ಮಾರಾಶ್ಟ್ರದ ’ನಾಂದೇಡ್’ಗೆ ಆ ಹೆಸರು ಹೇಗೆ ಬಂತು?

ಮಾರಾಶ್ಟ್ರದ ’ನಾಂದೇಡ್’ಗೆ ಆ ಹೆಸರು ಹೇಗೆ ಬಂತು?

 {ಇದು ನಾನು ನನ್ನ ಎಣಿಕೆಯಿಂದ ಮತ್ತು ದ್ರಾವಿಡ ನುಡಿಗಂಟಿನ ನೆರವಿನಿಂದ ಕೊಟ್ಟಿರುವ ವಿವರಣೆ. ಇದಕ್ಕಿಂತ ಬೇರೆ ವಿವರಣೆ ಇದ್ದರೆ ಹಂಚಿಕ್ಕೊಳ್ಳಿ..ನನ್ನಿ }


 ಮೊದಲಿಗೆ ನಾಂದೇಡ್ ಅಚ್ಚಗನ್ನಡದ ಹೆಸರೇ.. ಹೇಗೆ?.. ನಾದು= ಒದ್ದೆಯಾಗು, ತಣ್ಣಗಾಗು ಎಂಬ ತಿರುಳಿನಲ್ಲಿ ಹೊಸಗನ್ನಡದಲ್ಲಿ ಬಳಕೆಯಲ್ಲಿದೆ. ಎತ್ತುಗೆಗಾಗಿ: ರಾಗಿ/ಗೋದಿ ಹಿಟ್ಟನ್ನು ನೀರಿನಲ್ಲಿ ನಾದು ಕಲಸಿರಿ.  ಇದಕ್ಕೆ ನಂಟಿರುವ ಬಳಕೆಯಲ್ಲಿರುವ ಇತರೆ ಪದಗಳು :- ನೆನೆ, ನನೆ, ನೆಂದು


Ka. nāndu to make damp, cool, etc., liquefy, dissolve, melt  http://dsal1.uchicago.edu/cgi-bin/philologic/getobject.pl?c.1:1:1046.burrow


Ka. pāḍi settlement, hamlet, village  http://dsal1.uchicago.edu/cgi-bin/philologic/getobject.pl?c.1:1:1480.burrow


ನಾಂದು+ಪಾಡಿ = ನಾಂದವಾಡಿ --> ನಾಂದವಾಡ --> ನಾಂದೇಡ( Naanded)...ನಾಂದುನೇ ಏಕೆ?..ಗೂಗಲ್(maps.google.com) ಪಟವನ್ನು ನೋಡಿದರೆ ಗೊತ್ತಾಗುತ್ತದೆ, ನಾಂದೇಡ್ ಇರುವುದು ಗೋದಾವರಿ ಹೊಳೆಯದ ದಡದಲ್ಲಿ ಅಲ್ಲದೆ ಪ್ರದೇಶದಲ್ಲಿ ಬಿಸಿಲು/ಒಣಗಾಳಿ ಜಾಸ್ತಿ. ಅಂದರೆ ಒಣಪ್ರದೇಶದಿಂದ ಸುತ್ತುವರೆದಿದ್ದರೂ ಹೊಳೆಯ ದಡದಲ್ಲಿ ಇರುವದರಿಂದ ಇಲ್ಲಿ ತಣ್ಣಗೆ ಇರಬಹುದು.  ಇದೂ ಅಲ್ಲದೆ ನಾಂದೇಡ್ ಹತ್ತಿರವೆ ’ಪೆಣ್ಣೂರು’(ಹೆಣ್ಣೂರು) ಇದೆ. ಮರಾಟಿಯಲ್ಲಿ ಇದು ’ಪೇಣೂರ್’ ಆಗಿರಬೋದು. ಮರಾಟಿಯಲ್ಲಿ ’ಎ’ ಇಲ್ಲ ...ಏ ಮಾತ್ರ ಇದೆ. 

Rating
No votes yet

Comments