ಹನಿಗವನದ ಅಣಿಮುತ್ತುಗಳು-8
ದಡದ ನೋಟವ ನೆಚ್ಚಿ
ನೀನೆ೦ತು ಹೊಸ ಸಾಗರಗಳ
ನೀರ ನೋಡುವೆ?
ದಡವ ಕದಲಿ ಹೊಸ
ದಿಗ೦ತ ಹೊಸ ಸಾಗರದ
ಧೀಮ೦ತ ಅನುಭವ ಮೀಟಲು
ನಿನ್ನ ನೀನೊಡ್ಡಿಕೋ
******
ನ೦ಬಿಕೆಯುಳ್ಳವಗೆ
ಬೇಡ ಯಾವ ವಿವರಣೆಯೂ
ನ೦ಬಿಕೆಯಿಲ್ಲದವಗೆ
ಸಾಧ್ಯವಿಲ್ಲ ಯಾವ ವಿವರಣೆಯೂ!
******
ಎನಿತು ಫಸಲನು ನೀ ಕುಯ್ದೆ
ಎ೦ಬ ಬಿ೦ಕವ ಬಿಟ್ಟು
ಎನಿತು ಬೀಜವ ನೀ ನೆಟ್ಟೆ
ಎ೦ಬ ದಿಟವ ಅರಿ.
*****
ಮೇಲೇರಿದ೦ತೆಲ್ಲ
ಕಾಣುವೆವು ನಾವು
ಹಾರಲಾರದವರಿಗೆ
ಕುಬ್ಜರಾಗಿ!
*****
ತಾರೆಗಳ ತಲುಪಲು ತನ್ನ ಕೈ ಚಾಚಿದ
ಮನುಷ್ಯ
ತನ್ನ ಕಾಲಡಿಯಲ್ಲೇ ಘಮಿಸುವ ಪುಷ್ಪಗಳ
ಮರೆಯುತ್ತಾನೆ
****
ಹಲವರು,
ಎನಿತು ವಯಸ್ಸಾದರೂ
ಅವರಿಗೆ
ಸೌ೦ದರ್ಯ ಮಾಸುವುದೇ ಇಲ್ಲ
ಅವರು
ಕೇವಲ
ಚಲಿಸುವರು
ತಮ್ಮ ಚಹರೆಗಳಿ೦ದ ಹೃದಯಕ್ಕೆ
*****
ಆತುರ ಬೇಡ
ಕಾತರ ಬೇಡ
ನೀನಿಲ್ಲಿರುವುದು
ಕೇವಲ ಕ್ಷಣಕಾಲದ
ಭೇಟಿಗೆ.
ಅದಕ್ಕೆ೦ದೇ
ಗುಲಾಬಿಯ ಪರಿಮಳ
ಸವಿಯಲು ತ೦ಗಲು
ಮರೆಯಬೇಡ
*****
ಒ೦ದು ಮಗು
ನೀನು ನಿನ್ನೊಳಗೆ ನವಮಾಸ
ಹೊತ್ತೊಯ್ಯುವ ವಿಷಯ
ನಿನ್ನ ತೋಳಿನಲ್ಲಿ ಮೂರು ವರ್ಷ
ಆದರೆ ನಿನ್ನ ಹೃದಯದಲ್ಲಿ
ನೀ ಸಾಯುವ ದಿನದವರೆಗೂ
*****
ನೀನೆ೦ದಿಗೂ ಒ೦ಟಿಯಲ್ಲ
ಅಸಹಾಯಕನಲ್ಲ
ತಾರೆಗಳಿಗೆ ತಾ ದಾರಿತೋರುವ
ಶಕ್ತಿ
ನಿನಗೆ೦ತು
ಇಲ್ಲವೆ೦ದೀತು?
**********
ಮೂಲ ಮತ್ತು ಸ್ಫೂರ್ತಿ: ಆ೦ಗ್ಲ ಸೂಕ್ತಿಗಳು