೆತ್ರಗಳು , ಟಂಗ್ ಟ್ವಿಸ್ಟರ್ ಗಳು , ಬಾವ್ಬಾಬ್  (  ಕಲ್ಪವೃಕ್ಷ ಎಂದು ಕರೆಸಿಕೊಳ್ಳುವ   ದೊಡ್ದ  ಬೊಡ್ಡೆಯ   ಮರ - ಸವಣೂರಿನಲ್ಲೂ ಇದೆ  . ಕೃಷ್ಣ  ತಂದದ್ದು  ಅಂತ ಕೇಳಿದ್ದೀನಿ)   ಈ ಮರದ ಬಗ್ಗೆ ವಿಡಿಯೋ  ಕೂಡ ಇದೆ . ವಿಚಿತ್ರ  ಆಕಾರದ ಮರಗಳ   ಫೋಟೋಗಳು , ಮರಳಿನಲ್ಲಿ ಕಲಾಕೃತಿಗಳ ಫೋಟೋಗಳು , , ರುದ್ರಾಕ್ಷಿಗಳ  ಬಗ್ಗೆ ಲೇಖನ ,  ಬಣ್ಣಬಣ್ಣ್ದ ದ ಪಣತಿಗಳು , ನೀವು ಎಲ್ಲೂ  ಓದಿ/ನೋಡಿ/ಕೇಳಿರಲಿಕ್ಕಿಲ್ಲದ  ಬಗೆಬಗೆಯ  ಗಣಪನ ಚಿತ್ರಗಳು  .     *****       .       ಮುಂದಿನ  ಒಳ್ಳೆಯ   ಬ್ಲಾಗ್   ಕೂಡ ಇವರದೇ

58  puttiprapancha.blogspot.com         ಮಕ್ಕಳ ಬಾಲಲೀಲೆಗಳನ್ನು  ಕಂಡು ಸಂತೋಶಪಡದವರಾರು ?    ಮಗಳ  ಆಟಪಾಟ ನಲಿವುಗಳನ್ನು  ಇಲ್ಲಿ ದಾಖಲಿಸಿದ್ದಾರೆ   *****    ಮಕ್ಕಳ  ಕುರಿತಾದ   ಇಂಥ  ಇತರ    ಬ್ಲಾಗಗಳಿಗೆ ಕೊಂಡಿಯನ್ನೂ  ಕೊಟ್ಟಿದ್ದಾರೆ .
59   puttanaputa.blogspot.com  ರಾಶಿ ರಾಶಿ ಶಿಶುಸಾಹಿತ್ಯ -   ಚೆನ್ನಾಗಿವೆ    *****   
60.  balavana.wordpress.com   ಮಕ್ಕಳಿಗಾಗಿ ಕತೆಗಳು  , ಸುಪ್ರಸಿದ್ಧ  ಶಿಶುಕವನಗಳು ,  ಮಕ್ಕಳಿಗಾಗಿ ಸ್ತೋತ್ರ (!),  ಯೂಟ್ಯೂಬ್  ನಲ್ಲಿ  ಒಳ್ಳೊಳ್ಳೆಯ   ಕನ್ನಡ  ಹಾಡುಗಳ   ಕೊಂಡಿಗಳು   ಇಲ್ಲಿವೆ . ಒಂದು ಸಲ ತಿರುವಿ ಹಾಕಿಬಿಡಿ!   ****  

61.  bukwrm.wordpress.com  ಮಕ್ಕಳ ಪುಸ್ತಕಗಳ   ಪರಿಚಯ - ಮುಖಪುಟದ ಚಿತ್ರಗಳು ಮಾತ್ರ  ಏಕೋ ?    ಕಡಿಮೆ ಪೋಸ್ಟ್ ಗಳು   **  

62   vedasudhe.blogspot.com

 ದೇಶದ  ಅಧ್ಯಾತ್ಮಿಕ  ಪರಂಪರೆ , ಸನಾತನ ಮೌಲ್ಯಗಳು ,   ವೇದಗಳು   ಅಭಿರುಚಿ  , ಅಭಿಮಾನ ಇರುವ ಸಂಪದಿಗ     ಹರಿಹರಪುರ ಶ್ರೀಧರ್ ಅವರ ಬ್ಲಾಗ್  , ಅಶ್ವಮೇಧ ಯಾಗ ಶಬ್ದದಲ್ಲಿನ ಅಶ್ವ   ಕುದುರೆ ಅಲ್ಲವಂತೆ  , ಇಂದ್ರಿಯಗಳಂತೆ   ಅವುಗಳನ್ನ  ಹತೋಟಿಯಲ್ಲಿಡುವುದು    ಅಂತ  ಲೂ   ಇನ್ನೊಂದೆಡೆ  ಅಶ್ವ ಎಂದರೆ   ರಾಷ್ಟ್ರ  ಅಂತಲೂ   ಅಶ್ವಮೇಧ  ಅಂದರೆ  ರಾಷ್ಟ್ರಗಳನ್ನು ಒಗ್ಗೂಡಿಸುವುದು  ಅಂತಲೂ ಹೇಳಿದ್ದಾರೆ. ಆದರೆ ಅಶ್ವಮೇಧಯಾಗದಲ್ಲಿ ಕುದುರೆಯ  ಪಾತ್ರ  ಇದ್ದೇ ಇದೆಯಲ್ಲ ? ರಾಜರುಗಳ  ಕತೆಗಳಲ್ಲಿ , ಅಶ್ವಮೇಧ ಯಾಗದ ವಿಧಿವಿಧಾನಗಳಲ್ಲಿ ?  ಇದು ನನ್ನ ಪ್ರಶ್ನೆ .
  "ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ" ಎಂದು  ಇಲ್ಲಿನ ಬರಹವೊಂದರಲ್ಲಿ   ಲೇಖಕರು ಹೇಳಿದ್ದಾರೆ .

ಈ ಬ್ಲಾಗಿನಲ್ಲಿ    ಈವರೆಗೆ   ವೇದಗಳ   ಬಗೆಗೆ   ಅಭಿಮಾನ   ವ್ಯಕ್ತವಾಗಿದೆ    , ವೇದಗಳ  ಬಗೆಗೆ ಏನೂ ಮಹತ್ವದ ಮಾಹಿತಿ    ಬಂದಿಲ್ಲ .  ಮುಂದೆ   ಬರಬಹುದು  ಎಂದು ಆಶಿಸೋಣ .


Rating
No votes yet

Comments